ಬೆಂಗಳೂರು: ನಗರದಲ್ಲಿ ಹೊಸ ವರ್ಷಾಚರಣೆ ಸಂಭ್ರಮ ಮನೆ ಮಾಡಿದೆ. ಬ್ರಿಗೇಡ್ ರಸ್ತೆ, ಎಂ.ಜಿ.ರಸ್ತೆ, ಚರ್ಚ್‌ಸ್ಟ್ರೀಟ್, ಕೋರಮಂಗಲ, ವೈಟ್‌ಫೀಲ್ಡ್ ಹಾಗೂ ಇತರೆಡೆ ಹೊಸ ವರ್ಷ ಸ್ವಾಗತಕ್ಕೆ ಜನರು ಉತ್ಸುಹಕರಾಗಿದ್ದಾರೆ.
ಬ್ರಿಗೇಡ್ ರಸ್ತೆಯಲ್ಲಿ ಶನಿವಾರ ನಿಂತುಕೊಂಡಿದ್ದ ಯುವತಿಯೊಬ್ಬರು, ‘ಉಚಿತ ಅಪ್ಪುಗೆ’ ಫಲಕ ಹಿಡಿದುಕೊಂಡು ಗಮನ ಸೆಳೆದರು.
ತಮ್ಮನ್ನು ಉಚಿತವಾಗಿ ಅಪ್ಪಿಕೊಳ್ಳಬಹುದೆಂದು ಯುವಕ–ಯುವತಿಯರಿಗೆ ಆಹ್ವಾನ ನೀಡುತ್ತಿದ್ದರು. ಫಲಕ ನೋಡಿದ ಯುವಕ–ಯುವತಿಯರು ಒಬ್ಬೊಬ್ಬರಾಗಿ ಅಪ್ಪುಗೆ ನೀಡಲಾರಂಭಿಸಿದ್ದರು.
ಸ್ಥಳಕ್ಕೆ ಬಂದ ಪೊಲೀಸರು, ಸರದಿಯಲ್ಲಿ ನಿಂತಿದ್ದ ಯುವಕ– ಯುವತಿಯರನ್ನು ಚದುರಿಸಿದರು. ಫಲಕ ಹಿಡಿದಿದ್ದ ಯುವತಿಗೂ ಬುದ್ದಿವಾದ ಹೇಳಿ, ಸ್ಥಳದಿಂದ ಕಳುಹಿಸಿದರು. ಯುವತಿ, ಸ್ನೇಹಿತರ ಜೊತೆ ಬ್ರಿಗೇಡ್ ರಸ್ತೆಗೆ ಬಂದಿದ್ದರು. ಇವರ ಹೆಸರು ಗೊತ್ತಾಗಿಲ್ಲ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.