‘ರಾಜ್ಯೋತ್ಸವ ಪ್ರಶಸ್ತಿಗೆ ಸೆ.1ರಿಂದ ಸೆ.30ರವರೆಗೆ ಸಾಧಕರ ಹೆಸರನ್ನು ನಾಮನಿರ್ದೇಶನ ಮಾಡಲು ಅವಕಾಶ ಕಲ್ಪಿಸಲಾಗಿದೆ. ಕ್ರೀಡಾ ಕ್ಷೇತ್ರ ಹೊರತುಪಡಿಸಿ ಉಳಿದ ಕ್ಷೇತ್ರದ ಸಾಧಕರು 60 ವರ್ಷ ಮೇಲ್ಪಟ್ಟವರಾಗಿರಬೇಕೆಂಬ ನಿರ್ಬಂಧವಿದೆ. ಪ್ರಸ್ತುತ 21 ಬಗೆಯ ಅಂಗವಿಕಲತೆಗಳಿವೆ. ಕೆಲ ವಿಧದ ಅಂಗವಿಕಲತೆಯಿಂದ ಬಳಲುತ್ತಿರುವವರು ವಯಸ್ಸಾಗುತ್ತಿದಂತೆ ದೈಹಿಕ ಸಾಮರ್ಥ್ಯ ಕಳೆದುಕೊಂಡು, ಹಾಸಿಗೆ ಹಿಡಿಯುತ್ತಾರೆ. ಇಂತಹ ಅಂಗವಿಕಲ ಸಾಧಕರಿಗೂ ಅರ್ಜಿ ಸಲ್ಲಿಸಿ, ಪ್ರಶಸ್ತಿ ಸ್ವೀಕರಿಸಲು 60 ವರ್ಷ ನಿಗದಿ ಮಾಡಿರುವುದು ಅವರ ಹಕ್ಕುಗಳನ್ನು ಉಲ್ಲಂಘಿಸಿದಂತಾಗುತ್ತದೆ’ ಎಂದು ತಿಳಿಸಿದ್ದಾರೆ.