ಬೆಂಗಳೂರು: ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರದ ವತಿಯಿಂದ ಕನಕ ಸಾಹಿತ್ಯ, ಕೀರ್ತನ ಸಾಹಿತ್ಯ, ತತ್ವಪದ ಸಾಹಿತ್ಯ, ಭಕ್ತಿ ಸಾಹಿತ್ಯ ಮತ್ತು ಸಂತ–ಶರಣರ ಸಾಹಿತ್ಯ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ‘ಪರಾಮರ್ಶನ’ ಗ್ರಂಥಾಲಯ ಸ್ಥಾಪಿಸಲಾಗಿದೆ.

ಕೃತಿಗಳ ಪ್ರಸಾರದ ಜತೆಗೆ, ಈ ಕ್ಷೇತ್ರದಲ್ಲಿ ಅಧ್ಯಯನ ಕೈಗೊಂಡವರಿಗೆ ಒಂದೇ ಸೂರಿನಡಿ ಪುಸ್ತಕಗಳನ್ನು ಒದಗಿಸುವುದು ಗ್ರಂಥಾಲಯ ನಿರ್ಮಾಣದ ಹಿಂದಿನ ಉದ್ದೇಶವಾಗಿದೆ. ಮಲ್ಲತ್ತಹಳ್ಳಿಯ ಕಲಾಗ್ರಾಮದಲ್ಲಿರುವ ಅಧ್ಯಯನ ಕೇಂದ್ರದ ಎರಡನೇ ಮಹಡಿಯಲ್ಲಿ ಈ ಗ್ರಂಥಾಲಯವನ್ನು ಸಜ್ಜುಗೊಳಿಸಲಾಗುತ್ತಿದ್ದು, ಜೂನ್ ಮೊದಲ ವಾರದಲ್ಲಿ ಕಾರ್ಯಾರಂಭಿಸಲಿದೆ.

ವಿವಿಧ ವಿಶ್ವವಿದ್ಯಾಲಯಗಳು, ಕನ್ನಡ ಪರ ಸಂಸ್ಥೆಗಳು ಹಾಗೂ ಪ್ರಕಾಶನ ಸಂಸ್ಥೆಗಳಿಂದ ಕನಕ ಸಾಹಿತ್ಯ, ಕೀರ್ತನ ಸಾಹಿತ್ಯ, ತತ್ವಪದ ಸಾಹಿತ್ಯ, ಭಕ್ತಿ ಸಾಹಿತ್ಯ ಮತ್ತು ಸಂತ–ಶರಣರ ಸಾಹಿತ್ಯಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ಸಂಗ್ರಹಿಸಲಾಗುತ್ತಿದೆ. ಈಗಾಗಲೇ 1,500ಕ್ಕೂ ಅಧಿಕ ಪುಸ್ತಕಗಳನ್ನು ಸಂಗ್ರಹಿಸಲಾಗಿದೆ. ಈ ಸಂಗ್ರಹ ಕಾರ್ಯ ನಿರಂತರ ನಡೆಯಲಿದ್ದು, ಈಗಾಗಲೇ ಸಂಗ್ರಹಿಸಲಾದ ಪುಸ್ತಕಗಳನ್ನು ವಿಭಾಗವಾರು ಇರಿಸಲಾಗಿದೆ.

₹5 ಲಕ್ಷ ಅನುದಾನ: ಈ ಗ್ರಂಥಾಲಯದಲ್ಲಿ ಸಾರ್ವಜನಿಕರಿಗೂ ಪ್ರವೇಶಕ್ಕೆ ಮುಕ್ತ ಅವಕಾಶ ನೀಡಲಾಗುತ್ತದೆ. ಸರ್ಕಾರಿ ರಜಾ ದಿನ ಹೊರತುಪಡಿಸಿ ಉಳಿದ ದಿನ ಬೆಳಿಗ್ಗೆ 10.30ರಿಂದ ಸಂಜೆ 5 ರವರೆಗೆ ಗ್ರಂಥಾಲಯ ತೆರೆದಿರಲಿದೆ.

ಇಲ್ಲಿ ಪುಸ್ತಕಗಳನ್ನು ಕೊಂಡೊಯ್ಯಲು ಅವಕಾಶ ಇರುವುದಿಲ್ಲ. ಬದಲಾಗಿ, ಅಲ್ಲಿಯೇ ಪುಸ್ತಕಗಳನ್ನು ಓದಬೇಕಾಗುತ್ತದೆ. ಸಂಶೋಧಕರು ನಿಗದಿತ ಪುಟಗಳನ್ನು ಜೆರಾಕ್ಸ್ ಮಾಡಿ, ಪಡೆಯುವ ಅವಕಾಶವನ್ನು ಕಲ್ಪಿಸಲಾಗುತ್ತದೆ. ಪುಸ್ತಕಗಳನ್ನು ಕೆಲ ಸಂಸ್ಥೆಗಳು ಉಚಿತ ಹಾಗೂ ರಿಯಾಯಿತಿ ದರದಲ್ಲಿ ಈ ಗ್ರಂಥಾಲಯಕ್ಕೆ ನೀಡುತ್ತಿವೆ. ಪುಸ್ತಕಗಳ ಖರೀದಿಗೆ ಕೇಂದ್ರವು ₹5 ಲಕ್ಷ ಅನುದಾನ ಮೀಸಲಿಟ್ಟಿದೆ.

‘ಓದುಗರಿಗೆ ಸಹಕಾರಿಯಾಗಲು ಗ್ರಂಥಾಲಯದಲ್ಲಿ ಟೇಬಲ್ಗಳನ್ನು ಇರಿಸಲಾಗಿದೆ. ಗುಂಪು ಚರ್ಚೆಗೂ ಅವಕಾಶ ಕಲ್ಪಿಸಲಾಗುತ್ತದೆ. ಹಳೆಯ ಹಾಗೂ ಹೊಸ ಪುಸ್ತಕಗಳನ್ನು ಸಂಗ್ರಹಿಸಲಾಗುತ್ತಿದೆ. ಅಪರೂಪದ ಗ್ರಂಥಗಳು ಕೂಡ ಇಲ್ಲಿ ಇರಲಿವೆ. ಓದಲು ಸೂಕ್ತವಾದ ವಾತಾವರಣ ನಿರ್ಮಿಸಲಾಗಿದೆ. ನಿರಂತರ ಪುಸ್ತಕ ಸಂಗ್ರಹಿಸಲಾಗುವುದು’ ಎಂದು ಕೇಂದ್ರದ ಅಧ್ಯಕ್ಷ ಕಾ.ತ. ಚಿಕ್ಕಣ್ಣ ತಿಳಿಸಿದರು.

ಗ್ರಂಥಾಲಯವನ್ನು ಸಜ್ಜುಗೊಳಿಸಲಾಗಿದ್ದು ಈಗಾಗಲೇ ಸಾವಿರಾರು ಪುಸ್ತಕಗಳನ್ನು ಸಂಗ್ರಹಿಸಲಾಗಿದೆ. ಓದುಗರ ಸ್ಪಂದನೆ ಆಧರಿಸಿ ಭವಿಷ್ಯದಲ್ಲಿ ವಿಸ್ತರಿಸಲಾಗುವುದು.
– ಕಾ.ತ. ಚಿಕ್ಕಣ್ಣ, ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರದ ಅಧ್ಯಕ್ಷ

ತತ್ವಪದಗಳ ಪರಿಭಾಷಾ ಕೋಶ

ತತ್ವಪದ ಸಾಹಿತ್ಯದಲ್ಲಿ ಪ್ರಯೋಗವಾಗಿರುವ ವಿಶಿಷ್ಟ ಪದಗಳ ಪರಿಭಾಷಾ ಕೋಶವನ್ನು ಹೊರತರಲು ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರ ಮುಂದಾಗಿದೆ. ಈ ಪದಕೋಶವು ತತ್ವಪದಗಳಲ್ಲಿ ಪ್ರಯೋಗವಾಗಿರುವ ವಿಶಿಷ್ಟ ಪದಗಳ ಸಾಂಸ್ಕೃತಿಕ ತಾತ್ವಿಕ ಮತ್ತು ಅನುಭಾವಿಕ ಹಿನ್ನೆಲೆಯಲ್ಲಿ ವಿವರಗಳನ್ನು ಒಳಗೊಂಡಿರಲಿದೆ. ಇದಕ್ಕಾಗಿ ಸಂಪಾದಕ ಮಂಡಳಿಯನ್ನು ರಚಿಸಿ ಪದಕೋಶದ ರಚನೆಗೆ ಕೇಂದ್ರವು ಸಿದ್ಧತೆ ಮಾಡಿಕೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.