ಮಂಗಳವಾರ, ಮಾರ್ಚ್ 31, 2020
19 °C
ಮತ್ತೆ ವನ್ಯಜೀವಿ ಮಂಡಳಿ ಸಭೆ l ಪಶ್ಚಿಮ ಘಟ್ಟ ಸರಣಿ ಭೂಕುಸಿತದಿಂದ ಪಾಠ ಕಲಿಯದ ಸರ್ಕಾರ

ಹುಬ್ಬಳ್ಳಿ–ಅಂಕೋಲಾ ರೈಲು ಮಾರ್ಗಕ್ಕೆ ಒತ್ತಡ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪಶ್ಚಿಮಘಟ್ಟದ ಸೂಕ್ಷ್ಮ ಪ್ರದೇಶದಲ್ಲಿ ಹಾದುಹೋಗಲಿರುವ ಹುಬ್ಬಳ್ಳಿ– ಅಂಕೋಲಾ ರೈಲು ಮಾರ್ಗಕ್ಕೆ ರಾಜ್ಯ ವನ್ಯಜೀವಿ ಮಂಡಳಿಯ ಒಪ್ಪಿಗೆ ಪಡೆಯಲು ಶತಾಯಗತಾಯ ಪ್ರಯತ್ನ ಮುಂದುವರಿದಿದೆ.

ಮಂಡಳಿಯು ಮಾರ್ಚ್ 9 ರಂದು ನಡೆಸಿದ್ದ 13ನೇ ಸಭೆಯಲ್ಲಿ ಬಹುತೇಕ ಸದಸ್ಯರು ಈ ಯೋಜನೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಹಾಗಾಗಿ ಈ ಪ್ರಸ್ತಾವಕ್ಕೆ ಮಂಡಳಿ ಅನುಮೋದನೆ ನೀಡಿರಲಿಲ್ಲ. ಇದರ ಹೊರತಾಗಿಯೂ ಮತ್ತೆ ಈ ವಿಷಯ ಚರ್ಚಿಸಲು ಮಂಡಳಿ ಇದೇ 20ರಂದು ಸಭೆ ಕರೆದಿದೆ.

ಸದಸ್ಯರ ಒಮ್ಮತದ ತೀರ್ಮಾನವನ್ನು ಕಡೆಗಣಿಸಿ, ರಾಜಕಿಯ ಒತ್ತಡಕ್ಕೆ ಮಣಿದು ಮತ್ತೆ ಸಭೆ ಕರೆದಿರುವುದು ಮಂಡಳಿ ಸದಸ್ಯರ ಹಾಗೂ ವನ್ಯಜೀವಿ ಕಾರ್ಯಕರ್ತರ ಹುಬ್ಬೇರಿಸಿದೆ.

‘ಪಶ್ಚಿಮ ಘಟ್ಟದ ಸೂಕ್ಷ್ಮ ಪರಿಸರ ನಾಶಪಡಿಸುವ ಮೂಲಕ ಮೇಲೇ ಪದೇ ಪದೇ ಆಘಾತ ನೀಡಲಾಗುತ್ತಿದೆ. ಎರಡು ವರ್ಷಗಳಲ್ಲಿ ಪಶ್ಚಿಮ ಘಟ್ಟ ಸಾಲಿನಲ್ಲಿ ಸಂಭವಿಸಿರುವ ಸರಣಿ ಭೂಕುಸಿತ, ಪ್ರವಾಹಗಳಿಂದಲೂ ಸರ್ಕಾರ ಪಾಠ ಕಲಿತಿಲ್ಲ. ಮತ್ತೆ ಲಕ್ಷಗಟ್ಟಲೆ ಕಾಡು ನಾಶಕ್ಕೆ ಕಾರಣವಾಗುವ ಈ ರೈಲು ಮಾರ್ಗವನ್ನು ಅನುಷ್ಠಾನಗೊಳಿಸಲು ಸರ್ಕಾರ ಮುಂದಾಗಿರುವುದು ಎಷ್ಟು ಸರಿ’ ಎಂದು ವನ್ಯಜೀವಿ ಕಾರ್ಯಕರ್ತರು ಪ್ರಶ್ನಿಸಿದ್ದಾರೆ.

ಐಐಎಸ್ಸಿ ವರದಿಗೂ ಖಂಡನೆ: ಉಪಶಮನ ಕ್ರಮಗಳನ್ನು ಕೈಗೊಂಡು ಯೋಜನೆಯನ್ನು ಜಾರಿಗೊಳಿಸಬಹುದೆಂಬ ಭಾರತೀಯ ವಿಜ್ಞಾನ ಸಂಸ್ಥೆಯ ಸಲಹೆಗಳಿಗೂ ಅವರು ಕಿಡಿಕಾರಿದ್ದಾರೆ.  

‘ವನ್ಯಜೀವಿಗಳಿಗೆ ಮೇವಿನ ಮೀಸಲು ತಾಣ ನಿರ್ಮಾಣ, ಜಲಮೂಲಗಳ ನಿರ್ಮಾಣ, ಪಕ್ಷಿಗಳಿಗಾಗಿ ಆಹಾರ ಸಸ್ಯಗಳ ಬೆಳೆಸುವಿಕೆ, ರೈಲ್ವೆ ನಿಲ್ದಾಣಗಳಲ್ಲಿ ಹಾಗೂ ರೈಲ್ವೆಗಳಲ್ಲಿ ತ್ಯಾಜ್ಯ ನಿರ್ವಹಣೆ ಕುರಿತ ಸಲಹೆಗಳು ಹಾಸ್ಯಾಸ್ಪದ. ಆಹಾರ ಹಾಗೂ ನೀರಿನ ಮೂಲಗಳನ್ನು ಹುಡುಕುವುದು ಹೇಗೆಂದು ವನ್ಯಜೀವಿಗಳಿಗೆ ಗೊತ್ತಿದೆ’ ಎಂದು ಗುರುಪ್ರಸಾದ್ ಟೀಕಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು