ಸೋಮವಾರ, ಫೆಬ್ರವರಿ 24, 2020
19 °C

ಹೈಟೆಕ್ ವೇಶ್ಯಾವಾಟಿಕೆ: ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಅಂತರ್ಜಾಲ ಸೇವೆಯನ್ನು ಬಳಸಿ ಹೈಟೆಕ್ ಮಾದರಿಯಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ನಾಲ್ವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ರಾಜಾಜಿನಗರದ ಕುಮಾರ್ ಅಲಿಯಾಸ್‌ ಅಂಕಲ್‌ ಕುಮಾರ್‌ (38), ಬಿಟಿಎಂ ಲೇಔಟ್‌ನ ಭರತ್‌ಕುಮಾರ್‌ (36), ಈಜೀಪುರದ ರಘು ಅಲಿಯಾಸ್‌ ರಾಜೇಶ್‌ (38) ಮತ್ತು ಚಿಕ್ಕನಹಳ್ಳಿಯ ಪ್ರಜ್ವಲ್ (36) ಬಂಧಿತರು.

‘ಉದ್ಯೋಗದ ಆಮಿಷ ಒಡ್ಡಿ ಮುಂಬೈ ಸೇರಿ ವಿವಿಧ ನಗರಗಳಿಂದ ಯುವತಿಯರನ್ನು ನಗರಕ್ಕೆ ಕರೆಸಿಕೊಳ್ಳುತ್ತಿದ್ದರು. ಅವರ ಫೋಟೊಗಳನ್ನು ಆನ್‌ಲೈನ್ ಮೂಲಕ ಕಳುಹಿಸಿ ಗ್ರಾಹಕರನ್ನು‌ ಸೆಳೆಯುತ್ತಿದ್ದರು. ಪ್ರತಿ ಗ್ರಾಹಕರಿಂದ ₹15 ಸಾವಿರದಿಂದ ₹20 ಸಾವಿರದವರೆಗೆ ಹಣ ಪಡೆಯುತ್ತಿದ್ದರು’ ಎಂದು ಪೊಲೀಸರು ತಿಳಿಸಿದರು.

‘ಆರೋಪಿಗಳ ದೊಡ್ಡ ಜಾಲವಿದ್ದು, ವಿವಿಧ ಠಾಣೆಗಳಲ್ಲಿ ದೂರುಗಳು ದಾಖಲಾಗಿವೆ. ಹಲವು ವರ್ಷಗಳಿಂದ ಬೇರೆ ಬೇರೆ ಹೆಸರುಗಳಡಿ ದಂಧೆ ನಡೆಸುತ್ತಿದ್ದರು. ಪೊಲೀಸರ ಕೈಗೆ ಸಿಗದೆ ಓಡಾಡುತ್ತಿದ್ದರು’ ಎಂದೂ ವಿವರಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು