ಮೈಸೂರು: ಏರ್ ಇಂಡಿಯಾ ಸಂಸ್ಥೆಯು, ಮೈಸೂರು–ಬೆಂಗಳೂರು ನಡುವೆ ಜೂನ್ 7ರಿಂದ ವಿಮಾನಯಾನ ಸೇವೆ ಆರಂಭಿಸಲಿದೆ.

ಮಂಗಳವಾರ ಹೊರತುಪಡಿಸಿ, ಉಳಿದೆಲ್ಲ ದಿನ ವಿಮಾನ ಹಾರಾಟ ನಡೆಸಲಿದೆ. ಮೈಸೂರಿನಿಂದ ಮಧ್ಯಾಹ್ನ 12ಕ್ಕೆ ಹೊರಡುವ ವಿಮಾನ 1 ಗಂಟೆಗೆ ಬೆಂಗಳೂರು ತಲುಪಲಿದೆ. ಬೆಂಗಳೂರಿನಿಂದ ಬೆಳಿಗ್ಗೆ 10.30ಕ್ಕೆ ಹೊರಟು 11.25ಕ್ಕೆ ಮೈಸೂರು ತಲುಪಲಿದೆ ಎಂದು ಮೈಸೂರು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ. ಟಿಕೆಟ್ ದರ ₹ 1,500 ಇದೆ.

‘ಉಡಾನ್–3’ ಯೋಜನೆಯಡಿ ಮೈಸೂರು–ಚೆನ್ನೈ ಮಾರ್ಗದಲ್ಲಿ ಈಗಾಗಲೇ ಟ್ರೂಜೆಟ್ ಸಂಸ್ಥೆಯ ವಿಮಾನ ಕಾರ್ಯನಿರ್ವಹಿಸುತ್ತಿದೆ. ಮೈಸೂರಿನಿಂದ ಕೊಚ್ಚಿ, ಬೆಳಗಾವಿ, ಗೋವಾ ಮತ್ತು ಹೈದರಾಬಾದ್ಗೆ ವಿಮಾನ ಸೇವೆ ಕಲ್ಪಿಸಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.