ಭಾನುವಾರ, ಜೂನ್ 13, 2021
26 °C

ಆಹಾರ–ಜೀವನಶೈಲಿಯ ಸಮ್ಮಿಶ್ರಣ ಹೊಸ ವೈರಸ್: ಡಾ.ಶ್ರೀನಿವಾಸ ಕಕ್ಕಿಲ್ಲಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಇತ್ತೀಚಿನ ಹೊಸ ಆಹಾರ ಪದ್ಧತಿ ಹಾಗೂ ಹೊಸ ಜೀವನಶೈಲಿಯ ಸಮ್ಮಿಶ್ರಣವೇ ಈಗ ಬಿಗಡಾಯಿಸಿರುವ ಹೊಸ ವೈರಸ್’ ಎಂದು ಖ್ಯಾತ ವೈದ್ಯ ಶ್ರೀನಿವಾಸ ಕಕ್ಕಿಲ್ಲಾಯ ತಿಳಿಸಿದರು.

ಎಂ.ಎಸ್.ಕಣ್ಣನ್ ಸ್ಮಾರಕ ಟ್ರಸ್ಟ್‌, ನವಕರ್ನಾಟಕ ಪ್ರಕಾಶನ ಹಾಗೂ ಹೊಸತು ವತಿಯಿಂದ ಆನ್‌ಲೈನ್ ಮೂಲಕ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ಕೊರೊನಾ ಹೆದರ ದಿರೋಣ’ ಕುರಿತು ಉಪ‍ನ್ಯಾಸ ನೀಡಿದರು.

‘ಸಣ್ಣ ವಯಸ್ಸಿನವರು, ಯಾವುದೇ ಕಾಯಿಲೆ ಇಲ್ಲದಿರುವವರು ಮೃತಪಡು ತ್ತಿದ್ದಾರೆ. ಅವರ ಆಧುನಿಕ ಆಹಾರ ಕ್ರಮ ದಿಂದಲೂ ಈ ಪರಿಸ್ಥಿತಿ ಎದುರಾಗಿರಬಹುದು. ಒಳ್ಳೆಯ ಜೀವನಶೈಲಿ ಹಾಗೂ ಆಹಾರ ಪದ್ಧತಿಯಲ್ಲಿ ಸೋಂಕು ವಿರಳ. ಅನಾರೋಗ್ಯ ಜೀವನಶೈಲಿಯಿಂದ ದುಸ್ಥಿತಿ ಎದುರಾಗಿದೆ’ ಎಂದರು.

‘ಕೊರೊನಾ ಸೋಂಕು ಬಾವಲಿ ಯಿಂದ ಹರಡಿದೆ ಎನ್ನಲಾಗಿದೆ. ಚರಕ ಸಂಹಿತೆಯ ವೈದ್ಯಕೀಯ ಶಾಸ್ತ್ರದಲ್ಲಿ ಆರೋಗ್ಯಕ್ಕೆ ಹಲವು ವನ್ಯಜೀವಿಗಳ ಮಾಂಸ, ಮೊಟ್ಟೆ ಸೇವನೆಯ ಉಲ್ಲೇಖ ಇದೆ. ಇದಾದ ಸಾವಿರಾರು ವರ್ಷಗಳಲ್ಲಿ ಆಹಾರ ಕ್ರಮ ಬದಲಾಗಿದೆ. ಆದರೆ, ವನ್ಯಜೀವಿ ಆಹಾರ ಹುಡುಕುವ ಪ್ರವೃತ್ತಿ ಇನ್ನೂ ಇದೆ’ ಎಂದು ಹೇಳಿದರು. 

‘ದೇಶದ ಅಂಕಿ ಅಂಶಗಳನ್ನು ಗಮನಿಸಿದಾಗ ಕೊರೊನಾದಿಂದ ಹೆಚ್ಚು ಸಮಸ್ಯೆಗೆ ಒಳಗಾದವರು ಆರ್ಥಿಕ ಸ್ಥಿತಿವಂತರು, ಮಧ್ಯಮ ವರ್ಗ ಹಾಗೂ ದೇಹದ ತೂಕ ಹೆಚ್ಚು ಇರುವವರು. ಮೊದಲೆಲ್ಲ ಮಾಂಸಗಳನ್ನೇ ಯಥೇಚ್ಛ ವಾಗಿ ಸೇವಿಸಲಾಗುತ್ತಿತ್ತು. ಕೆಲ ಶತಮಾನ ಗಳಿಂದ ಧಾನ್ಯಗಳನ್ನು ತಿನ್ನುತ್ತಿದ್ದೇವೆ’.

‘ಈ ಬಳಿಕವೇ ದೇಹದ ತೂಕ ಹೆಚ್ಚುವುದು, ಬೊಜ್ಜು ಸೇರಿದಂತೆ ಹೊಸ ಸಮಸ್ಯೆಗಳು ಕಾಣಿಸಿಕೊಂಡಿವೆ. ಧಾನ್ಯಗಳನ್ನು ಅವಲಂಬಿಸಿ ಅನೇಕ ನಾಗರೀಕತೆಗಳು ಹುಟ್ಟಿಕೊಂಡವು. ಈಗ ಆಧುನಿಕ ಕಾಯಿಲೆಗಳು ಹುಟ್ಟಿ ಕೊಂಡಿವೆ’ ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು