ಬೆಂಗಳೂರು: ರಾಜ್ಯದ ಎರಡು ಜಿಲ್ಲೆಗಳಲ್ಲಿನ ಜೇನು ಗೂಡುಗಳಿಗೆ ‘ಸ್ಮಾಲ್ ಹೈವ್ ಬೀಟಲ್’ ಎಂಬ ಹೊಸ ಕೀಟ ದಾಳಿ ಮಾಡಿದ್ದು, ಇದರಿಂದ ಜೇನು ಸಾಕಣೆ ಉದ್ಯಮಕ್ಕೆ ದೊಡ್ಡಪೆಟ್ಟು ಬೀಳುವ ಸಾಧ್ಯತೆ ಇದೆ ಎಂದು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಜೇನುಕೃಷಿ ವಿಜ್ಞಾನಿಗಳ ತಂಡ ನಡೆಸಿರುವ ಸಮೀಕ್ಷೆಯಲ್ಲಿ ತಿಳಿಸಿದೆ.

ಜೇನುಕೃಷಿ ವಿಭಾಗದ ವಿಜ್ಞಾನಿ ಕೆ.ಟಿ.ವಿಜಯಕುಮಾರ್ ಮತ್ತು ತಂಡ, ಒಂದು ವರ್ಷದಿಂದ ರಾಜ್ಯದ 13 ಜಿಲ್ಲೆಗಳಲ್ಲಿ ಸಮೀಕ್ಷೆ ನಡೆಸಿದ್ದು, ಇದರಲ್ಲಿ ಎರಡು ಜಿಲ್ಲೆಗಳ ಆರು ಪ್ರದೇಶಗಳಲ್ಲಿರುವ ಜೇನುಗೂಡುಗಳಲ್ಲಿ ಸ್ಮಾಲ್ ಹೈವ್ ಬೀಟಲ್ ಬಾಧೆ ಕಂಡು ಬಂದಿದೆ.

ಬೆಂಗಳೂರಿನ ಪೀಣ್ಯ ಮತ್ತು ಕೃಷಿ ವಿಶ್ವವಿದ್ಯಾಲಯದಲ್ಲಿರುವ ಯುರೋಪಿಯನ್ ಜೇನು ಕುಟುಂಬಗಳಲ್ಲಿ (ಎಫಿಸ್ ಮೆಲ್ಲಿಫೆರಾ) ಹಾಗೂ ಮೈಸೂರು ಜಿಲ್ಲೆಯ ರಾಜನಗರ, ದೇವರಾಯಸೆಟ್ಟಿಪುರ, ಹೆಡಿಯಾಲ, ಚಿಲಕಹಳ್ಳಿ, ನಂಜನಗೂಡು ಮತ್ತು ಗಣೇಶಪುರದಲ್ಲಿರುವ ತುಡುವೆ ಜೇನು ಕುಟುಂಬಗಳಲ್ಲಿ (ಎಫಿಸ್ ಸೆರಾನಾ) ಈ ಕೀಟ ಬಾಧೆಯನ್ನು ವಿಜ್ಞಾನಿಗಳ ತಂಡ ಗುರುತಿಸಿದೆ.

ಸಮೀಕ್ಷೆಗೊಳಪಡಿಸಿದ 480 ತುಡುವೆ ಜೇನು ಕುಟುಂಬಗಳಲ್ಲಿ, ಶೇ 58.33 ಕೀಟಬಾಧೆಯನ್ನು ಗುರುತಿಸಲಾಗಿದೆ. ಕೀಟಬಾಧೆಯಿಂದಾಗಿ ಈ ಆರು ಪ್ರದೇಶಗಳಲ್ಲಿ ಒಂದು ತಿಂಗಳಲ್ಲಿ 280 ತುಡುವೆ ಜೇನು ಕುಟುಂಬಗಳು ಗೂಡು ತೊರೆದಿರುವುದನ್ನು ಸಮೀಕ್ಷೆ ವೇಳೆ ಗುರುತಿಸಲಾಗಿದೆ. ಇದು ಆತಂಕಕಾರಿ ಬೆಳವಣಿಗೆ’ ಎಂದು ವಿಜ್ಞಾನಿಗಳು ವರದಿಯಲ್ಲಿ ತಿಳಿಸಿದ್ದಾರೆ.

ಜೇನು ಸಾಕಣೆ ಹೆಚ್ಚಾಗಿರುವ ಮಲೆನಾಡು ಮತ್ತು ಕರಾವಳಿ ಭಾಗಕ್ಕೆ ‘ಬೀಟಲ್’ ಕಾಟ ವಿಸ್ತರಿಸಿದರೆ ಬಹುದೊಡ್ಡ ಆರ್ಥಿಕ ನಷ್ಟ ಉಂಟಾಗುತ್ತದೆ. ಭಾರತದ ಜೇನು ಉದ್ಯಮದ ಆಧಾರಸ್ತಂಭವಾಗಿರುವ ಮೆಲ್ಲಿಫೆರಾ ಮತ್ತು ತುಡುವೆ ಜೇನು ಪ್ರಭೇದಗಳ ಮೇಲೆ ಕೀಟ ಹೆಚ್ಚು ಹಾನಿ ಮಾಡುತ್ತಿರುವುದರಿಂದ, ದೇಶದ ಜೇನು ಉತ್ಪಾದನೆಯ ಮೇಲೆ ಹೆಚ್ಚು ಪೆಟ್ಟು ಬೀಳುತ್ತದೆ ಎಂದು ವಿಜ್ಞಾನಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ವಿಜ್ಞಾನಿಗಳ ತಂಡ ಈ ಸಮೀಕ್ಷಾ ವರದಿಯನ್ನು ತೋಟಗಾರಿಕೆ ಇಲಾಖೆಗೆ ಸಲ್ಲಿಸಿದೆ. ವರದಿ ಸ್ವೀಕರಿಸಿರುವ ಇಲಾಖೆಯ ನಿರ್ದೇಶಕರು. ‘ಈ ಕೀಟ ಬಾಧೆ ಮತ್ತು ನಿರ್ವಹಣೆ ಕುರಿತು ಜೇನು ಕೃಷಿಕರು, ಜೇನು ಕೃಷಿ ಸಂಘ ಸಂಸ್ಥೆಗಳು, ಅನುಮೋದಿತ ಜೇನು ಕುಟುಂಬ ಮತ್ತು ಪೆಟ್ಟಿಗೆ ಸರಬರಾಜು ಮಾಡುವವರಿಗೆ ಮಾಹಿತಿ ನೀಡಿ. ಕೀಟ ನಿಯಂತ್ರಣಕ್ಕೆ ಕೈಗೊಂಡ ಕ್ರಮಗಳ ಬಗ್ಗೆ ವರದಿ ಸಲ್ಲಿಸುವಂತೆ ಎಲ್ಲ ಜಿಲ್ಲಾ ಉಪ ನಿರ್ದೇಶಕರಿಗೆ ಸೂಚಿಸಿದ್ದಾರೆ.

ಸ್ಮಾಲ್ ಹೈವ್ ಬೀಟಲ್ ಕೀಟ ಬಾಧೆ ಬೇರೆ ಜಿಲ್ಲೆಗಳಿಗೆ ಹಬ್ಬದಂತೆ ತಡೆಯಬೇಕಿದೆ. ಈ ಕೀಟವನ್ನು ಹೇಗೆ ಸಮಗ್ರವಾಗಿ ನಿರ್ವಹಣೆ ಮಾಡಬೇಕು ಎಂಬುದರ ಕುರಿತು ಸಂಶೋಧನೆ ನಡೆಸುತ್ತಿದ್ದೇವೆ
ಕೆ.ಟಿ.ವಿಜಯಕುಮಾರ್ ವಿಜ್ಞಾನಿಗಳು ಜೇನು ಕೃಷಿ ವಿಭಾಗ ಜಿಕೆವಿಕೆ ಬೆಂಗಳೂರು

ಜೇನು ಕೃಷಿಕರು ಏನು ಮಾಡಬೇಕು?

*ಸೋಂಕಿತ ಜೇನು ಕುಟುಂಬಗಳ ವರ್ಗಾವಣೆ ಹಾಗೂ ಖರೀದಿ (ವಿಶೇಷವಾಗಿ ಮೆಲ್ಲಿಫೆರಾ) ನಿರ್ಬಂಧಿಸಬೇಕು.

*ಎಲ್ಲಾ ಸೋಂಕಿತ ಜೇನುಗೂಡುಗಳನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಬೇಕು. ಸೋಂಕಿತ ಖಾಲಿ ಎರಿಗಳನ್ನು ಸುಟ್ಟು ಹಾಕಬೇಕು.

ಎಲ್ಲಿಂದ ಬಂದಿರಬಹುದು? ಸ್ಮಾಲ್ ಹೈವ್ ಬೀಟಲ್ ಕೀಟವು ಬಾಂಗ್ಲಾದೇಶದಿಂದ ಭಾರತಕ್ಕೆ ಬಂದಿರಬಹುದು. ಅಲ್ಲಿಂದ ಅಸ್ಸಾಂ ಬಿಹಾರ ಉತ್ತರ ಪ್ರದೇಶ ಆಂಧ್ರದ ಮೂಲಕ ಕರ್ನಾಟಕ ಪ್ರವೇಶಿಸಿರುವ ಸಾಧ್ಯತೆ ಇದೆ ಎಂದು ವಿಜ್ಞಾನಿಗಳು ಶಂಕಿಸಿದ್ದಾರೆ. ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ ತುಡುವೆ ಜೇನುಗೂಡಿನಲ್ಲಿ ಈ ಕೀಟಬಾಧೆ ಕಾಣಿಸಿದೆ.

ಕೀಟದ ಹಾವಳಿ ಸ್ಮಾಲ್ ಹೈವ್ ಬೀಟಲ್ ಕೀಟಗಳು ಲಾರ್ವ ಹಂತದಲ್ಲಿದ್ದಾಗ ಇಡೀ ಜೇನು ಗೂಡನ್ನು ಆವರಿಸಿಕೊಳ್ಳುತ್ತವೆ. ಮೊದಲು ಜೇನು ತುಪ್ಪ ತಿನ್ನಲು ಶುರು ಮಾಡುತ್ತವೆ. ಅವುಗಳ ಬಾಯಿಯ ಭಾಗ ಬೆಳೆದ ನಂತರ ಮೇಣವನ್ನು ತಿನ್ನಲು ಪ್ರಾರಂಭಿಸುತ್ತವೆ. ಆಗ ಕೀಟಬಾಧೆ ತಾಳಲಾರದೇ ತುಡುವೆ ಜೇನುಗಳಾದರೆ ಗೂಡು ಬಿಟ್ಟು ಹೋಗುತ್ತವೆ ಮೆಲ್ಲಿಪೆರಾ ನೊಣಗಳಾದರೆ ಜೇನುಪೆಟ್ಟಿಗೆಯಲ್ಲಿ ನಶಿಸುತ್ತವೆ. ಮರಿಹುಳುಗಳು ಜೇನುಗೂಡಿನ ಎರಿಗಳಲ್ಲಿ ವಿಶಿಷ್ಟವಾದ ಲೋಳೆಯನ್ನು ಸ್ರವಿಸಿ ತುಪ್ಪವನ್ನು ಹುಳಿಗೊಳಿಸಿ ಅದರ ಗುಣಮಟ್ಟವನ್ನು ಕುಗ್ಗಿಸುತ್ತವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.