ಮಂಗಳವಾರ, 27 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ ವರದಿ ಫಲಶ್ರುತಿ: ರಸ್ತೆ ಸರಿಪಡಿಸಿದ ಜಲ ಮಂಡಳಿ

Published 21 ಡಿಸೆಂಬರ್ 2023, 23:30 IST
Last Updated 21 ಡಿಸೆಂಬರ್ 2023, 23:30 IST
ಅಕ್ಷರ ಗಾತ್ರ

ಪೀಣ್ಯ ದಾಸರಹಳ್ಳಿ: ನಾಗಸಂದ್ರ ಮೆಟ್ರೊ ಸ್ಟೇಷನ್ ಪ್ರವೇಶ ದ್ವಾರದ ಬಳಿ ಕುಸಿದಿದ್ದ ರಸ್ತೆಯನ್ನು ಜಲಮಂಡಳಿ ಅಧಿಕಾರಿಗಳು ಗುರುವಾರ ಸರಿಪಡಿಸಿದ್ದಾರೆ.

ಮೆಟ್ರೊ ಸ್ಟೇಷನ್ ಪ್ರವೇಶ ದ್ವಾರದ ಬಳಿ ಮಂಜುನಾಥ ನಗರದ ಕಡೆ ಹೋಗುವ ರಸ್ತೆಯಲ್ಲಿ 5 ದಿನಗಳ ಹಿಂದೆ ಭಾರಿ ವಾಹನವೊಂದು ಚಲಿಸಿದ್ದರಿಂದ ರಸ್ತೆ ಕುಸಿದಿತ್ತು. ನೀರಿನ ಸಂಪರ್ಕಕ್ಕಾಗಿ ಪೈಪ್ ಅಳವಡಿಸಲು ಜಲಮಂಡಳಿ ಗುಂಡಿ ತೆಗೆದಿತ್ತು. ಕಾಮಗಾರಿ ಮುಗಿದ ಮೇಲೆ ಸಮರ್ಪಕವಾಗಿ ಮುಚ್ಚದೇ ಇರುವುದು ರಸ್ತೆ ಕುಸಿಯಲು ಕಾರಣವಾಗಿತ್ತು. ಮೆಟ್ರೊ ರೈಲು ನಿಲ್ದಾಣಕ್ಕೆ ಬಂದು ಹೋಗುವವರಿಗೆ ಇದರಿಂದ ತೊಂದರೆಯಾಗುತ್ತಿತ್ತು.

ಈ ಸಮಸ್ಯೆಯ ಬಗ್ಗೆ ಬುಧವಾರ ‘ಪ್ರಜಾವಾಣಿ’ ವರದಿ ಪ್ರಕಟಿಸಿತ್ತು. ಎಚ್ಚೆತ್ತ ಜಲ ಮಂಡಳಿ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲಿಸಿ, ಕುಸಿದಿದ್ದ ಗುಂಡಿಯನ್ನು ಮುಚ್ಚಿಸಿ ಅದರ ಮೇಲೆ ಜಲ್ಲಿಕಲ್ಲು ಹಾಕಿಸಿದ್ದಾರೆ.

‘ನೀರಿನ ಪೈಪ್ ನೇರ ಸಂಪರ್ಕ ಕಲ್ಪಿಸಿ ಗುಂಡಿಯನ್ನು ಮುಚ್ಚಿದ್ದೇವೆ. ಒಂದೆರಡು ದಿನಗಳ ನಂತರ ಕಾಂಕ್ರೀಟ್‌ ಹಾಕಲಾಗುತ್ತದೆ’ ಎಂದು ಜಲಮಂಡಳಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ನಾಗರಾಜು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT