ಶನಿವಾರ, ಜುಲೈ 24, 2021
28 °C

‘ಶ್ರೀಮಂತ’ನಾಗಿ ಓಡಾಡಲು ಕಳ್ಳತನ ಮಾಡುತ್ತಿದ್ದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ತಮ್ಮೂರಿನ ಜನರ ಎದುರು ಶ್ರೀಮಂತನಂತೆ ಬಿಂಬಿಸಿಕೊಂಡು ಓಡಾಡಬೇಕೆಂದು ನಗರದ ಮನೆಗಳಲ್ಲಿ ಕಳವು ಮಾಡುತ್ತಿದ್ದ ಆರೋಪಿ ಮಂಜ ಅಲಿಯಾಸ್ ಪುಳಂಗ ಎಂಬಾತನನ್ನು ಕೋರಮಂಗಲ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ಮಂಡ್ಯದ ಮಂಜ, ಹಲವು ವರ್ಷಗಳಿಂದ ಒಬ್ಬನೇ ಕೃತ್ಯ ಎಸಗುತ್ತಿದ್ದ. ಸದ್ಯ ಆತನಿಂದ ₹ 25 ಲಕ್ಷ ಮೌಲ್ಯದ ಚಿನ್ನಾಭರಣ, ಐದು ದ್ವಿಚಕ್ರ ವಾಹನ ಹಾಗೂ ಕಾರು ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.

‘ತಮ್ಮೂರಿನಲ್ಲಿ ಶ್ರೀಮಂತನಂತೆ ಬಿಂಬಿಸಿಕೊಳ್ಳುತ್ತಿದ್ದ ಆರೋಪಿ, ಅದಕ್ಕೆ ತಕ್ಕಂತೆ ಶೋಕಿ ಮಾಡುತ್ತಿದ್ದ. ಕದ್ದ ಆಭರಣಗಳನ್ನು ಗಿರವಿ ಅಂಗಡಿಯಲ್ಲಿ ಅಡವಿಟ್ಟು ಅದೇ ಹಣದಲ್ಲಿ ಐಷಾರಾಮಿ ಜೀವನ ನಡೆಸುತ್ತಿದ್ದ. ಕೆಲ ಯುವತಿಯರ ಜೊತೆಯೂ ಸಲುಗೆ ಇಟ್ಟುಕೊಂಡಿದ್ದ ಈತ, ಅವರಿಗೂ ಉಡುಗೊರೆಗಳನ್ನು ನೀಡುತ್ತಿದ್ದ’ ಎಂದೂ ಹೇಳಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು