ರಾಜರಾಜೇಶ್ವರಿನಗರ: ‘ಮಹಿಳಾ ಸಬಲೀಕರಣ, ಅಂಧತ್ವ ನಿವಾರಣೆ, ಆರೋಗ್ಯ, ಶೈಕ್ಷಣಿಕ ಪ್ರಗತಿಗಾಗಿ ರೋಟರಿ ಸಂಸ್ಥೆ ನೂರಾರು ಕೋಟಿ ವೆಚ್ಚದಲ್ಲಿ ವಿವಿಧ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದೆ’ ಎಂದು ರೋಟರಿ 2192 ಡಿಸ್ಟ್ರಿಕ್ಟ್ ಕಾರ್ಯದರ್ಶಿ ಕೆ.ಟಿ.ನಿರಂಜನ್ ಅವರು ಹೇಳಿದರು.
ರೋಟರಿ ಅನಿಕೇತನ, ರೋಟರಿ ಬೆಂಗಳೂರು ಚಿಮ್ನಿ ಹಿಲ್ಸ್‌ನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮತ್ತು ರೋಟರಿ ಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿರುವ ಗಣ್ಯರನ್ನು ಸನ್ಮಾನಿಸಿ ಅವರು ಮಾತನಾಡಿದರು.
‘ಸಾಮಾಜಿಕ, ಶೈಕ್ಷಣಿಕ, ಆರೋಗ್ಯ ಕ್ಷೇತ್ರಗಳು ಹಾಗೂ ಅರಣ್ಯ, ಗ್ರಾಮೀಣಾಭಿವೃದ್ದಿಗಾಗಿ ರೋಟರಿ ಕಂಕಣ ಬದ್ದವಾಗಿದ್ದು, ಸ್ವಯಂಸೇವಾ ಸಂಸ್ಥೆಯಾಗಿ ವಿಶ್ವದಾದ್ಯಂತ ಎಲ್ಲ ವರ್ಗಗಳ ಪ್ರಗತಿಗಾಗಿ ದುಡಿಯುತ್ತಿದೆ’ ಎಂದು ತಿಳಿಸಿದರು.
ರೋಟರಿ ಡಿಸ್ಟ್ರಿಕ್ಟ್ 3190 ಗವರ್ನರ್ ಕೆ.ಎಸ್.ನಾಗೇಂದ್ರ ಅವರು ನೂತನ ಪದಾಧಿಕಾರಿಗಳಿಗೆ ಶುಭ ಕೋರಿದರು. ರೋಟೆರಿಯನ್ ಡಾ.ರಾಜಶೇಖರ್ ಮಾತನಾಡಿದರು.
ರೋಟರಿ ಅನಿಕೇತನ ಅಧ್ಯಕ್ಷರಾಗಿ ಎಂ.ಟಿ.ಕೃಷ್ಣಮೂರ್ತಿ, ಕಾರ್ಯದರ್ಶಿ ಶಿವಲಿಂಗಯ್ಯ ಕೆ.ಟಿ, ರೋಟರಿ ಬೆಂಗಳೂರು ಚಿಮ್ನಿ ಹಿಲ್ಸ್ ಅಧ್ಯಕ್ಷರಾಗಿ ಲಕ್ಷ್ಮೀಶ, ಕಾರ್ಯದರ್ಶಿಯಾಗಿ ಶಿವರಾಜ್.ಜಿ ಭಟ್ ಧಿಕಾರ ಸ್ವೀಕರಿಸಿದರು.