ಬುಧವಾರ, ಆಗಸ್ಟ್ 17, 2022
25 °C

ಒಎಫ್‌ಸಿ ಕಡಿತ: ಗುತ್ತಿಗೆದಾರರ ವಿರುದ್ಧ ದೂರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಗುತ್ತಿಗೆ ಮುಂದುವರಿಸದ ಕಾರಣಕ್ಕೆ ಗ್ರಾಹಕರಿಗೆ ಟೆಲಿಕಾಂ ಸೇವೆ ಒದಗಿಸುವ ಒಎಫ್‌ಸಿ ಕೇಬಲ್‌ಗಳನ್ನು ಕತ್ತರಿಸಿ, ಸೇವೆಯಲ್ಲಿ ವ್ಯತ್ಯಯ ಆಗುವಂತೆ ಮಾಡಿದ್ದಾರೆ ಎಂದು ಆರೋಪಿಸಿ ಇಬ್ಬರು ಗುತ್ತಿಗೆದಾರರ ವಿರುದ್ಧ ವೊಡಾಫೋನ್ ಇಂಡಿಯಾ ಲಿಮಿಟೆಡ್ (ವಿಐಎಲ್) ಪೊಲೀಸರಿಗೆ ದೂರು ನೀಡಿದೆ.

ಈ ಸಂಬಂಧ ಬಾಲಕೃಷ್ಣ ಹಾಗೂ ಮನು ಎಂಬುವರ ವಿರುದ್ಧ ಸಂಪಿಗೆಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಕೇಬಲ್‌ ನಿರ್ವಹಣೆಯ ಗುತ್ತಿಗೆ ಮುಂದುವರಿಸದ ಕಾರಣ, ನಾಗವಾರ, ಥಣಿಸಂದ್ರ, ಟೆಲಿಕಾಂ ಬಡಾವಣೆಗಳಲ್ಲಿ ಉದ್ದೇಶಪೂರ್ವಕವಾಗಿ ಕೇಬಲ್‌ಗಳನ್ನು ಕಡಿತಗೊಳಿಸಿ, ಗ್ರಾಹಕರ ಸೇವೆಗೆ ತೊಂದರೆ ಮಾಡಿದ್ದಾರೆ. ಗ್ರಾಹಕರಿಗೆ ಸಂಸ್ಥೆಯ ಮೇಲಿರುವ ವಿಶ್ವಾಸಕ್ಕೆ ಧಕ್ಕೆ ಉಂಟು ಮಾಡಿದ್ದಾರೆ. ಸಂಸ್ಥೆಗೂ ನಷ್ಟ ಆಗುವಂತೆ ಮಾಡಿದ್ದಾರೆ’ ಎಂದು ದೂರಿನಲ್ಲಿ ತಿಳಿಸಿದೆ. 

‘ಸಂಸ್ಥೆಯ ತಾಂತ್ರಿಕ ಎಂಜಿನಿಯರ್‌ಗಳು ಕೇಬಲ್‌ ಸರಿಪಡಿಸುತ್ತಿದ್ದಾಗ ಸ್ಥಳಕ್ಕೆ ಬಂದು ನಾವೇ ಕೇಬಲ್‌ ಕಡಿತಗೊಳಿಸಿದ್ದು ಎಂದು ಹೇಳಿದ್ದಾರೆ. ಗ್ರಾಹಕರ ಸೇವೆಗೆ ವ್ಯತ್ಯಯ ಉಂಟು ಮಾಡಿದ ಇವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಮನವಿ ಮಾಡಿದೆ.

‘ನಮ್ಮ ಗ್ರಾಹಕರಿಗೆ ಗರಿಷ್ಠ ವೇಗದ ಜಾಲದ ಮೂಲಕ ಅತ್ಯುತ್ತಮ ದರ್ಜೆಯ ಗೀಗಾನೆಟ್ ಸೇವೆ ಒದಗಿಸಲು ನಾವು ಬದ್ಧರಾಗಿದ್ದೇವೆ. ಕೆಲವರ  ದುಷ್ಕೃತ್ಯಗಳಿಂದ ಗ್ರಾಹಕರಿಗೆ ಆಗುತ್ತಿರುವ ತೊಂದರೆಗೆ ನಾವು ವಿಷಾದಿಸುತ್ತೇವೆ’ ಎಂದು ವೊಡಾಫೋನ್ ಇಂಡಿಯಾ ಲಿಮಿಟೆಡ್ (ವಿಐಎಲ್) ಪ್ರಕಟಣೆ ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು