ಶುಕ್ರವಾರ, ಏಪ್ರಿಲ್ 10, 2020
19 °C
ಮಾರಕಾಸ್ತ್ರ ತೋರಿಸಿ ‘ಕುಣಿದ’ ರೌಡಿಗಳು

ಜೈಲಿನಿಂದಲೇ ‘ಟಿಕ್‌ ಟಾಕ್‌’!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೊಲೆ, ಸುಲಿಗೆ, ದರೋಡೆ ಪ್ರಕರಣದಲ್ಲಿ ಗುಂಡೇಟು ತಿಂದು ಪರಪ್ಪನ ಅಗ್ರಹಾರ ಜೈಲು ಸೇರಿದ್ದ ಇಬ್ಬರು ರೌಡಿಶೀಟರ್‍ಗಳು ಜೈಲಿನ ಒಳಗಿನಿಂದಲೇ ‘ಟಿಕ್‍ಟಾಕ್‘ ಮಾಡಿರುವ ವಿಡಿಯೊ ವೈರಲ್‌ ಆಗಿದೆ!

ಟಿಕ್‍ಟಾಕ್‍ನಲ್ಲಿ ರೌಡಿಯೊಬ್ಬ ತನ್ನ ಪ್ರೇಯಸಿಯ ಫೋಟೊ ಜೊತೆ ಹಿಂದಿ ಸಿನಿಮಾ ಗೀತೆ ಪೋಸ್ಟ್ ಮಾಡಿರುವುದು, ಜೈಲಿನಲ್ಲಿ ಅಕ್ರಮ, ಅವ್ಯವಹಾರ ನಡೆಯುತ್ತಿದೆ ಎಂಬ ವದಂತಿಗಳಿಗೆ ಸಾಕ್ಷ್ಯ ಸಿಕ್ಕಂತಾಗಿದೆ. ಅಲ್ಲದೆ, ಟಿಕ್‍ಟಾಕ್ ಮಾಡಿರುವ ರೌಡಿಗಳಾದ ವಸೀಂ ಮತ್ತು ಫಯಾಜ್ ಅಲಿಯಾಸ್ ಚಪ್ಪರ್, ಟಿಕ್‍ಟಾಕ್‍ ದೃಶ್ಯದಲ್ಲಿ ಚಾಕು,
ಮಾರಕಾಸ್ತ್ರಗಳನ್ನು ತೋರಿಸಿದ್ದಾರೆ.

ನಟ ಶಿವರಾಜ್ ಕುಮಾರ್ ಅವರ ಸಿನಿಮಾ ಸಂಭಾಷಣೆ ಬಳಸಿ ಟಿಕ್‍ಟಾಕ್ ಮಾಡಿರುವ ವಸೀಂ, ವಿಡಿಯೊದಲ್ಲಿ ಜೈಲಿನ ತನ್ನ ಸ್ನೇಹಿತರನ್ನು ತೋರಿಸುವ ಜೊತೆಗೆ ಜೈಲಿನ ಆವರಣವನ್ನು ಸೆರೆ ಹಿಡಿದು ವೈರಲ್ ಮಾಡಿದ್ದಾನೆ. ಅಲ್ಲದೆ, ಆಯುಧಗಳನ್ನು ತೋರಿಸಿ, ಜೈಲಿನ ಕಟ್ಟೆ ಮೇಲೆ ಸಿಗರೇಟು ಸೇದುತ್ತ ಕುಳಿತಿರುವ ತಮ್ಮ ಫೋಟೊಗೆ ಶಿವರಾಜ್‌ಕುಮಾರ್‌ ಫೋಟೊ ಸೇರಿಸಿ ಪೋಸ್ಟ್‌ ಮಾಡಿದ್ದಾನೆ.

ರೌಡಿ ಫಯಾಜ್‌, ತನ್ನ ಹುಡುಗಿ ಜೊತೆ ಫೋಟೊ ಹಾಕಿ ‘ತೇರಿ ಮೇರಿ ಕಹಾನಿ’ ಎನ್ನುತ್ತಾ ಟಿಕ್‍ಟಾಕ್ ಮಾಡಿದ್ದಾನೆ. ಈ ಎಲ್ಲ ಬೆಳವಣಿಗೆಗಳು ನಡೆದರೂ ಜೈಲು ಅಧಿಕಾರಿಗಳು ಯಾವುದೇ ಕ್ರಮಕ್ಕೆ ಮುಂದಾಗದಿರುವುದು ಹಲವು ಸಂಶಯಗಳಿಗೆ ಕಾರಣವಾಗಿದೆ.

ಟಿಕ್‍ಟಾಕ್ ವಿಡಿಯೊ ಮಾಡಲು ‌ವಸೀಂ ಮತ್ತು ಫಯಾಜ್‌ಗೆ ಮೊಬೈಲ್ ಯಾರು ನೀಡಿದರು ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ಕೆಲವು ತಿಂಗಳುಗಳ ಹಿಂದೆಯಷ್ಟೇ ಜೈಲಿನಲ್ಲಿ ಮೊಬೈಲ್ ಬಳಕೆ, ಗಾಂಜಾ ಪೂರೈಕೆ ಆರೋಪದಡಿ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದರು. ಅಲ್ಲದೆ, ಮೊಬೈಲ್ ಮತ್ತಿತರ ವಸ್ತುಗಳನ್ನು ವಶಪಡಿಸಿಕೊಂಡಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು