ಬೆಂಗಳೂರು: ‘ವಿದ್ಯಾರ್ಥಿಗಳು ತಮ್ಮಲ್ಲಿರುವ ಶಕ್ತಿ, ಸಾಮರ್ಥ್ಯ ಅರಿತುಕೊಂಡು, ನಿಮ್ಮ ಕ್ಷೇತ್ರವನ್ನು ನೀವೇ ಗುರುತಿಸಿಕೊಂಡು ಯಶಸ್ಸು ಕಾಣಬೇಕು’ ಎಂದು ಬೆಂಗಳೂರು ಸಿ- ಡಾಟ್ ಕಂಪನಿಯ ನಿರ್ದೇಶಕ ಡಾ. ದಿಲೀಪ್ ಕೃಷ್ಣಸ್ವಾಮಿ ಹೇಳಿದರು.

ರಾಮಯ್ಯ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಆರ್ಐಟಿ) ಆಯೋಜಿಸಿದ್ದ 2025-26ನೇ ಸಾಲಿನ ಶೈಕ್ಷಣಿಕ ವರ್ಷದ ಮೊದಲ ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ವಿದ್ಯಾರ್ಥಿಗಳು ಎಲ್ಲರೂ ಕೃತಕ ಬುದ್ಧಿಮತ್ತೆ(ಎಐ) ಮೇಲೆಯೇ ಅವಲಂಬಿತರಾಗಬಾರದು. ಈ ತಂತ್ರಜ್ಞಾನ ಉಪಯೋಗಿಸಿಕೊಂಡು ತಮ್ಮ ಪ್ರತಿಭೆಯನ್ನು ತೋರಿಸಬೇಕು’ ಎಂದರು.

ಡಿ.ಎನ್.ವಿ ಬ್ಯುಸಿನೆಸ್ ಅಶ್ಯೂರೆನ್ಸ್ ಕಂಪನಿಯ ಸುಸ್ಥಿರ ಸೇವೆಗಳು ವಿಭಾಗದ ಮುಖ್ಯಸ್ಥ ವಿ.ನಂದ ಕುಮಾರ್ ಮಾತನಾಡಿ, ‘ವಿದ್ಯಾರ್ಥಿಗಳು ಕಾಲೇಜಿನಲ್ಲಿ ಕಲಿಯುವುದರ ಜತೆಗೆ ಹೊರ ಜಗತ್ತಿನಲ್ಲಿ ನಡೆಯುತ್ತಿರುವ ವಿದ್ಯಮಾನಗಳ ಬಗ್ಗೆಯೂ ಅರಿವು ಇಟ್ಟುಕೊಳ್ಳಬೇಕು’ ಎಂದರು.

‘ಎಂಜಿನಿಯರಿಂಗ್ ಕಾಲೇಜು ಆರಂಭವಾದ ಮೇಲೆ ಇದು 64ನೇ ಬ್ಯಾಚ್ ಆಗಿದೆ. ಇಲ್ಲಿ ವ್ಯಾಸಂಗ ಮಾಡಿದ ಬಹುತೇಕ ವಿದ್ಯಾರ್ಥಿಗಳು ಯುಪಿಎಸ್ ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಸಮಾಜದಲ್ಲಿ ಒಳ್ಳೆಯ ಸ್ಥಾನ ಅಲಂಕರಿಸಿದ್ದಾರೆ’ ಎಂದು ಗೋಕುಲ ಎಜುಕೇಷನ್ ಫೌಂಡೇಷನ್ ಅಧ್ಯಕ್ಷ ಎಂ.ಆರ್. ಸೀತಾರಾಂ ಹೇಳಿದರು.

ಗೋಕುಲ ಎಜುಕೇಷನ್ ಫೌಂಡೇಷನ್ ಉಪಾಧ್ಯಕ್ಷ ಎಂ. ಆರ್.ಜಾನಕಿರಾಮ್, ಕಾರ್ಯದರ್ಶಿ ಎಂ.ಆರ್. ಆನಂದ ರಾಮ್, ನಿರ್ದೇಶಕ ಎಂ.ಆರ್. ಕೋದಂಡ ರಾಮ್, ಆರ್ಐಟಿ ಪ್ರಾಂಶುಪಾಲ ಡಾ.ಎನ್.ವಿ.ಆರ್.ನಾಯ್ಡು, ಡಾ.ಎಚ್.ವಿ.ಪಾರ್ಶ್ವನಾಥ್, ಡಾ. ಕರಿಸಿದ್ದಪ್ಪ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.