ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನೋವು ಕೊಡದ ಆಡಳಿತವೇ ರಾಮರಾಜ್ಯ’

ರಾಘವೇಶ್ವರ ಭಾರತೀ ಸ್ವಾಮೀಜಿ ಅಭಿಮತ
Last Updated 15 ಡಿಸೆಂಬರ್ 2019, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ರಾಮರಾಜ್ಯ ಪರಿಕಲ್ಪನೆ ಸಾಕಾರಗೊಳಿಸುವುದೆಂದರೆ ಯಾರಿಗೂನೋವು ಕೊಡದ ಆಡಳಿತ ನೀಡುವುದು. ರಾಮಾಯಣಕ್ಕೆ ಜೀವಗಳ ಪಾಪ ಕಳೆಯುವ ಅಪೂರ್ವ ಶಕ್ತಿ ಇದೆ’ ಎಂದು ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿಅಭಿಪ್ರಾಯಪಟ್ಟರು.

ಗಿರಿನಗರದ ರಾಮಾಶ್ರಮದಲ್ಲಿಭಾನುವಾರ ನಡೆದ ಧಾರಾ ರಾಮಾಯಣಪ್ರವಚನದ ಮಹಾಮಂಗಲದ ಧರ್ಮಸಭೆಯಲ್ಲಿ ಆಶೀರ್ವಚನ ನೀಡಿದರು.

‘ರಾಮಾಯಣ ಕಲ್ಪನೆಯಲ್ಲ ಇತಿಹಾಸ. ಭಾರತೀಯ ವಿದ್ಯೆಯ ಸಮಗ್ರ ಚಿತ್ರಣ ಅದು ಒದಗಿಸುತ್ತದೆ. ಕರ್ತವ್ಯ
ದಲ್ಲಿ ಪೂರ್ಣತೆ ಕಾಣುವುದೇ ಶ್ರೀರಾಮ ನಮಗೆ ನೀಡಿದ ಆದರ್ಶ’ ಎಂದರು.

‘ಭರತ ಸಂಸ್ಕೃತಿಗೆ ರಾಮಾಯಣ, ಮಹಾಭಾರತ ಹಾಗೂ ಭಾಗವತವನ್ನು ಆಧಾರವಾಗಿಟ್ಟುಕೊಂಡು ವಿಷ್ಣುಗುಪ್ತ ವಿಶ್ವವಿದ್ಯಾಪೀಠ ಸ್ಥಾಪಿಸಲಾಗುತ್ತಿದೆ. ಇದು ತಕ್ಷಶಿಲೆಯ ಮಾದರಿಯಲ್ಲಿ ವಿಶ್ವಕ್ಕೆ ಬೆಳಕು ಹರಿಸಲಿದೆ’ ಎಂದರು.

ವೈಭವದ ಪಟ್ಟಾಭಿಷೇಕ:ರಾಘವೇಶ್ವರ ಭಾರತೀ ಸ್ವಾಮೀಜಿಆರು ತಿಂಗಳಿಂದ ನಡೆಸುತ್ತಿದ್ದ ಧಾರಾ ರಾಮಾಯಣದ ಮಹಾಮಂಗಲದ ಅಂಗವಾಗಿ ಶ್ರೀರಾಮ ಸಾಮ್ರಾಜ್ಯ ಪಟ್ಟಾಭಿಷೇಕ ನಡೆಯಿತು. ಪುರೋಹಿತರಾದ ಗಜಾನನ ಭಟ್ ನೇತೃತ್ವದಲ್ಲಿ ಶ್ರೀರಾಮ ಹಾಗೂ ಸೀತಾ ಮಾತೆಗೆ ನವರತ್ನಾಭಿಷೇಕ, ಸುವರ್ಣಾಭಿಷೇಕ ನೆರವೇರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT