ಬುಧವಾರ, ಆಗಸ್ಟ್ 4, 2021
25 °C

ಉಲ್ಲಾಳದಲ್ಲಿ ಹೊಸ ಪೊಲೀಸ್ ಪರೇಡ್ ಮೈದಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ನಗರದ ಪಶ್ಚಿಮ ಸಶಸ್ತ್ರ ಮೀಸಲು ಪಡೆಗಾಗಿ (ಸಿಎಆರ್) ಉಲ್ಲಾಳದಲ್ಲಿ ಹೊಸ ಪರೇಡ್ ಮೈದಾನ ನಿರ್ಮಿಸಲಾಗುತ್ತಿದ್ದು, ಕೆಲಸ ಭರದಿಂದ ಸಾಗಿದೆ.

ಪೊಲೀಸ್ ಇಲಾಖೆಗೆ ಸೇರಿದ್ದ ಖಾಲಿ ಜಾಗದಲ್ಲಿ ಕಸ ಬೆಳೆದಿತ್ತು. ಜೆಸಿಬಿ ಯಂತ್ರದ ಸಹಾಯದಿಂದ ಕಸವನ್ನೆಲ್ಲ ತೆಗೆದು ಜಾಗವನ್ನು ಸಮತಟ್ಟಾಗಿ ಮಾಡುವ ಕೆಲಸ ನಡೆದಿದೆ. ಮೈದಾನ ನಿರ್ಮಾಣವಾದರೆ ಪೊಲೀಸರ ಪರೇಡ್ ಹಾಗೂ ಇಲಾಖೆಯು ಇತರೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಅನುಕೂಲವಾಗಲಿದೆ.

ಮೈದಾನದ ಸ್ಥಳಕ್ಕೆ ಶುಕ್ರವಾರ ಭೇಟಿ ನೀಡಿದ ಪೊಲೀಸ್ ಕಮಿಷನರ್‌ ಭಾಸ್ಕರ್ ರಾವ್, ಕಾಮಗಾರಿ ಪರಿಶೀಲನೆ ನಡೆಸಿದರು. ಅಧಿಕಾರಿಗಳ ಜೊತೆ ಚರ್ಚಿಸಿದರು. ಸಿಎಆರ್ ಡಿಸಿಪಿ ಸಿದ್ದರಾಜು ಇದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು