ಬೆಂಗಳೂರು: ದೇಶದಾದ್ಯಂತ ಜಲ ಪುನರುಜ್ಜೀವನಕ್ಕೆ ಕೈಗೊಂಡ ಕಾರ್ಯಕ್ರಮಗಳಿಗೆ ‘ದಿ ಆರ್ಟ್ ಆಫ್ ಲಿವಿಂಗ್’ ಸಂಸ್ಥೆ ರಾಷ್ಟ್ರೀಯ ಪ್ರಶಸ್ತಿ ಪಡೆದಿದೆ.

ದೆಹಲಿಯ ವಿಜ್ಞಾನಭವನದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಜಲಶಕ್ತಿ ಸಚಿವ ಸಿ.ಆರ್. ಪಾಟೀಲ್ ಅವರ ಉಪಸ್ಥಿತಿಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

‘ನದಿಗಳ ಪುನಶ್ಚೇತನ, ಅಂತರ್ಜಲ ಮರುಪೂರಣ ಮತ್ತು ಎಲ್ಲಾ ಹವಾಮಾನಗಳಿಗೂ ಒಗ್ಗಿಕೊಳ್ಳುವಂತಹ ಕೃಷಿಯಲ್ಲಿ ‘ದಿ ಆರ್ಟ್ ಆಫ್ ಲಿವಿಂಗ್’ ಸಂಸ್ಥೆಯ ವೈಜ್ಞಾನಿಕ ಆಧರಿತ ಪ್ರಯತ್ನಗಳನ್ನು ಕೇಂದ್ರ ಸರ್ಕಾರದ ಜಲಶಕ್ತಿ ಸಚಿವಾಲಯವು ಗುರುತಿಸಿ ಉತ್ತಮ ಸರ್ಕಾರೇತರ ಸಂಸ್ಥೆ ಮತ್ತು ಬೆಸ್ಟ್ ಸಿವಿಲ್ ಸೊಸೈಟಿ ವರ್ಗದಲ್ಲಿ ಪ್ರಶಸ್ತಿ ನೀಡಿದೆ’ ಎಂದು ಪ್ರಕಟಣೆ ತಿಳಿಸಿದೆ.

‘ಶ್ರೀ ಶ್ರೀ ರವಿಶಂಕರ್ ಅವರ ಮಾರ್ಗದರ್ಶನದಲ್ಲಿ ‘ದಿ ಆರ್ಟ್ ಆಫ್ ಲಿವಿಂಗ್’ನ ಜಲ ಸಂರಕ್ಷಣಾ ಯೋಜನೆಯು ದೇಶದಲ್ಲೇ ಸಮುದಾಯದ ಸಹಯೋಗದೊಂದಿಗೆ ನಡೆಸಲಾಗುತ್ತಿರುವ ಪರಿಸರದ ಚಳವಳಿಯಾಗಿ ಬೆಳೆದಿದೆ. ಸಂಸ್ಥೆಯು 1.05 ಲಕ್ಷ ಅಂತರ್ಜಲ ಮರುಪೂರಣ ರಚನೆಗಳನ್ನು ನಿರ್ಮಿಸಿದೆ. ಇದರಿಂದ 174 ಬಿಲಿಯನ್ ಲೀಟರ್ ಗಳಷ್ಟು ಜಲ ಉಳಿತಾಯವಾಗಿದೆ. 75 ನದಿ, ಉಪನದಿಗಳನ್ನು ಸಂಸ್ಥೆಯು ಪುನರುಜ್ಜೀವನಗೊಳಿಸಿದೆ. 100 ದಶಲಕ್ಷ ಗಿಡಗಳನ್ನು ನೆಟ್ಟಿದೆ. ನಮಾಮಿ ಗಂಗೆ ಯೋಜನೆ ಅಡಿಯಲ್ಲಿ 4,500 ರೈತರಿಗೆ ತರಬೇತಿ ನೀಡಿದೆ. 3,500 ಹೆಕ್ಟೇರ್ ಅನ್ನು ಇದೇ ಯೋಜನೆಯಡಿಯಲ್ಲಿ ನೈಸರ್ಗಿಕ ಕೃಷಿಗೆ ಮಾರ್ಪಡಿಸಿದೆ’ ಎಂದು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.