‘ಆದಾಯ ಹೆಚ್ಚಳಕ್ಕಾಗಿ ಒಂದು ಲೀಟರ್ ಹಾಲಿಗೆ ₹ 5 ಹೆಚ್ಚಿಸುವಂತೆ ಹೈನುಗಾರರು ಬೇಡಿಕೆ ಇಟ್ಟಿದ್ದಾರೆ’ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ. ಹೈನುಗಾರರ ಆದಾಯ ಹೆಚ್ಚಿಸಬೇಕಿದ್ದರೆ ಹೈನುಗಾರಿಕೆಯ ವೆಚ್ಚವನ್ನು ಕಡಿಮೆಗೊಳಿಸಲು ಕ್ರಮ ಕೈಗೊಳ್ಳಬೇಕು. ಪಶು ಆಹಾರಗಳ ಬೆಲೆಯನ್ನು ಕಡಿಮೆ ಮಾಡಬೇಕು. ರೈತರ ಹೊರೆಯನ್ನು ಇಳಿಸಬೇಕು. ಅದನ್ನು ಬಿಟ್ಟು ರೈತರ ಹೊರೆಯನ್ನು ಸಾಮಾನ್ಯ ಜನರ ಹೆಗಲಿಗೆ ವರ್ಗಾಯಿಸುವುದು ಜನವಿರೋಧಿ ಕ್ರಮ ಎಂದು ಎಸ್‌ಯುಸಿಐ ರಾಜ್ಯ ಸಮಿತಿ ಕಾರ್ಯದರ್ಶಿ ಕೆ. ಉಮಾ ಖಂಡಿಸಿದ್ದಾರೆ.