ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಬರ್ಬನ್ ರೈಲು: 31 ಮೀ. ಉದ್ದದ ಯು-ಗರ್ಡರ್ ಸಿದ್ಧ

Published 7 ಜನವರಿ 2024, 15:50 IST
Last Updated 7 ಜನವರಿ 2024, 15:50 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ಉಪನಗರ ರೈಲು ಯೋಜನೆಯ (ಬಿಎಸ್‌ಆರ್‌ಪಿ) ಕಾರಿಡಾರ್-2ರಲ್ಲಿ ಅಳವಡಿಸಲು 31 ಮೀಟರ್‌ ಉದ್ದದ ಯು-ಗರ್ಡರ್ ಸಿದ್ಧಗೊಂಡಿದೆ. ಭಾರತದಲ್ಲಿಯೇ ಅತಿ ಉದ್ದದ ಗರ್ಡರ್‌ ಇದಾಗಿದೆ.

ದೇವನಹಳ್ಳಿಯಲ್ಲಿರುವ ತಯಾರಿಕಾ ಯಾರ್ಡ್‌ನಲ್ಲಿ (ಕಾಸ್ಟಿಂಗ್ ಯಾರ್ಡ್) ಇದನ್ನು ತಯಾರಿಸಲಾಗಿದೆ. ದೇಶದ ಮೆಟ್ರೊ ಮಾರ್ಗಗಳಲ್ಲಿ 28 ಮೀಟರ್‌ ಉದ್ದದ ’ಯು‘ ಗರ್ಡರ್‌ (ಯು ಆಕಾರದ ಸಿಮೆಂಟ್‌–ಕಬ್ಬಿಣದ ತೊಲೆ) ಅಳವಡಿಸಿರುವುದೇ ಇಲ್ಲಿವರೆಗಿನ ಉದ್ದದ ಯು ಗರ್ಡರ್‌ ಎಂದು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ ತಿಳಿಸಿದ್ದಾರೆ.

ಕಾರಿಡಾರ್‌–2 (ಮಲ್ಲಿಗೆ ಮಾರ್ಗ) ಕಾಮಗಾರಿ ಭರದಿಂದ ಸಾಗುತ್ತಿದ್ದು, ಈ ಮಾರ್ಗದಲ್ಲಿ ಯಶವಂತಪುರ–ಹೆಬ್ಬಾಳ ನಡುವಿನ 8 ಕಿ.ಮೀ.ನಲ್ಲಿ 450 ಯು-ಗರ್ಡರ್‌ ಅಳವಡಿಕೆಯಾಗಲಿದೆ ಎಂದು ಮಾಹಿತಿ ನೀಡಿದ್ದಾರೆ.

ಪ್ರತಿ ಗರ್ಡರ್ ತಯಾರಿಕೆಗೆ ಎಂ60 ಗುಣಮಟ್ಟದ 69.5 ಕ್ಯೂಬಿಕ್ ಮೀಟರ್ ಕಾಂಕ್ರೀಟ್ ಬೇಕಾಗುತ್ತದೆ. ಒಂದು ಗರ್ಡರ್‌ 178 ಟನ್ ಭಾರವಿರುತ್ತದೆ. ಕಾಸ್ಟಿಂಗ್ ಯಾರ್ಡ್‌ನಲ್ಲಿ ತಯಾರಿಸಿ ಬಳಿಕ ತಂದು ಅಳವಡಿಸುವುದರಿಂದ ಕಾಮಗಾರಿಗೆ ತಗುಲುವ ಸಮಯ ಉಳಿತಾಯವಾಗುತ್ತದೆ. ಇದನ್ನು ಆಸ್ ಸಿಸ್ಟಮ್ ಕಂಪನಿಯು ಬೆಂಗಳೂರು ಉಪನಗರ ರೈಲು ಯೋಜನೆಗಾಗಿ ವಿನ್ಯಾಸಗೊಳಿಸಿದ್ದು, ಚೆನ್ನೈನ ಐಐಟಿ ಮತ್ತು ಜನರಲ್ ಕನ್ಸಲ್ಟೆಂಟ್ ಕಂಪನಿಗಳು ಕೂಡ ಇದರಲ್ಲಿ ಸಕ್ರಿಯ ಪಾತ್ರ ವಹಿಸಿವೆ. ಗುಣಮಟ್ಟವನ್ನು ಖಾತ್ರಿಪಡಿಸಿವೆ ಎಂದು ವಿವರಿಸಿದ್ದಾರೆ.

ಸರ್ಕಾರಿ ಸ್ವಾಮ್ಯದ ಕೆ-ರೈಡ್ ಇದರ ಉಸ್ತುವಾರಿ ಮತ್ತು ಗುಣಮಟ್ಟ ನಿಯಂತ್ರಣಗಳನ್ನು ನೋಡಿಕೊಂಡಿದೆ. ಗರ್ಡರ್ ಅಳವಡಿಸುವುದರಿಂದ ನೇರವಾಗಿ ಹಳಿಗಳನ್ನು ಅಳವಡಿಸಲು ಸಾಧ್ಯವಾಗಲಿದೆ ಎಂದು ಸಚಿವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT