ಗುರುವಾರ, 18 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

Bengaluru Rains: ಬೆಂಗಳೂರು ನಗರದಲ್ಲಿ ಹಲವೆಡೆ ಮಳೆ

Published 13 ಜೂನ್ 2024, 19:23 IST
Last Updated 13 ಜೂನ್ 2024, 19:23 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಗುರುವಾರ ಮಧ್ಯಾಹ್ನದಿಂದ ರಾತ್ರಿಯವರೆಗೆ ಹಲವೆಡೆ ಮಳೆಯಾಗಿದೆ.

ಜಿಡಿ ಮರ ಜಂಕ್ಷನ್‌, ವಿಂಡ್ಸರ್‌ ಮ್ಯಾನರ್‌ ಜಂಕ್ಷನ್‌, ಮಡಿವಾಳದ ಅಯ್ಯಪ್ಪನಗರದ ಅಂಡರ್‌ಪಾಸ್‌ ಬಳಿ ನೀರು ನಿಂತು ವಾಹನ ಸಂಚಾರಕ್ಕೆ ಅಡ್ಡಿಯಾಯಿತು.

ರಾಜರಾಜೇಶ್ವರಿನಗರದಲ್ಲಿ 3 ಸೆಂ.ಮೀ, ಕೆಂಗೇರಿಯಲ್ಲಿ 2.2 ಸೆಂ.ಮೀ, ವಿದ್ಯಾಪೀಠದಲ್ಲಿ 2.1 ಸೆಂ.ಮೀ, ಕೋರಮಂಗಲದಲ್ಲಿ 2 ಸೆಂ.ಮೀ, ಎಚ್‌ಎಸ್‌ಆರ್‌ ಲೇಔಟ್‌ನಲ್ಲಿ 1.5 ಸೆಂ.ಮೀ, ಮಾರತ್‌ಹಳ್ಳಿಯಲ್ಲಿ 1.4 ಸೆಂ.ಮೀ ಮಳೆಯಾಗಿದೆ.

ಎಚ್‌ಎಎಲ್‌ ವಿಮಾನ ನಿಲ್ದಾಣ, ಗೊಟ್ಟಿಗೆರೆ, ಬೆಳ್ಳಂದೂರು, ಬಿಟಿಎಂ ಲೇಔಟ್‌, ಪಟ್ಟಾಭಿರಾಮನಗರ, ಅಂಜನಾಪುರ, ಯಶವಂತಪುರ, ರಾಜಾಜಿನಗರ, ನಾಗವಾರ, ಪುಲಕೇಶಿನಗರ, ಹಂಪಿನಗರ, ವಿಜಯನಗರಗಳಲ್ಲಿ ಸಾಧಾರಣ ಮಳೆಯಾಯಿತು.

ನಾಗರಬಾವಿ ತೆರಿಗೆಭವನ ರಸ್ತೆಯಲ್ಲಿ ಮಳೆಯಲ್ಲಿ ಸಾಗಿದ ಜನರು
ಪ್ರಜಾವಾಣಿ ಚಿತ್ರ/ ಎಂ.ಎಸ್‌.ಮಂಜುನಾಥ್‌
ನಾಗರಬಾವಿ ತೆರಿಗೆಭವನ ರಸ್ತೆಯಲ್ಲಿ ಮಳೆಯಲ್ಲಿ ಸಾಗಿದ ಜನರು ಪ್ರಜಾವಾಣಿ ಚಿತ್ರ/ ಎಂ.ಎಸ್‌.ಮಂಜುನಾಥ್‌
ಕಾಡುಬೀಸನಹಳ್ಳಿಯ ವರ್ತುಲ ರಸ್ತೆಯಲ್ಲಿ ಮಳೆನೀರು ನಿಂತು ವಾಹನ ಸಂಚಾರಕ್ಕೆ ತೊಂದರೆಯಾಯಿತು
ಕಾಡುಬೀಸನಹಳ್ಳಿಯ ವರ್ತುಲ ರಸ್ತೆಯಲ್ಲಿ ಮಳೆನೀರು ನಿಂತು ವಾಹನ ಸಂಚಾರಕ್ಕೆ ತೊಂದರೆಯಾಯಿತು
 ದಾಬಸ್ ಪೇಟೆ ಪಟ್ಟಣದಲ್ಲಿ ಗುರುವಾರ ಸಂಜೆ ಸುರಿದ ಮಳೆಯ ಮಧ್ಯೆ ವಾಹನಗಳು ಸಂಚರಿಸಿದವು
 ದಾಬಸ್ ಪೇಟೆ ಪಟ್ಟಣದಲ್ಲಿ ಗುರುವಾರ ಸಂಜೆ ಸುರಿದ ಮಳೆಯ ಮಧ್ಯೆ ವಾಹನಗಳು ಸಂಚರಿಸಿದವು

ಹದವಾದ ಮಳೆ: ಬಿತ್ತನೆಗೆ ತಯಾರಿ

ದಾಬಸ್ ಪೇಟೆ: ಸೋಂಪುರ ಹೋಬಳಿಯಲ್ಲಿ ಹದವಾದ ಮಳೆಯಾಗುತ್ತಿದ್ದು ರೈತರು ಉಳುಮೆ ಹಾಗೂ ಬಿತ್ತನೆ ಕಾರ್ಯದಲ್ಲಿ ತೊಡಗಿದ್ದಾರೆ. ಸೋಂಪುರದಲ್ಲಿ ಐದು ಹಂತಗಳ ಕೈಗಾರಿಕಾ ಪ್ರದೇಶವಿದ್ದರೂ ಕೃಷಿಯಲ್ಲಿ ತೊಡಗಿಸಿಕೊಂಡ ರೈತರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.ರಾಗಿ ಇಲ್ಲಿನ ಮುಖ್ಯ ಬೆಳೆಯಾಗಿದ್ದು ಜೊತೆಗೆ ತೊಗರಿ ಅವರೆ ಅಲಸಂದೆ ಮುಸುಕಿನ ಜೋಳ ಕಡಲೆ ಕಾಯಿಗಳನ್ನು ಸಣ್ಣ ಪ್ರಮಾಣದಲ್ಲಿ ಬೆಳೆಯುತ್ತಾರೆ. ಮುಂಗಾರು ಆರಂಭದಲ್ಲಿ ಬಿತ್ತನೆ ಮಾಡಿದರೆ ಉತ್ತಮ ಫಸಲು ಸಿಗುತ್ತದೆ ಎನ್ನುವುದು ರೈತರ ನಿರೀಕ್ಷೆಯಾಗಿದೆ. ರೈತರು ಮೇವಿಗಾಗಿ ಮುಸುಕಿನ ಜೋಳ ತೊಗರಿ ಅವರೆ ಬಿತ್ತನೆ ಮಾಡಿದ್ದಾರೆ. ರಾಗಿ ಬಿತ್ತನೆಗೆ ಹೊಲಗಳನ್ನು ಹಸನು ಮಾಡಿಕೊಳ್ಳುತ್ತಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT