ಬೆಂಗಳೂರು: ‘ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರೆಸ್ಸೆಸ್) ಪದ್ಧತಿಯಲ್ಲಿ ವ್ಯಕ್ತಿಗಳ ಸ್ಮಾರಕಕ್ಕೆ ಅವಕಾಶವಿಲ್ಲ. ಸಮಾಜಕ್ಕೆ ವ್ಯಕ್ತಿಯೊಬ್ಬರ ಸಾಧನೆ ಪ್ರೇರಣೆಯಾಗಲಿ ಎಂಬ ಉದ್ದೇಶದಿಂದ ಶಿಷ್ಟಾಚಾರ ಮೀರಿ, ಮೈ.ಚ. ಜಯದೇವ ಅವರ ಹೆಸರಿನಲ್ಲಿ ಆಸ್ಪತ್ರೆ ನಿರ್ಮಿಸಲಾಗಿದೆ’ ಎಂದುಆರೆಸ್ಸೆಸ್ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ತಿಳಿಸಿದರು.

ರಾಷ್ಟ್ರೋತ್ಥಾನ ಪರಿಷತ್ತು ಸೋಮವಾರ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ‘ಜಯದೇವ ಸ್ಮಾರಕ ರಾಷ್ಟ್ರೋತ್ಥಾನ ಆಸ್ಪತ್ರೆ’ ಉದ್ಘಾಟಿಸಲಾಯಿತು.

‘ರಾಷ್ಟ್ರೋತ್ಥಾನ ಪರಿಷತ್ತನ್ನು ಕಟ್ಟಿ ಬೆಳೆಸಿದ ಜಯದೇವ ಅವರು, ದೂರದರ್ಶಿ ಚಿಂತನೆ ಹಾಗೂ ರಾಷ್ಟ್ರ ನಿಷ್ಠ ಕರ್ತವ್ಯಪ್ರಜ್ಞೆ ಹೊಂದಿದ್ದರು. ರಾಷ್ಟ್ರೋತ್ಥಾನ ಪರಿಷತ್ತಿನ ಕಾರ್ಯ ಗಳಿಗೆ ಚೇತನರಾಗಿದ್ದ ಅವರು, ನೂರಾರು ಜನರ ಬದುಕಿಗೆ ಶಿಲ್ಪಿಯಾಗಿ ದ್ದರು. ಆದ್ದರಿಂದ ಅವರ ಹೆಸರಿನಲ್ಲಿ ಆಸ್ಪತ್ರೆ ನಿರ್ಮಿಸಲಾಗಿದೆ. ಜಗತ್ತಿಗೆ ‘ಸರ್ವೇ ಸಂತು ನಿರಾಮಯ’ ಎಂದು ಹರಸಿದ ದೇಶ ನಮ್ಮದು. ಆದ್ದ ರಿಂದ ಆರೋಗ್ಯ ಪೂರ್ಣ ಸಮಾಜ ನಿರ್ಮಾಣ ನಮ್ಮ ಕರ್ತವ್ಯ. ಇತ್ತೀಚಿನ ದಿನಗಳಲ್ಲಿ ಜೀವನಶೈಲಿ ಆಧಾರಿತ ಕಾಯಿಲೆಗಳು ಹೆಚ್ಚಳವಾಗುತ್ತಿವೆ. ಜೀವನಶೈಲಿ ಬದಲಾಯಿಸಿಕೊಳ್ಳದಿ
ದ್ದರೆ ಆಸ್ಪತ್ರೆಗಳ ಸಂಖ್ಯೆ ಹೆಚ್ಚಳವಾಗುತ್ತವೆ’ ಎಂದುದತ್ತಾತ್ರೇಯ ಹೊಸಬಾಳೆ ಹೇಳಿದರು.

ಆಸ್ಪತ್ರೆಗೆ ದಾನ ನೀಡಿ:ಇನ್ಫೊಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾ ಮೂರ್ತಿ, ‘ರಾಷ್ಟ್ರೋತ್ಥಾನ ಪರಿಷತ್ತು ಜಾತಿ, ಮತ, ಪಂಥ, ಧರ್ಮದ ಭೇದ–ಭಾವ ಇಲ್ಲದೆಯೇ ಕಾರ್ಯನಿರ್ವಹಿಸಿ, ಸಾಮಾಜಿಕ ಸೇವೆ ಮಾಡುತ್ತಿದೆ. ಸಾಮಾನ್ಯವಾಗಿ ಮಹಿಳೆಯರು ಹಬ್ಬ ಗಳಲ್ಲಿ ಸೀರೆಗಳನ್ನು ಖರೀದಿಸುತ್ತಾರೆ. ಪ್ರತಿವರ್ಷ ಕನಿಷ್ಠ ಒಂದು ಸೀರೆಯ ಹಣವನ್ನು ಆಸ್ಪತ್ರೆಗೆ ದಾನವಾಗಿ ನೀಡಿ ದರೆ ರೋಗಿಗೆ ನೆರವಾಗಲಿದೆ. ಈ ಆಸ್ಪತ್ರೆಯ ಸಂಚಾರ ಕ್ಲಿನಿಕ್ಗೆ ವಾಹನ ವೊಂದನ್ನು ದಾನ ನೀಡುತ್ತೇನೆ’ ಎಂದು ತಿಳಿಸಿದರು.

ನಾರಾಯಣ ಹೆಲ್ತ್ನ ಅಧ್ಯಕ್ಷ
ಡಾ. ದೇವಿಪ್ರಸಾದ್ ಶೆಟ್ಟಿ, ‘ನಮ್ಮ ದೇಶವು ಹೆಚ್ಚಿನ ಸಂಖ್ಯೆಯಲ್ಲಿ ವೈದ್ಯರನ್ನು ಸೃಷ್ಟಿಸುತ್ತಿದೆ. ಇಲ್ಲಿನ ವೈದ್ಯರಿಗೆ ಜಗತ್ತಿನಾದ್ಯಂತ ಬೇಡಿಕೆಯಿದೆ. ಪ್ರತಿ ವರ್ಷ ಎರಡು ಲಕ್ಷ ಶುಶ್ರೂಷಕ
ರನ್ನು ನಾವು ತರಬೇತಿಗೊಳಿಸುತ್ತಿ
ದ್ದೇವೆ. ಬಡ ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ಒದಗಿಸಲು ‘ಆಯುಷ್ಮಾನ್ ಭಾರತ’ ಯೋಜನೆ ಸಹಕಾರಿ. ಇಲ್ಲಿನ ಸೌಲಭ್ಯ, ಯೋಜನೆಗಳ ಬಗ್ಗೆ ಬಡ ಜನರಿಗೆ ಸಮರ್ಪಕ ಮಾಹಿತಿಯಿಲ್ಲ. ಇದರಿಂದಾಗಿ ಕೆಲವರು ವೈದ್ಯಕೀಯ ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ’ ಎಂದು ಹೇಳಿದರು.

ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.