ಬೆಂಗಳೂರು: ನಗರದ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ಕೈದಿಗಳು ಮಂಗಳವಾರ ಬೆಳಿಗ್ಗೆ ಯೋಗ ಮಾಡಿ, ಅಂತರಾಷ್ಟ್ರೀಯ ಯೋಗ ದಿನ ಆಚರಿಸಿದರು.

'ಮಾನವೀಯತೆಗಾಗಿ ಯೋಗ"ವಿಶ್ವ ಯೋಗ ದಿನಾಚರಣೆ ಅಂಗವಾಗಿ ಕಾರಾಗೃಹದಲ್ಲಿ ವಿಶೇಷ ಯೋಗ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಜೈಲಿನ ಟವರ್-1 ವಿಭಾಗದಲ್ಲಿರುವ 500 ವಿಚಾರಣಾಧೀನ ಕೈದಿಗಳು ಆರ್ಟ್ ಆಫ್ ಲಿವಿಂಗ್ ಸಹಯೋಗದಲ್ಲಿ, ಟವರ್ -2ರ 100 ವಿಚಾರಣಾ ಬಂದಿಗಳು, ಸತ್ಸಂಗ ಸಂಸ್ಥೆಯ ಸಹಯೋಗದಲ್ಲಿ ಹಾಗೂ ಮಹಿಳಾ ವಿಭಾಗದ 100 ಮಹಿಳಾ ಕೈದಿಗಳು ಪ್ರಜಾಪಿತ ಬ್ರಹ್ಮಕುಮಾರಿ ಸಂಸ್ಥೆಯ ಸಹಯೋಗದಲ್ಲಿ ಮಂಗಳವಾರ ಯೋಗ ಮಾಡಿದರು. ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರು ಯೋಗದಲ್ಲಿ ಭಾಗವಹಿಸಿದ್ದರು.

'ಸಮ್ಯಕ್ ದೃಷ್ಟಿ, ಸಮ್ಯಕ್ ಸಂಕಲ್ಪ, ಸಮ್ಯಕ್ ವಾಕ್, ಸಮ್ಯಕ್ ಕರ್ಮ, ಸಮ್ಯಕ್ ಅಜೀವ, ಸಮ್ಯಕ್ ವ್ಯಾಯಾಮ, ಸಮ್ಯಕ್ ಸೃತಿ ಮತ್ತು ಸಮ್ಯಕ್ ಸಮಾಧಿ ಈ ಎಂಟು ಯೋಗಗಳು ಅಂತರಂಗ _ ಬಹಿರಂಗ ಶುದ್ದಿಯ ಸಾಧನಗಳು.

ಯೋಗದಿಂದ ಮನಸ್ಸು ಹಾಗೂ ಶರೀರ, ಆಲೋಚನೆ ಹಾಗೂ ಕ್ರಿಯೆ, ಸಂಯಮ ಹಾಗೂ ಸಾರ್ಥಕತೆ, ಮಾನವ ಹಾಗೂ ನಿಸರ್ಗದ ನಡುವೆ ಸಾಮರಸ್ಯ ಮತ್ತು ಆರೋಗ್ಯ ಹಾಗೂ ಸಮಗ್ರಮಾನವೀಯತೆಗಾಗಿ, ದೈಹಿಕ, ಮಾನಸಿಕ, ಸಾಮಾಜಿಕ, ಭೌದ್ಧಿಕ ಸಾಮರಸ್ಯವೇ ಯೋಗ. ಕೈದಿಗಳು ಉತ್ಸಾಹದಿಂದ ಯೋಗ ಮಾಡಿದರು' ಎಂದು ಜೈಲಿನ ಅಧಿಕಾರಿ ಹೇಳಿದರು.

'ಆರ್ಟ್ ಆಫ್ ಲಿವಿಂಗ್ ಸಂಸ್ಥೆಯು ಸತತ 52 ವಾರಗಳಿಂದ ಸಂಸ್ಥೆಯ ಬಂದಿಗಳಿಗೆ ಹಾಗೂ ಸಿಬ್ಬಂದಿ ವರ್ಗದವರಿಗೆ ಯೋಗಾಭ್ಯಾಸದ ತರಬೇತಿ ನೀಡುತ್ತಿದೆ' ಎಂದೂ ತಿಳಿಸಿದರು.

ಅಂತರರಾಷ್ಟ್ರೀಯ ಯೋಗ ದಿನ: ಮಾನವೀಯತೆಗೆ ಭಾರತದ ಉಡುಗೊರೆಯೇ ಯೋಗ; ರಾಮನಾಥ್ ಕೋವಿಂದ್

ಐದು ಅಡಿ ಉದ್ದದ ಕೊಳಕ ಮಂಡಲವನ್ನು ನುಂಗಿದ ದೈತ್ಯ ನಾಗರ ಹಾವು: ವಿಡಿಯೊ ವೈರಲ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.