ಬೆಂಗಳೂರು: ‘ಆಧುನಿಕತೆ ಬೆಳೆದಂತೆ ಅವಿಭಕ್ತ ಕುಟುಂಬ ವ್ಯವಸ್ಥೆ ನಶಿಸುತ್ತಿದೆ. ಸ್ವೇಚ್ಛಾಚಾರದ ಬದುಕು ಮಾನವೀಯ ಮೌಲ್ಯಗಳಿಗೆ ಕೊಳ್ಳಿ ಇಟ್ಟಿದೆ. ಜನರು ಸಂಬಂಧಗಳಿಗೆ ಬೆಲೆ ಕೊಡುತ್ತಿಲ್ಲ’ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್ಎಸ್ಎಸ್) ಸರ ಸಂಘ ಚಾಲಕ ಮೋಹನ್ ಭಾಗವತ್ ಹೇಳಿದರು.

ನಗರದಲ್ಲಿ ಶುಕ್ರವಾರ ನಡೆದ ನೆಲೆ ಫೌಂಡೇಷನ್ನ ರಜತ ಮಹೋತ್ಸವದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ‘ಭೌತಿಕ ಜಗತ್ತಿನಲ್ಲಿ ಸಂವೇದನೆ ಹಾಗೂ ಸಂಸ್ಕಾರ ಮಾಯವಾಗಿದೆ. ಸಮಾಜದಲ್ಲಿ ವ್ಯಾವಹಾರಿಕ ಮನಸ್ಥಿತಿ ಹೆಚ್ಚಿದ್ದು, ಜನರು ಪ್ರತಿಯೊಂದರಲ್ಲೂ ಲಾಭ– ನಷ್ಟದ ಯೋಚನೆ ಮಾಡುತ್ತಾರೆ. ಸಮಾಜಕ್ಕೆ ಜಡತ್ವ ಬಂದಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ನಾವು ಎಲ್ಲ ಹಿಂದೂಗಳನ್ನು ಒಂದೇ ಎಂದು ಪರಿಗಣಿಸುತ್ತೇವೆ. ಆದರೆ, ಕೆಲವರು ಜಾತಿಯ ಆಧಾರದಲ್ಲಿ ತಾರತಮ್ಯ ಮಾಡುತ್ತಾರೆ. ಎಲ್ಲ ಹಿಂದೂಗಳನ್ನು ಒಗ್ಗೂಡಿಸಬೇಕು. ಜತೆಗೆ, ಅವರ ಸಂತೋಷ ಹಾಗೂ ದುಃಖದಲ್ಲಿ ಭಾಗಿಯಾಗಬೇಕು’ ಎಂದು ತಿಳಿಸಿದರು.

‘ವಿಜ್ಞಾನದಿಂದ ಜಗತ್ತಿನಲ್ಲಿ ಬದಲಾವಣೆಯಾದರೂ ಜೀವನದ ಸಮಸ್ಯೆಗಳು ಬದಲಾಗಿಲ್ಲ. ಸಮಾಜದಲ್ಲಿ ವಿವಿಧ ಜಾತಿಗಳು, ಧರ್ಮಗಳು, ಪ್ರದೇಶಗಳು ಮತ್ತು ಭಾಷೆಗಳ ನಡುವೆ ಸ್ನೇಹ ಹಾಗೂ ಏಕತೆಯನ್ನು ಉತ್ತೇಜಿಸುವ ಮಹತ್ವವನ್ನು ಒತ್ತಿ ಹೇಳಬೇಕು. ಇದರಿಂದ ಸಾಮರಸ್ಯದ ಸಮಾಜ ಸೃಷ್ಟಿಸಬಹುದು. ಕುಟುಂಬದಲ್ಲಿ ಭಾರತೀಯ ಮೌಲ್ಯಗಳನ್ನು ಉತ್ತೇಜಿಸಿದರೆ ಸಮಾಜವು ಸರಿಯಾದ ದಿಕ್ಕಿನಲ್ಲಿ ಸಾಗಲು ದಾರಿ ಮಾಡಿಕೊಡುತ್ತದೆ’ ಎಂದರು.

‘ನೆಲೆ ಸಂಸ್ಥೆಯು ಲಾಭ ನಷ್ಟಗಳನ್ನು ನೋಡದೆ ಸಂವೇದನೆ ಶೀಲತೆಯಿಂದ ಕೆಲಸ ಮಾಡಿರುವುದು ಸಂತಸದ ವಿಚಾರ. ಈ ಹಿಂದೆ ವಾರನ್ನದ ಪರಿಕಲ್ಪನೆ ಇತ್ತು. ಸಂಕಷ್ಟದಲ್ಲಿನ ಜನರಿಗೆ ಸಮಾಜ ಸ್ಪಂದಿಸುತ್ತಿತ್ತು. ಆದರೆ, ಈಗ ಸೇವೆ ಮಾಡಲು ಸಂಸ್ಥೆಗಳನ್ನು ಸ್ಥಾಪಿಸುವ ಅನಿವಾರ್ಯತೆ ಸೃಷ್ಟಿಯಾಗಿದೆ. ಸೇವೆ ಅನ್ನುವುದು ಸಮಾಜದಲ್ಲಿ ಅಂತರ್ಗತವಾಗಿರಬೇಕೇ ಹೊರತು ಸಂಸ್ಥೆ ಮಾಡಿ ಸೇವೆ ಮಾಡುವ ಸ್ಥಿತಿ ಬರಬಾರದು. ಈ ನಿಟ್ಟಿನಲ್ಲಿ ನೆಲೆ ಸಂಸ್ಥೆ ಮಾಡುತ್ತಿರುವ ಸೇವೆಯು ಸಮಾಜಕ್ಕೆ ಮತ್ತೆ ಈ ರೀತಿ ಯೋಚನೆ ಮಾಡಲು ಪ್ರೇರಣೆ ನೀಡಲಿ’ ಎಂದು ಅವರು ಹೇಳಿದರು

ನೆಲೆ ಫೌಂಡೇಷನ್ನ ರಜತ ಮಹೋತ್ಸವದ ಸ್ಮರಣ ಸಂಚಿಕೆ ‘ಬೆಳ್ಳಿ ಬೆಳಕು' ಹಾಗೂ ವಾರಪತ್ರಿಕೆ `ವಿಕ್ರಮ' ಬಿಡುಗಡೆ ಮಾಡಲಾಯಿತು. ನೆಲೆ ಫೌಂಡೇಷನ್ ಅಧ್ಯಕ್ಷ ಡಿ.ಶಿವಕುಮಾರ್, ರಜತ ಮಹೋತ್ಸವ ಸ್ವಾಗತ ಸಮಿತಿ ಅಧ್ಯಕ್ಷ ಶ್ರೀನಾಥ್ ಬೈಸಾನಿ, ಹಿಂದೂ ಸೇವಾ ಪ್ರತಿಷ್ಠಾನದ ನಿರ್ದೇಶಕ ಸುರೇಶ್ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.