ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಎಫ್‌ಸಿ ಕಾಟ ತಪ್ಪಿಸಿ: ಜನರ ಒತ್ತಾಯ

Last Updated 22 ಏಪ್ರಿಲ್ 2019, 4:00 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಆಪ್ಟಿಕಲ್‌ ಫೈಬರ್‌ ಕೇಬಲ್‌ (ಒಎಫ್‌ಸಿ) ಹಾವಳಿಯಿಂದ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಓಎಫ್‌ಸಿ ಸಂಬಂಧಿಸಿದ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವ ಮೂಲಕ ಕೇಬಲ್‌ ಕಾಟದಿಂದ ಮುಕ್ತಿ ನೀಡುವಂತೆ ಒತ್ತಾಯಿಸಿದ್ದಾರೆ.

ನಗರದ ಸಮಸ್ಯೆಗಳನ್ನು ಸವಿಸ್ತಾರವಾಗಿ ಬಿಂಬಿಸಲು ‘ಪ್ರಜಾವಾಣಿ’ ಆರಂಭಿಸಿರುವ ‘ನಮ್ಮ ನಗರ, ನಮ್ಮ ಧ್ವನಿ’ ಮಾಲಿಕೆಯ ಮೂರನೇ ಕಂತಿನಲ್ಲಿ ಒಎಫ್‌ಸಿ ಕುರಿತ ವಿಸ್ತೃತ ವರದಿಗೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.

ಭಾನುವಾರದ ಸಂಚಿಕೆಯಲ್ಲಿ ಪ್ರಕಟವಾದ ‘ಅಯ್ಯಯ್ಯೋ ಇದೇನಪ್ಪ ಕೇಬಲ್‌ ಕಾಟ!’ ವರದಿಯ ಕುರಿತು ಓದುಗರು ಕಳುಹಿಸಿರುವ ಪ್ರತಿಕ್ರಿಯೆಗಳಲ್ಲಿ ಆಯ್ದ ಕೆಲವು ಅಭಿಪ್ರಾಯಗಳು ಇಲ್ಲಿವೆ.

‘ಕೇಬಲ್‌ ಕಾಟದಿಂದ ಮುಕ್ತಿ ನೀಡಿ’
ಬೆಂಗಳೂರು ದಟ್ಟಣೆಯ ನಗರವಾದ್ದರಿಂದ ಸಾರ್ವಜನಿಕರಿಗೆ ನಡೆಯಲು ಪಾದಚಾರಿ ಮಾರ್ಗಗಳು ಬೇಕೆಬೇಕು. ಆದರೆ ಸುಸ್ಥಿತಿಯಲ್ಲಿರುವ ಅಲ್ಪಸ್ವಲ್ಪ ಪಾದಚಾರಿಮಾರ್ಗಗಳನ್ನು ಸಹ ಒಎಫ್‌ಸಿ ಅಕ್ರಮಿಸಿಕೊಂಡಿದೆ. ಸಂಬಂಧಪಟ್ಟ ಪಾಲಿಕೆ ಅಧಿಕಾರಿಗಳು ಇತ್ತಗಮನಹರಿಸಿ ಕೇಬಲ್‌ ಕಾಟದಿಂದ ಜನರಿಗೆ ಮುಕ್ತಿ ನೀಡಬೇಕು.
ಎಚ್‌.ಕೆ.ಹೆಣ್ಣುರ್‌ ಗಂಗಾಧರ,ಬೆಂಗಳೂರು

*
‘ಭ್ರಷ್ಟರ ವಿರುದ್ಧ ದೂರು ದಾಖಲಿಸಬೇಕು’
ನಮ್ಮ ನಗರ, ನಮ್ಮ ಧ್ವನಿ ಸಮಗ್ರ ವರದಿಯು ಭ್ರಷ್ಟ ಅಧಿಕಾರಿಗಳ ಮುಖವಾಡವನ್ನು ಕಳಚಿದೆ. ಈ ಸಂದರ್ಭದಲ್ಲಿ ಎಲ್ಲರೂ ಒಗ್ಗೂಡಿ ಭ್ರಷ್ಟಾಚಾರದ ವಿರುದ್ಧ ದನಿ ಎತ್ತಬೇಕಾದ ಅಗತ್ಯವಿದೆ. ಜನರು ಭ್ರಷ್ಟ ಅಧಿಕಾರಿಗಳ ಮೇಲೆ ಪ್ರಕರಣ ದಾಖಲಿಸಬೇಕು. ಆಗ ಮಾತ್ರ ಇತರೆ ಅಧಿಕಾರಿಗಳೂ ಬುದ್ಧಿ ಕಲಿಯುತ್ತಾರೆ.
ಎ.ವಿ.ಶಾಮರಾವ್‌, ರಾಮಮೂರ್ತಿ ನಗರ

*

‘ಹಣ ಅಧಿಕಾರಿಗಳನ್ನು ಕುರುಡಾಗಿಸುತ್ತದೆ’
ಪಾಲಿಕೆ ಅಧಿಕಾರಿಗಳಿಗೆ ನಗರದ ಸಮಸ್ಯೆಗಳ ಅರಿವಿರುತ್ತದೆ. ಆದರೆ ಹಣ ಅವರನ್ನು ಕುರುಡಾಗಿ ವರ್ತಿಸುವಂತೆ ಮಾಡುತ್ತದೆ. ಜನರು ಎಲ್ಲಿಯವರೆಗೂ ಒಳ್ಳೆ ನಾಯಕರನ್ನೂ ಚುನಾಯಿಸುವುದಿಲ್ಲವೋ ಅಲ್ಲಿಯವರೆಗೂ ಸಮಸ್ಯೆಗಳು ಸಹ ಜೊತೆಗಿರುತ್ತವೆ.
ಪ್ರಶಾಂತ್ ಕೊಡ್ನಾಡ್, ವಿದ್ಯಾರಣ್ಯಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT