ಬೆಂಗಳೂರು: ‘ಸೂಪರ್ ಬಿಲ್ಟ್ ಅಪ್ ಏರಿಯಾ’ ಎಂದು ಗುರುತಿಸಿ ಈಗಾಗಲೇ ತೆರಿಗೆ ಕಟ್ಟಿಸಿಕೊಂಡಿದ್ದರೂ, ಈಗ ಪಾರ್ಕಿಂಗ್ ಹೆಸರಲ್ಲಿ ಬಿಬಿಎಂಪಿಯವರು ಆಸ್ತಿ ತೆರಿಗೆ ನೋಟಿಸ್ ನೀಡುತ್ತಿರುವುದು ಅಕ್ರಮ ಎಂದು ಬೆಂಗಳೂರು ನವನಿರ್ಮಾಣ ಪಕ್ಷ (ಬಿಎನ್ಪಿ) ಟೀಕಿಸಿದೆ.

ಸ್ಟಿಲ್ಟ್ ಪಾರ್ಕಿಂಗ್ ಮತ್ತು ತೆರೆದ ಪಾರ್ಕಿಂಗ್ ಪ್ರದೇಶಗಳು ಕಟ್ಟಡದ ಸಾಮಾನ್ಯ ಪ್ರದೇಶಗಳ ಭಾಗವಾಗಿದ್ದು, ಅವನ್ನು ಮಾರಾಟ ಮಾಡಲು ಅಥವಾ ಪ್ರತ್ಯೇಕ ಘಟಕಗಳಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ. ಪಾರ್ಕಿಂಗ್ ಸ್ಥಳಗಳು ನಿವಾಸಿಗಳ ಸಾಮಾನ್ಯ ಬಳಕೆಗೆ ಮೀಸಲಾಗಿವೆ. ಅವುಗಳನ್ನು ಫ್ಲ್ಯಾಟ್ ವೆಚ್ಚದಲ್ಲಿ ಸೇರಿಸುವಂತೆ ಹೇಳಿದೆ ಎಂದು ತಿಳಿಸಿದೆ.

ರೇರಾ ಕಾಯ್ದೆಯ ಸೆಕ್ಷನ್ 2(ಎನ್) ಕೂಡ ಸ್ಟಿಲ್ಟ್ ಮತ್ತು ತೆರೆದ ಪಾರ್ಕಿಂಗ್ಗಳನ್ನು ಸಾಮಾನ್ಯ ಪ್ರದೇಶಗಳ ಭಾಗವೆಂದು ವ್ಯಾಖ್ಯಾನಿಸಿದೆ. ಹಾಗಾಗಿ ಪ್ರತ್ಯೇಕ ತೆರಿಗೆ ವಿಧಿಸುವಂತಿಲ್ಲ ಎಂದು ಬಿಎನ್ಪಿ ಸಂಸ್ಥಾಪಕ ಶ್ರೀಕಾಂತ್ ನರಸಿಂಹನ್ ತಿಳಿಸಿದ್ದಾರೆ.

‘ಸ್ಟಿಲ್ಟ್ ಮತ್ತು ತೆರೆದ ಪಾರ್ಕಿಂಗ್ಗಳ ಮೇಲೆ ತೆರಿಗೆಯನ್ನು ಪ್ರತ್ಯೇಕವಾಗಿ ಪಾವತಿಸಲು ನೋಟಿಸ್ ಕಳುಹಿಸುವ ಮೂಲಕ ಸುಪ್ರೀಂ ಕೋರ್ಟ್ ತೀರ್ಪುಗಳನ್ನು ಮತ್ತು ರೇರಾ ಕಾಯ್ದೆಗಳನ್ನು ಬಿಬಿಎಂಪಿ ಉಲ್ಲಂಘಿಸಿದೆ. ಈ ನೋಟಿಸ್ಗಳನ್ನು ವಾಪಸ್ ಪಡೆಯಬೇಕು. ಮತ್ತು ಸಾಂವಿಧಾನಿಕವಾಗಿ ನೀತಿಗಳನ್ನು ರೂಪಿಸಬೇಕು’ ಎಂದು ಬಿಎನ್ಪಿಯ ಮಹದೇವಪುರ ವಲಯದ ಮುಖಂಡ ವಿಷ್ಣು ರೆಡ್ಡಿ ಆಗ್ರಹಿಸಿದರು.

‘ಬಿಬಿಎಂಪಿಯ ನೋಟಿಸ್ಗಳಿಗೆ ಪ್ರತಿಕ್ರಿಯಿಸಲು, ಮಾಲೀಕರಿಗೆ ನೆರವಾಗಲು ನಾವು ಪ್ರಯತ್ನಿಸುತ್ತಿದ್ದೇವೆ. ಆನ್ಲೈನ್ನಲ್ಲಿ ಪ್ರತಿಕ್ರಿಯಿಸಲು ಒದಗಿಸಲಾದ ಇ-ನ್ಯಾಯ ಸೈಟ್ ಕಾರ್ಯನಿರ್ವಹಿಸುತ್ತಿಲ್ಲ. ಅಧಿಕಾರಿಗಳು ನೇರವಾಗಿ ದೂರು ಸ್ವೀಕರಿಸಲು ನಿರಾಕರಿಸುತ್ತಿದ್ದಾರೆ’ ಎಂದು ವರ್ತೂರು ವಾರ್ಡ್ ನಾಯಕ ವೆಂಕಟಾಚಲಂ ಸುಬ್ರಮಣಿಯಂ ಹೇಳಿದರು.

‘ಈ ವೈಫಲ್ಯವು ಬಿಬಿಎಂಪಿಯ ಕಂದಾಯ ವ್ಯವಸ್ಥೆಯಲ್ಲಿನ ದೀರ್ಘಕಾಲದ ದುರಾಡಳಿತವನ್ನು ಪ್ರತಿಬಿಂಬಿಸುತ್ತದೆ. ಅದರ ಆಂತರಿಕ ಪ್ರಕ್ರಿಯೆಗಳನ್ನು ಸರಿಪಡಿಸುವ ಬದಲು, ಬಿಬಿಎಂಪಿ ಕಾನೂನು ಪಾಲಿಸುವ ನಾಗರಿಕರ ಮೇಲೆ ಹೊರೆಯನ್ನು ವರ್ಗಾಯಿಸುತ್ತಿದೆ’ ಎಂದು ಬಿಎನ್ಪಿ ನಾಯಕ ಎಚ್.ಎಲ್.ಎನ್. ಪ್ರಸಾದ್ ಆರೋಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.