ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರು: ಹೊಸ ನೀತಿಗೆ ಡಿಸಿಎಂ ಸಮ್ಮತಿ; ವಾಣಿಜ್ಯ ಹೋರ್ಡಿಂಗ್‌ ನಿಷೇಧ ರದ್ದು

Published 18 ಜೂನ್ 2024, 0:00 IST
Last Updated 18 ಜೂನ್ 2024, 0:00 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ವಾಣಿಜ್ಯ ಜಾಹೀರಾತು (ಹೋರ್ಡಿಂಗ್‌) ಮೇಲಿದ್ದ ನಿಷೇಧವನ್ನು ಆರು ವರ್ಷಗಳ ನಂತರ ರದ್ದುಪಡಿಸಲು ಬಿಬಿಎಂಪಿ ಸಜ್ಜಾಗಿದೆ.

ಹೊರಾಂಗಣದಲ್ಲಿ ಜಾಹೀರಾತಿಗೆ ಪ್ರೇರಣೆ ನೀಡುವ ಬಿಬಿಎಂಪಿಯ ಹೊಸ ನೀತಿಗೆ ಸಚಿವ ಸಂಪುಟ ಸಮ್ಮತಿ ನೀಡಿದೆ. ಇನ್ನೊಂದು ವಾರದಲ್ಲಿ ನೀತಿಯನ್ನು ಸರ್ಕಾರ ಅಧಿಸೂಚಿಸುವ ನಿರೀಕ್ಷೆ ಇದೆ.

ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಹೊರಾಂಗಣ ಜಾಹೀರಾತು ನೀತಿಯನ್ನು ಡಿ.ಕೆ. ಶಿವಕುಮಾರ್‌ ಅವರ ಕಚೇರಿಗೆ ಸಲ್ಲಿಸಿದ್ದರು. ಡಿ.ಕೆ. ಶಿವಕುಮಾರ್‌ ಈ ನೀತಿಗೆ ಜೂನ್‌ 14ರಂದು ಸಮ್ಮತಿ ನೀಡಿದ್ದರು ಎಂದು ಮೂಲಗಳು ತಿಳಿಸಿವೆ.

ಹೊರಾಂಗಣ ಜಾಹೀರಾತು ನೀತಿಯನ್ನು ಮತ್ತೆ ಜಾರಿಗೆ ತರಬೇಕು ಎಂಬ ಅಭಿಲಾಷೆಯನ್ನು ಡಿಸಿಎಂ ಶಿವಕುಮಾರ್ ಹೊಂದಿದ್ದರು. ಇದರಿಂದ ಪಾಲಿಕೆಗೆ ಆದಾಯ ಹೆಚ್ಚಾಗುತ್ತದೆ ಎಂದೂ ಹೇಳಿದ್ದರು. ಈ ಜಾಹೀರಾತು ಹಕ್ಕುಗಳನ್ನು ನೀಡುವುದರಿಂದ ಬಿಬಿಎಂಪಿ 2024–25ನೇ ಸಾಲಿನಲ್ಲಿ ₹500 ಕೋಟಿ ಆದಾಯ ಗಳಿಸುವ ನಿರೀಕ್ಷೆ ಇದೆ.

ಹೊಸ ಜಾಹೀರಾತು ನೀತಿಯಿಂದ 800 ಚದರ ಅಡಿಯಷ್ಟು ದೊಡ್ಡದಾದ ಜಾಹೀರಾತು ಫಲಕಗಳನ್ನು (ಹೋರ್ಡಿಂಗ್ಸ್‌) ವ್ಯಕ್ತಿಯೊಬ್ಬರು ಹಾಕಿಕೊಳ್ಳಬಹುದು. ಜಂಕ್ಷನ್‌ ಅಥವಾ ಇತರೆ ಪ್ರದೇಶಗಳಲ್ಲಿ 3,000 ಚದರ ಅಡಿಯಷ್ಟು ಅಳವಡಿಸಿಕೊಳ್ಳಬಹುದಾಗಿದೆ. 100 ಮೀಟರ್‌ಗೆ ಒಂದು ಹೋರ್ಡಿಂಗ್‌ ಅಳವಡಿಸಲು ಅವಕಾಶವಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT