ಬೆಂಗಳೂರು: ಸರ್ಕಾರಿ ಶಾಲಾ ಶಿಕ್ಷಕಿಗೆ ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲವಾಗಿ ನಿಂದಿಸಿ, ಅತ್ಯಾಚಾರದ ಬೆದರಿಕೆಯ ಪೋಸ್ಟ್ ಹಾಕಿದ ಆರೋಪದ ಮೇಲೆ 12 ವ್ಯಕ್ತಿಗಳ ಮೇಲೆ ಗೋವಿಂದರಾಜನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸಂಬಂಧ ಸಂತ್ರಸ್ತ ಶಿಕ್ಷಕಿಯ ಪತಿ ನೀಡಿರುವ ದೂರು ಆಧರಿಸಿ, ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದಾರೆ.

‘ಶಾಲಾ ಶಿಕ್ಷಕಿಯಾಗಿರುವ ಪತ್ನಿಗೆ ಆರೋಪಿಗಳು ಜಾಲತಾಣದಲ್ಲಿಅಶ್ಲೀಲ ಪೋಸ್ಟ್ಗಳನ್ನು ಹಾಕಿ, ಮಾನಸಿಕವಾಗಿ ಹಿಂಸಿಸುತ್ತಿದ್ದಾರೆ. ಅಲ್ಲದೆ, ಪತ್ನಿಗೆ ಅತ್ಯಾಚಾರದ ಬೆದರಿಕೆ ಹಾಕಿದ್ದಾರೆ. ಹೀಗಾಗಿ, ಪತ್ನಿಯು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕರ್ತವ್ಯಕ್ಕೆ ಹೋಗಲು ಭಯಪಡುವ ಪರಿಸ್ಥಿತಿ ಸೃಷ್ಟಿಯಾಗಿದೆ. ಅಶ್ಲೀಲ ಪೋಸ್ಟ್ಗಳಿಂದ ಪತ್ನಿಯ ಭದ್ರತೆ ಮತ್ತು ಖಾಸಗಿತನಕ್ಕೆ ಧಕ್ಕೆಯಾಗಿದ್ದು, ಆರೋಪಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು’ ಎಂದು ದೂರುದಾರರು ಪೊಲೀಸರಿಗೆ ಮನವಿ ಮಾಡಿದ್ದಾರೆ.

‘ಖದರ್ ಕನ್ನಡಿಗ’ ಎಂಬ ಫೇಸ್ ಬುಕ್ ಪೇಜ್ನಲ್ಲಿ ಅಶ್ಲೀಲವಾಗಿ ಪೋಸ್ಟ್ ಹಾಕಲಾಗಿದೆ. ಅನುಮತಿ ಇಲ್ಲದೆ ಮಗುವಿನ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ‘ಖದರ್ ಕನ್ನಡಿಗ’ ಫೇಸ್ಬುಕ್ ಪೇಜ್ ಮಾತ್ರವಲ್ಲದೇ ನವೀನ್ ನವೀನ್, ಹರೀಶ್ ನಾಯ್ಕ್, ಕೆಂಚ ತೂಗುದೀಪ, ಭೀಮ್ಸ್ ಬೋಸಾಯಮ್, ಮಾಕ್ಸ್ವೇಲ್ ಗೌತಮ್, ರವಿ ದರ್ಶನ್, ಪ್ರವೀನ್ ಶೆಟ್ಟಿ, ಇಡ್ಲಿ ಸೋಮ, ರಮೇಶ್ ನಾಗಪ್ಪ, ಶಿವು ತೂಗುದೀಪ ಎಂಬ ಖಾತೆಗಳಿಂದ ಅಶ್ಲೀಲ ಸಂದೇಶ ಕಳುಹಿಸಲಾಗಿದೆ. ಪತ್ನಿಯ ಭದ್ರತೆ ಹಾಗೂ ಖಾಸಗಿತನಕ್ಕೆ ಧಕ್ಕೆ ಬಂದಿದ್ದು, ಕಿಡಿಗೇಡಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಿ ಕುಟುಂಬಕ್ಕೆ ರಕ್ಷಣೆ ನೀಡಬೇಕು’ ಎಂದು ಮನವಿ ಮಾಡಿದ್ದಾರೆ.

ಈ ವಿಚಾರಕ್ಕೆ ಸಂಬಂಧಿಸಿದ ಲಿಂಕ್ ವಿವರವನ್ನೂ ದೂರಿನಲ್ಲಿ ಉಲೇಖಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.