ಗುರುವಾರ , ಜೂನ್ 30, 2022
23 °C

ವಿದೇಶಗಳಿಂದ ಬಂದ 7 ಮಂದಿಗೆ ಕೋವಿಡ್ ಸೋಂಕು ದೃಢ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೇವನಹಳ್ಳಿ: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವಿದೇಶಗಳಿಂದ ಬಂದಿರುವ 7 ಮಂದಿಗೆ ಕೋವಿಡ್ ಸೋಂಕು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಕೆ. ಶ್ರೀನಿವಾಸ್ ತಿಳಿಸಿದ್ದಾರೆ.

ಬುಧವಾರ ರಾತ್ರಿ 11.30ಕ್ಕೆ ಇಂಗ್ಲೆಂಡ್‌ನಿಂದ ಬಂದಿರುವ 35 ವರ್ಷದ ಮಹಿಳೆ, 38 ವರ್ಷದ ಪುರುಷನಿಗೆ ಕೋವಿಡ್ ದೃಢಪಟ್ಟಿದೆ.

ಗುರುವಾರ ಮುಂಜಾನೆ ಬಂದಿರುವ ಪ್ರಯಾಣಿಕರಲ್ಲಿ 79 ವರ್ಷದ ವೃದ್ಧ, 24 ವರ್ಷದ ಪುರುಷ, 11 ವರ್ಷದ ಬಾಲಕಿ, 61 ವರ್ಷದ ಪುರುಷ ಹಾಗೂ ಶಾರ್ಜಾದಿಂದ ಬಂದಿರುವ 19 ವರ್ಷದ ಯುವತಿಯಲ್ಲಿ ಕೋವಿಡ್ ಸೋಂಕು ದೃಢಪಟ್ಟಿದೆ ಎಂದು ತಿಳಿಸಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು