ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾನಮತ್ತ ಚಾಲನೆ ವಿರುದ್ಧ ರೇವಾ ಅಭಿಯಾನ ನಾಳೆ

‘ಪ್ರಜಾವಾಣಿ’ ಮತ್ತು ‘ಡೆಕ್ಕನ್ ಹೆರಾಲ್ಡ್’ ಸಹಯೋಗ: ಬೆಳಿಗ್ಗೆ 11 ಗಂಟೆಗೆ ಜಾಗೃತಿ ಆರಂಭ
Last Updated 28 ಡಿಸೆಂಬರ್ 2019, 22:16 IST
ಅಕ್ಷರ ಗಾತ್ರ

ಬೆಂಗಳೂರು: ‌ಹೊಸ ವರ್ಷದ ಆಚರಣೆ ಎಂದರೆ ಅಳತೆಯಿಲ್ಲದೆ ಮದ್ಯಪಾನ ಮಾಡುವುದು, ಕುಣಿದು ಕುಪ್ಪಳಿಸುವುದು, ಅಮಲಿನಲ್ಲಿ ವಾಹನ ಚಾಲನೆ ಮಾಡುವುದು ಎಂಬಂತಾಗಿದೆ. ಮದ್ಯ ಸೇವನೆ ಮಾಡಿ ವಾಹನ ಚಾಲನೆ ಮಾಡಿ ಅಪಾಯ ಮೈಮೇಲೆ ಎಳೆದುಕೊಳ್ಳುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ.

ಇದರ ವಿರುದ್ಧ ಜಾಗೃತಿ ಮೂಡಿಸುವ ಕಾರ್ಯಕ್ಕೆ ರೇವಾ ವಿಶ್ವವಿದ್ಯಾಲಯ ಪ್ರಜಾವಾಣಿ’ ಮತ್ತು ‘ಡೆಕ್ಕನ್ ಹೆರಾಲ್ಡ್’ ಪತ್ರಿಕೆಗಳ ಸಹಯೋಗದಲ್ಲಿ ಆಂದೋಲನ ನಡೆಸುತ್ತಿದೆ.

ರೇವಾ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಮೀಡಿಯಾ ಸ್ಟಡೀಸ್ ವಿಭಾಗದ 70 ವಿದ್ಯಾರ್ಥಿಗಳು ಇದೇ 30ರಂದು ಬೆಳಿಗ್ಗೆ 11 ಗಂಟೆಗೆ ಎರಡು ತಂಡಗಳಾಗಿ ಬೀದಿಗೆ ಇಳಿಯಲಿದ್ದಾರೆ.

ಹೊಸ ವರ್ಷಾಚರಣೆ ಹೆಸರಿನಲ್ಲಿ ಮದ್ಯ ಸಮಾರಾಧನೆ ನಗರದಲ್ಲಿ ಹೆಚ್ಚಾಗಿ ನಡೆಯುವ ನಾಲ್ಕು ಸ್ಥಳಗಳನ್ನು ಗುರುತಿಸಿರುವವಿದ್ಯಾರ್ಥಿಗಳು ಅಲ್ಲಿ ಜಾಗೃತಿ ಅಭಿಯಾನ ನಡೆಸಲಿದ್ದಾರೆ.

ಈ ಆಂದೋಲನದಲ್ಲಿ ವಿದ್ಯಾರ್ಥಿಗಳು ಭಿತ್ತಿಪತ್ರ ಹಿಡಿದು ಜಾಥಾ ನಡೆಸಲಿದ್ದಾರೆ. ಪಾನಮತ್ತರಾಗಿ ವಾಹನ ಚಾಲನೆ ಮಾಡುವುದರಿಂದ ಆಗುವ ಅಪಾಯಗಳನ್ನು ತಿಳಿಸಿಕೊಡುವ ನಿಟ್ಟಿನಲ್ಲಿ ಬೀದಿ ನಾಟಕಗಳನ್ನೂ ಪ್ರದರ್ಶಿಸಲಿದ್ದಾರೆ. ಎಂ.ಜಿ. ರಸ್ತೆಯ ಅನಿಲ್‌ ಕುಂಬ್ಳೆ ವೃತ್ತದಿಂದ ಜಾಗೃತಿ ಜಾಥಾ ಆರಂಭವಾಗಲಿದೆ.

ಮೆಟ್ರೊ ನಿಲ್ದಾಣದ ಬಳಿ ಬೀದಿನಾಟಕ ನಡೆಯಲಿದೆ. ಬಳಿಕ ಬ್ರಿಗೇಡ್ ರಸ್ತೆ ಮೂಲಕ ಟ್ರಿನಿಟಿ ವೃತ್ತಕ್ಕೆ ಜಾಥಾ ಸಂಚರಿಸಲಿದೆ. ಟ್ರಿನಿಟಿ ಮೆಟ್ರೊ ನಿಲ್ದಾಣದ ಸಮೀಪವೂ ಬೀದಿನಾಟಕ ನಡೆಸಲು ಉದ್ದೇಶಿಸಲಾಗಿದೆ. ಅದೇ ತಂಡ ಚರ್ಚ್‌ಸ್ಟ್ರೀಟ್‌ನಲ್ಲೂ ಅಭಿಯಾನ ಮುಂದುವರಿಸಲಿದ್ದು, ಅಲ್ಲಿಯೂ ಬೀದಿನಾಟಕ ಪ್ರದರ್ಶಿಸಲಿದೆ.

ಮತ್ತೊಂದು ತಂಡ ಕೋರಮಂಗಲದಲ್ಲಿ ಮೊದಲಿಗೆ ಅಭಿಯಾನ ನಡೆಸಿ ಬೀದಿನಾಟಕ ಪ್ರದರ್ಶಿಸಲಿದೆ. ಈ ತಂಡದ ವಿದ್ಯಾರ್ಥಿಗಳು ಇಂದಿರಾನಗರಕ್ಕೆ ಜಾಥಾದಲ್ಲಿ ತೆರಳಲಿದ್ದಾರೆ. ಅಲ್ಲಿನ 100 ಅಡಿ ರಸ್ತೆಯಲ್ಲಿ ಜನಸಂದಣೆ ಹೆಚ್ಚಿರುವ ಕಡೆ ಬೀದಿನಾಟಕ ನಡೆಸಲಿದ್ದಾರೆ. ಕುಡಿದು ವಾಹನ ಚಾಲನೆ ಮಾಡುವುದರಿಂದ ಆಗುವ ಕೆಡಕುಗಳನ್ನು ವಿದ್ಯಾರ್ಥಿಗಳು ತಿಳಿಸಿಕೊಡಲಿದ್ದಾರೆ. ವಿದ್ಯಾರ್ಥಿಗಳೊಂದಿಗೆ ಕಾಲೇಜಿನ ಪ್ರಾಧ್ಯಾಪಕರು ಮತ್ತು ಸಿಬ್ಬಂದಿ ಕೂಡ
ಭಾಗವಹಿಸಲಿದ್ದಾರೆ.

*

‘ನಿಮ್ಮ ಜೀವ ದೇಶಕ್ಕೆ ಅಮೂಲ್ಯ’
ನಿಮ್ಮ ಬದುಕನ್ನು ರಕ್ಷಿಸುವುದೆಂದರೆ ನಿಮ್ಮ ಭವಿಷ್ಯವನ್ನು ರಕ್ಷಿಸಿದಂತೆ. ನಿಮ್ಮ ಜೀವವು ನಿಮ್ಮ ಹತ್ತಿರದವರಿಗೆ, ಪ್ರೀತಿಪಾತ್ರರಿಗೆ ಮತ್ತು ದೇಶಕ್ಕೆ ಅಮೂಲ್ಯವಾದುದು. ನಿಮ್ಮ ಜೀವನವು ನೀವು ಯೋಚಿಸುವುದಕ್ಕಿಂತ ಹೆಚ್ಚಿನ ಜನರಿಗೆ ಮುಖ್ಯವಾಗಿದೆ. ಕುಡಿದು ವಾಹನ ಚಲಾಯಿಸಬೇಡಿ,ಮದ್ಯಪಾನ ಸೇವಿಸಿದ್ದರೆ ಉಬರ್‌ನಲ್ಲಿ ಪ್ರಯಾಣಿಸಿ. ಸುರಕ್ಷಿತ 2020ನೇ ವರ್ಷವು ನಿಮ್ಮದಾಗಲಿ. ಹೊಸ ವರ್ಷದ ಶುಭಾಶಯಗಳು.
-ಡಾ. ಪಿ.ಶ್ಯಾಮರಾಜು, ಕುಲಪತಿ, ರೇವಾ ವಿಶ್ವವಿದ್ಯಾಲಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT