ಇಂಗುಗುಂಡಿ ನಿರ್ಮಾಣದ ಹಂತ ಹಂತದ ಕಾಮಗಾರಿ
ಉದ್ಯಾನಗಳಲ್ಲಿರುವ ಇಂಗುಗುಂಡಿಗಳು
ಉದ್ಯಾನಗಳಲ್ಲಿರುವ ಇಂಗುಗುಂಡಿಗಳು
ಉದ್ಯಾನಗಳಲ್ಲಿರುವ ಇಂಗುಗುಂಡಿಗಳು
‘ಉದ್ಯಾನಗಳ ಕೊಳವೆಬಾವಿಯಲ್ಲಿ ಹೆಚ್ಚಾದ ನೀರು’
‘ಬಿಬಿಎಂಪಿಯ ಉದ್ಯಾನಗಳಲ್ಲಿ ಇಂಗುಗುಂಡಿಗಳನ್ನು ನಿರ್ಮಿಸಿರುವುದರಿಂದ ನಮ್ಮ ಕೊಳವೆಬಾವಿಗಳಲ್ಲಿ ನೀರು ಹೆಚ್ಚಿದೆ. 12 ಅಡಿ ಕೆಳಭಾಗದಲ್ಲಿ ಮಳೆ ನೀರು ಭೂಮಿಗೆ ಇಂಗುವುದರಿಂದ ಅಂತರ್ಜಲ ವೃದ್ಧಿಯ ಜೊತೆಗೆ, ಉದ್ಯಾನಗಳಲ್ಲಿರುವ ದೊಡ್ಡ ಮರ–ಗಿಡಗಳಿಗೆ ಅಗತ್ಯವಿರುವ ತೇವಾಂಶ ಲಭ್ಯವಾಗುತ್ತಿದೆ. ಇದಲ್ಲದೆ, ಸುತ್ತಮುತ್ತಲಿನ ನಿವಾಸಿಗಳು ಹೊಂದಿರುವ ಕೊಳವೆಬಾವಿಯಲ್ಲೂ ನೀರಿನ ಮಟ್ಟ ಹೆಚ್ಚಾಗುತ್ತಿದೆ’ ಎಂದು ಬಿಬಿಎಂಪಿ ತೋಟಗಾರಿಕೆ ವಿಭಾಗದ ಉಪ ನಿರ್ದೇಶಕ ಚಂದ್ರಶೇಖರ್ ತಿಳಿಸಿದರು. ‘ಉದ್ಯಾನಗಳಲ್ಲಿ ಮಳೆ ನೀರು ಸಂಗ್ರಹಿಸಿ, ಅದನ್ನು ಉದ್ಯಾನಗಳಲ್ಲಿರುವ ಗಿಡಗಳಿಗೆ ಉಪಯೋಗಿಸುವ ಉದ್ದೇಶವಿದೆ. ಚಿಕ್ಕ ಉದ್ಯಾನಗಳಲ್ಲಿ ಇದು ಸಾಧ್ಯವಿಲ್ಲದ್ದರಿಂದ, ದೊಡ್ಡ ಉದ್ಯಾನ ಗಳಲ್ಲಿ ಲಕ್ಷಾಂತರ ಲೀಟರ್ ಮಳೆ ನೀರು ಸಂಗ್ರಹಿಸುವುದು ನಮ್ಮ ಉದ್ದೇಶವಾಗಿದೆ. ಸಿಎಸ್‌ಆರ್ ಚಟುವಟಿಕೆಯಾದ್ದರಿಂದ ಪಾಲಿಕೆಗೆ ಆರ್ಥಿಕ ಹೊರೆಯಾಗುವುದಿಲ್ಲ’ ಎಂದು ಹೇಳಿದರು.
ಉದ್ಯಾನಗಳಲ್ಲಿರುವ ಇಂಗುಗುಂಡಿಗಳು
‘ಒಂದು ಶತಕೋಟಿ ಹನಿಗಳು ಇಂಗಿಸುವ ಗುರಿ’
‘ನಗರದಲ್ಲಿ ಮಳೆ ನೀರನ್ನು ಇಂಗಿಸಿ ಅಂತರ್ಜಲವನ್ನು ವೃದ್ಧಿಸಲು ‘ಯುನೈಟೆಡ್ ವೇ ಆಫ್ ಬೆಂಗಳೂರು’ ಎಂಬ ಸರ್ಕಾರೇತರ ಸಂಸ್ಥೆ (ಎನ್‌ಜಿಒ) ಮೂಲಕ ನಾವು ಕಾರ್ಯನಿರ್ವಹಿಸುತ್ತಿದ್ದೇವೆ. ‘ಒನ್ ಬಿಲಿಯನ್ ಡ್ರಾಪ್ಸ್’ (ಒಂದು ಶತಕೋಟಿ ಹನಿಗಳು) ಎಂಬ ಯೋಜನೆ ಮೂಲಕ ಶತಕೋಟಿ ಲೀಟರ್ ನೀರನ್ನು ಬೆಂಗಳೂರಿನಲ್ಲಿ ಇಂಗಿಸುವ ಗುರಿ ಹೊಂದಿದ್ದೇವೆ’ ಎಂದು ಯುನೈಟೆಡ್ ವೇ ಆಫ್ ಬೆಂಗಳೂರಿನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಜೇಶ್ ಕೃಷ್ಣನ್ ತಿಳಿಸಿದರು. ‘ಹಲವು ಕಾರ್ಪೊರೇಟ್ ಸಂಸ್ಥೆಗಳಿಂದ ಸಿಎಸ್‌ಆರ್ ಹಣವನ್ನು ಸಂಗ್ರಹಿಸಿ, ನಗರದ ಉದ್ಯಾನಗಳಲ್ಲಿ ಇಂಗುಗುಂಡಿಗಳನ್ನು ನಿರ್ಮಿಸುತ್ತಿದ್ದೇವೆ. ಬಿಬಿಎಂಪಿ ನಮ್ಮ ಯೋಜನೆಯನ್ನು ಒಪ್ಪಿ, ಅನುಮತಿಸಿರುವ ಉದ್ಯಾನಗಳಲ್ಲಿ ಇಂಗುಗುಂಡಿ ನಿರ್ಮಿಸುತ್ತಿದ್ದೇವೆ. ಕಳೆದ ವರ್ಷದಲ್ಲಿ ಈ ಕಾರ್ಯಕ್ಕೆ ಹೆಚ್ಚು ವೇಗ ಸಿಕ್ಕಿದೆ’ ಎಂದು ಹೇಳಿದರು.
2607 ಇಂಗು ಗುಂಡಿಗಳು;
ಬಿಬಿಎಂಪಿಯ 178 ಉದ್ಯಾನಗಳಲ್ಲಿವೆ 128100 ಲೀಟರ್ ನೀರು; ವರ್ಷವೊಂದಕ್ಕೆ ಇಂಗು ಗುಂಡಿಯನ್ನು ಸಂಗ್ರಹಿಸುವ ಮಳೆ ನೀರು 264782700 ಲೀಟರ್ ನೀರು; ವರ್ಷವೊಂದಕ್ಕೆ 178 ಉದ್ಯಾನಗಳಲ್ಲಿ ಇಂಗುತ್ತಿರುವ ಮಳೆ ನೀರು 1632 ಇಂಗು ಗುಂಡಿಗಳು; 2025ರ ಡಿಸೆಂಬರ್ ಅಂತ್ಯ ನಿರ್ಮಿಸುವ ಗುರಿ 543015900 ಲೀಟರ್ ನೀರು; ಮುಂದಿನ ವರ್ಷ ಇಂಗು ಗುಂಡಿಗಳಲ್ಲಿ ಸಂಗ್ರಹವಾಗುವ ಮಳೆ ನೀರು