ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಸಕರ ಕಚೇರಿ ಎದುರಿನಗುಂಡಿಗಳಿಗೆ ಮುಕ್ತಿ

ಕೆ.ಆರ್. ರಸ್ತೆಯ ಟ್ಯಾಗೋರ್ ವೃತ್ತದ ಕೆಳಸೇತುವೆಯ ಕಸ ತೆರವು
Last Updated 30 ನವೆಂಬರ್ 2019, 4:42 IST
ಅಕ್ಷರ ಗಾತ್ರ

ಬೆಂಗಳೂರು: ನಿತ್ಯ ಸಾವಿರಾರು ವಾಹನಗಳು ಸಂಚರಿಸುವ ಕೃಷ್ಣ ರಾಜೇಂದ್ರ (ಕೆ.ಆರ್.ರಸ್ತೆ) ರಸ್ತೆಯ ಸಾಲು ಸಾಲು ಗುಂಡಿಗಳಿಗೆ ಮುಕ್ತಿ ಸಿಕ್ಕಿದೆ. ಚಿಕ್ಕಪೇಟೆ ಕ್ಷೇತ್ರದ ಶಾಸಕ ಉದಯ ಗರುಡಾಚಾರ್ ಕಚೇರಿ ಮುಂಭಾಗದಲ್ಲಿ ಡಾಂಬರು ಕಿತ್ತು ಹೋಗಿದ್ದ ರಸ್ತೆಯನ್ನೂ ದುರಸ್ತಿ ಮಾಡಲಾಗಿದೆ.

ಲಾಲ್‌ಬಾಗ್‌ ಪಶ್ಚಿಮದ್ವಾರದ ಕಡೆಯಿಂದ ವಾಣಿವಿಲಾಸ ರಸ್ತೆ ಮೂಲಕನೆಟ್ಟಕಲ್ಲಪ್ಪ ವೃತ್ತದ ಕಡೆಗೆ ಸಾಗುವ ವಾಹನಗಳು ಸರ್ವಿಸ್‌ ರಸ್ತೆಯ ಮೂಲಕ ನ್ಯಾಷನಲ್ ಕಾಲೇಜು ಜಂಕ್ಷನ್‌ನಲ್ಲಿ ಕೆ.ಆರ್. ರಸ್ತೆಗೆ ಸಂಪರ್ಕ ಸಾಧಿಸಬೇಕಿದೆ. ಆದರೆ, ಗುಂಡಿಗಳಿಂದ ಕೂಡಿದ್ದ ಸರ್ವಿಸ್ ರಸ್ತೆಯಲ್ಲಿ ಸಾಗಲು ವಾಹನ ಸವಾರರು ಹರಸಾಹಸ ಪಡಬೇಕಿತ್ತು. ಈ ಸಮಸ್ಯೆಯ ಬಗ್ಗೆ ‘ಪ್ರಜಾವಾಣಿ’ ನ.28ಕ್ಕೆ ‘ಶಾಸಕರ ಕಚೇರಿ ಎದುರೇ ಗುಂಡಿ’ ಎಂಬ ಶೀರ್ಷಿಕೆಯಡಿ ವರದಿ ಪ್ರಕಟಿಸಿತ್ತು. ಇದರ ಬೆನ್ನಲ್ಲೇ ಎಚ್ಚೆತ್ತುಕೊಂಡ ಶಾಸಕರು ಗುಂಡಿಗಳನ್ನು ಮುಚ್ಚಿಸಿದ್ದು, ‘ಶೀಘ್ರದಲ್ಲೇ ಹೊಸದಾಗಿ ಡಾಂಬರೀಕರಣ ಮಾಡಲಾಗುವುದು’ ಎಂದು ಭರವಸೆ ನೀಡಿದ್ದಾರೆ.

ಕಸದ ತೊಟ್ಟಿಯಾಗಿ ಮಾರ್ಪಟ್ಟಿದ್ದ ಕೆ.ಆರ್. ರಸ್ತೆಯ ಟ್ಯಾಗೋರ್ ವೃತ್ತದ ಕೆಳಸೇತುವೆಯನ್ನು ಸ್ವಚ್ಛಗೊಳಿಸಲಾಗಿದೆ. ಕಸದಿಂದಾಗಿ ಕೆಳಸೇತುವೆಯಲ್ಲಿ ನೀರು ನಿಲ್ಲುತ್ತಿತ್ತು. ಮಳೆ ಬಂದಾಗ ರಸ್ತೆ ಹೊಳೆಯ ಸ್ವರೂಪ ಪಡೆದುಕೊಳ್ಳುವುದರಿಂದ ವಾಹನ ಸವಾರರು ಕೊಳಚೆ ನೀರಿನಲ್ಲೇ ಸಾಗಬೇಕಾಗಿತ್ತು. ಇದೀಗ ಕಸ ಹಾಕದಂತೆ ಸೂಚನಾ ಫಲಕ ಹಾಕಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT