ಬೆಂಗಳೂರು: ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ ಸಿಬ್ಬಂದಿ ಕೊರತೆ ಇದ್ದು, ಹಾಲಿ ಇರುವ ಒಬ್ಬೊಬ್ಬ ಸಿಬ್ಬಂದಿ ನಾಲ್ಕೈದು ಮಂದಿಯ ಕೆಲಸ ಮಾಡುವಂತಹ ಸನ್ನಿವೇಶ ನಿರ್ಮಾಣವಾಗಿದೆ.

ಗಣೇಶ ಹಬ್ಬ ಬರುತ್ತಿದ್ದು ಪಿಒಪಿ ಗಣೇಶ ಮೂರ್ತಿಗಳ ಬಳಕೆ ನಿಯಂತ್ರಿಸಲು ಪರಿಸರ ಇಲಾಖೆ ಹಾಗೂ ಮಂಡಳಿ ಮುಂದಾಗಿದೆ. ಆದರೆ, ಸಿಬ್ಬಂದಿ ಕೊರತೆಯಿಂದಾಗಿ ಕ್ಷೇತ್ರ ವೀಕ್ಷಣೆ, ಅನುಮತಿ ನೀಡುವ ಜತೆಗೆ ಗಣೇಶ ಮೂರ್ತಿಗಳ ಮೇಲೆ ವಿಚಕ್ಷಣೆ ಮಾಡಲು ಹರಸಾಹಸ ಪಡುವಂತಾಗಿದೆ.

ಮಂಡಳಿಯಲ್ಲಿ ಶೇ 60ರಷ್ಟು ಸಿಬ್ಬಂದಿ ಕೊರತೆ ಇದೆ. ಬಹುತೇಕ ಹತ್ತು ವರ್ಷದಿಂದ ಪರಿಸರ ಅಧಿಕಾರಿಗಳು, ವೈಜ್ಞಾನಿಕ ಅಧಿಕಾರಿಗಳು, ಸಹಾಯಕ ಪರಿಸರ ಅಧಿಕಾರಿಗಳ ನೇಮಕವಾಗಿಲ್ಲ.

ಮಂಡಳಿಯ 12 ವಲಯ ಕಚೇರಿಗಳಿದ್ದರೆ, 51 ಪ್ರಾದೇಶಿಕ ಕಚೇರಿಗಳಿವೆ. ಅತೀ ಹೆಚ್ಚು ಕಾರ್ಯವ್ಯಾಪ್ತಿ ಹೊಂದಿರುವ ಬೆಂಗಳೂರು ನಗರ ಹಾಗೂ ಗ್ರಾಮಾಂತರ ಪ್ರದೇಶದಲ್ಲಿಯೇ 14 ಪ್ರಾದೇಶಿಕ ಕಚೇರಿಗಳಿವೆ. ಎಲ್ಲಾ ಕಚೇರಿಗಳಲ್ಲೂ ಒಬ್ಬರು ಪರಿಸರ ಅಧಿಕಾರಿ. ಒಬ್ಬರು ಉಪ ಪರಿಸರ ಅಧಿಕಾರಿ, ಮೂವರು ಸಹಾಯಕ ಪರಿಸರ ಅಧಿಕಾರಿಗಳು ಇರಬೇಕು. ಇದಲ್ಲದೆ ವೈಜ್ಞಾನಿಕ ಅಧಿಕಾರಿ, ಸಹಾಯಕರು ಇದ್ದು ಎಲ್ಲಾ ಹುದ್ದೆಗಳಲ್ಲೂ ಸಿಬ್ಬಂದಿ ಕೊರತೆ ಇದೆ.

ಮಂಡಳಿಯಲ್ಲಿ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿ ಕೆಲಸ ಮಾಡುವ 205 ಪರಿಸರ ಅಧಿಕಾರಿಗಳ ಪೈಕಿ 61 ಮಂದಿ ನಿವೃತ್ತರಾಗಿದ್ದು, 144 ಪರಿಸರ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಮುಖ್ಯ, ಉಪ ಪರಿಸರ ಅಧಿಕಾರಿಗಳ ಶೇ 50ರಷ್ಟು ಹುದ್ದೆಗಳು ಖಾಲಿ ಇರುವುದರಿಂದ ಪರಿಸರ ಅಧಿಕಾರಿಗಳೇ ಹೆಚ್ಚುವರಿ ಕಾರ್ಯಭಾರ ನೋಡಿಕೊಳ್ಳುತ್ತಿದ್ದಾರೆ.

ಮಂಡಳಿಯಲ್ಲಿನ ಖಾಲಿ ಹುದ್ದೆಗಳನ್ನು ಐದು ವರ್ಷಕ್ಕೆ ಒಮ್ಮೆ ನೇಮಕ ಮಾಡಿಕೊಳ್ಳಬೇಕು ಎಂಬ ಸೂಚನೆಯಿದ್ದು, 1999 ಹಾಗೂ 2003ರಲ್ಲಿ ನೇಮಕ ಪ್ರಕ್ರಿಯೆ ನಡೆದಿತ್ತು. ಇದಾದ ನಂತರ 2014ರಲ್ಲಿ ನೇಮಕವಾಗಿತ್ತು. ಬಳಿಕ ನೇಮಕ ಪ್ರಕ್ರಿಯೆ ನಡೆದಿಲ್ಲ.

‘ಇಲಾಖೆಯಲ್ಲಿ ಎರಡು ದಶಕಕ್ಕೂ ಹೆಚ್ಚು ಕಾಲದಿಂದ ಪರಿಸರ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವೆ. ಕಾಲಕಾಲಕ್ಕೆ ನೇಮಕ ಪ್ರಕ್ರಿಯೆ ನಡೆಯದ ಕಾರಣ ಕ್ಷೇತ್ರ ಕಾರ್ಯ ಮಾಡಬೇಕಾದ ಅಧಿಕಾರಿ, ಸಿಬ್ಬಂದಿ ಸಂಖ್ಯೆ ಕಡಿಮೆಯಾಗಿದೆ. ಪರಿಸರ ಮಾಲಿನ್ಯ ತಡೆ ಕಾರ್ಯಗಳಲ್ಲದೆ, ಹೊಸ ಬಡಾವಣೆ ನಿರ್ಮಾಣಕ್ಕೆ ಎನ್ಒಸಿ ಕೊಡುವುದರವರೆಗೂ ಸೇವೆ ವಿಸ್ತರಣೆಗೊಂಡಿದೆ. ಕೆಲಸದ ಒತ್ತಡ ಜಾಸ್ತಿಯಾಗಿ ಹಲವರ ಆರೋಗ್ಯದ ಮೇಲೂ ಪರಿಣಾಮ ಬೀರಿದೆ’ ಎಂದು ಜಿಲ್ಲೆಯೊಂದರ ಹಿರಿಯ ಪರಿಸರ ಅಧಿಕಾರಿ ಪರಿಸ್ಥಿತಿ ವಿವರಿಸಿದರು.

ಮಂಡಳಿಯಲ್ಲಿ ಸಿಬ್ಬಂದಿ ಕೊರತೆ ಇದೆ. ಸದ್ಯ 300 ಹುದ್ದೆ ಭರ್ತಿಗೆ ಸರ್ಕಾರ ಅನುಮತಿ ನೀಡಿದ್ದು, ಒಳಮೀಸಲು ನಿಗದಿ ನಂತರ ನೇಮಕ ನಡೆಯಲಿದೆ.
ಎಸ್.ಎಸ್.ಲಿಂಗರಾಜ ಸದಸ್ಯ ಕಾರ್ಯದರ್ಶಿ, ಕರ್ನಾಟಕ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.