ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪೀಣ್ಯ ದಾಸರಹಳ್ಳಿ: ಬಸವ, ರೇಣುಕಾಚಾರ್ಯರ ಜಯಂತಿ

Published 19 ಮೇ 2024, 15:28 IST
Last Updated 19 ಮೇ 2024, 15:28 IST
ಅಕ್ಷರ ಗಾತ್ರ

ಪೀಣ್ಯ ದಾಸರಹಳ್ಳಿ: ಚಿಕ್ಕಬಾಣಾವರದ ರಾಘವೇಂದ್ರ ಬಡಾವಣೆಯ ರಾಘವೇಂದ್ರ ಪವನ್ ಮಂದಿರದಲ್ಲಿ ವಿಶ್ವ ವೀರಶೈವ ಲಿಂಗಾಯತ ವೇದಿಕೆ ಹಾಗೂ ವೀರಶೈವ ಲಿಂಗಾಯತ ವೇದಿಕೆಯಿಂದ ಬಸವ ಹಾಗೂ ರೇಣುಕಾಚಾರ್ಯ ಜಯಂತಿ ನಡೆಯಿತು.

ಇದೇ ವೇಳೆ ವೀರಶೈವ ಲಿಂಗಾಯತ ವಟುಗಳಿಗೆ ಉಚಿತ ಲಿಂಗದೀಕ್ಷೆ ನೆರವೇರಿಸಲಾಯಿತು. ಸಮುದಾಯದ ಹಿರಿಯರಿಗೆ ಸನ್ಮಾನ ಮತ್ತು ಸಮುದಾಯದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಯುವಕರಿಗೆ ಸನ್ಮಾನ ಮಾಡಲಾಯಿತು. ಬಸವೇಶ್ವರರ ಮತ್ತು ರೇಣುಕಾಚಾರ್ಯರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ನಡೆಯಿತು.

ವೀರ ಧರ್ಮಸಿಂಹಾಸನ ಸಂಸ್ಥಾನ ಮಠದ ಪಟ್ಟದ ರಾಜೇಶ್ವರ ಶಿವಾಚಾರ್ಯ ಸ್ವಾಮೀಜಿ, ಖಾನಿ ಮಠದ ಬಸವರಾಜ ಸ್ವಾಮೀಜಿ, ಬಸವಜ್ಞಾನ ಸೆಂಟರ್ ಅಧ್ಯಕ್ಷ ಓಂಕಾರೇಶ್ವರಿ ಅವರು ಮಾತನಾಡಿದರು.

ವೇದಿಕೆ ಅಧ್ಯಕ್ಷ ಎಂ.ಎಚ್.ಪಾಟೀಲ, ಸಾಹಿತಿ ವೈ.ಬಿ.ಎಚ್ ಜಯದೇವ್, ಉಪನ್ಯಾಸಕಿ ಸುಜಾತಾ ಮೇಲೇಗೌಡ, ರವಿಕುಮಾರ್, ಸೋಲಾರ್ ಸುಬ್ಬಣ್ಣ, ಗಂಗಾಧರ ಸ್ವಾಮಿ, ಪದಾಧಿಕಾರಿಗಳಾದ ರವಿಕುಮಾರ್, ಕಾಂತರಾಜು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT