ಸೋಮವಾರ, ಆಗಸ್ಟ್ 8, 2022
21 °C

ಡಿಆರ್‌ಡಿಒ ಆವರಣದಲ್ಲಿ ಸಿಲುಕಿದ್ದ ನವಿಲು ಸಂರಕ್ಷಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಸಿ.ವಿ.ರಾಮನ್‌ನಗರದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಆವರಣದಲ್ಲಿ ಸಿಲುಕಿದ್ದ ಹೆಣ್ಣು ನವಿಲನ್ನು ವನ್ಯಜೀವಿ ಕಾರ್ಯಕರ್ತರು ಬುಧವಾರ ಸಂರಕ್ಷಿಸಿ ಪುನರ್ವಸತಿ ಕೇಂದ್ರಕ್ಕೆ ಒಪ್ಪಿಸಿದ್ದಾರೆ.

‘ದಿಕ್ಕು ತಪ್ಪಿ ಬಂದ ಹೆಣ್ಣು ನವಿಲೊಂದು ಡಿಆರ್‌ಡಿಒ ಆವರಣವನ್ನು ಸೇರಿಕೊಂಡಿತ್ತು. ಜನರನ್ನು ಕಂಡು ಕಂಗಾಲಾಗಿದ್ದ ಅದು ಅಲ್ಲಿನ ಶೀಟ್‌ ಚಾವಣಿಯ ಮೇಲೇರಿತ್ತು. ಎರಡು ದಿನಗಳ ಹಿಂದೆ ನಾವು ಚಾವಣಿಯ ಶೀಟ್‌ಗಳನ್ನು ಸರಿಸಿ ಕೆಳಗಿಳಿಯಲು ಅನುವು ಮಾಡಿಕೊಟ್ಟೆವು. ನವಿಲು ಚಾವಣಿಯಿಂದ ಕೆಳಗೆ ಇಳಿದಿರುವುದಾಗಿ ಅಲ್ಲಿನ ಸಿಬ್ಬಂದಿ ಇಂದು ಬೆಳಿಗ್ಗೆ ಮಾಹಿತಿ ನೀಡಿ
ದರು. ನಾಲ್ಕೈದು ದಿನಗಳಿಂದ ಅದಕ್ಕೆ ಆಹಾರವೂ ಸಿಕ್ಕಿರಲಿಲ್ಲ. ನಾನು ಸ್ಥಳಕ್ಕೆ ಹೋಗಿ ನೋಡಿದಾಗ ಅದು ಬಳಲಿದಂತೆ ಕಂಡು ಬಂತು.

ಅದನ್ನು ಕೆಂಗೇರಿಯ ವನ್ಯಜೀವಿ ಪುನರ್ವಸತಿ ಕೇಂದ್ರಕ್ಕೆ ಒಪ್ಪಿಸಿದ್ದೇವೆ’  ಎಂದು ವನ್ಯಜೀವಿ ಕಾರ್ಯಕರ್ತ ಕೆ. ಮೋಹನ್‌ ತಿಳಿಸಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು