ಬೆಂಗಳೂರು: ಶಾಂತಿ ಹೋರಾಟಗಾರ, ವಿಶ್ವವಿಖ್ಯಾತ ಸಂಗೀತಗಾರ ಪಾಲ್ ರೋಬ್ಸನ್ ಅವರ 125ನೇ ಜನ್ಮ ವಾರ್ಷಿಕೋತ್ಸವದ ಅಂಗವಾಗಿ ಆಲ್ ಇಂಡಿಯಾ ಪೀಸ್ ಆಂಡ್ ಸಾಲಿಡಾರಿಟಿ ವತಿಯಿಂದ ಜೂನ್ 24ರಂದು ಬೆಳಿಗ್ಗೆ 10.30ಕ್ಕೆ ಕರ್ನಾಟಕ ಚಿತ್ರಕಲಾ ಪರಿಷತ್ತಿನ ದೇವರಾಜ ಅರಸ್ ಸಭಾಂಗಣದಲ್ಲಿ ಸಮಾವೇಶ ಹಮ್ಮಿಕೊಳ್ಳಲಾಗಿದೆ.
ಶಾಂತಿ ಮತ್ತು ಅಧ್ಯಾತ್ಮದೊಂದಿಗೆ ಈ ಸಮಾವೇಶ ನಡೆಯಲಿದ್ದು, ವಿದ್ವಾಂಸರು, ಸಂಗೀತಗಾರರು, ಶಾಂತಿಯಲ್ಲಿ ಆಸಕ್ತಿ ಇರುವವರು ಭಾಗವಹಿಸುವರು. ಹಿರಿಯ ಶಾಂತಿ ಕಾರ್ಯಕರ್ತ ಇ.ಪಿ. ಮೆನನ್ ‘ಪ್ರಸ್ತುತ ಕಾಲದಲ್ಲಿ ಶಾಂತಿ ಚಳವಳಿಯ ಮಹತ್ವ’ದ ಕುರಿತು ಮಾತನಾಡಲಿದ್ದಾರೆ. ವ್ಯಾಖ್ಯಾನಕಾರ ಉದಯ್ ಬಾಲಕೃಷ್ಣನ್ ‘ಬದಲಾಗುತ್ತಿರುವ ಪ್ರಪಂಚದ ಪರಿಸ್ಥಿತಿ’ ಕುರಿತು ತಿಳಿಸಲಿದ್ದಾರೆ. ಆಶ್ಲೇ ವಿಲಿಯಮ್ಸ್ ಜೋಸೆಫ್ ನಿರ್ದೇಶನದಲ್ಲಿ ಬೆಂಗಳೂರು ಮ್ಯೂಸಿಕಲ್ ಅಸೋಸಿಯೇಷನ್ ವತಿಯಿಂದ ಆಫ್ರಿಕನ್-ಅಮೆರಿಕನ್ ಸ್ಪಿರಿಚ್ಯುವಲ್ಸ್ ಮತ್ತು ಗಾಂಧಿ ಗೀತೆಗಳ ಗಾಯನ ನಡೆಯಲಿದೆ.