ಬೆಂಗಳೂರು: ಜಲಮಂಡಳಿಯು ತೃತೀಯ ಹಂತದ ತ್ಯಾಜ್ಯ ನೀರು ಶುದ್ಧೀಕರಣ ಘಟಕಗಳಿಂದ (ಟಿಟಿಪಿ) ನೀರಿನ ಶುದ್ಧೀಕರಣದ ಕುರಿತ ನೈಜ ಮಾಹಿತಿ ಪಡೆಯಲು ಲಾಲ್‌ಬಾಗ್ ಹಾಗೂ ಕಬ್ಬನ್ ಉದ್ಯಾನಗಳಲ್ಲಿ ‘ಕೊಳಚೆ ನೀರು ಶುದ್ಧೀಕರಣಗುಣಮಟ್ಟ ನಿಗಾ ವ್ಯವಸ್ಥೆ’ಯನ್ನು ಜಾರಿಗೆತರಲು ಮುಂದಾಗಿದೆ.

ಈ ನಿಗಾ ವ್ಯವಸ್ಥೆಯು ನೀರಿನ ಮಾಲಿನ್ಯಕಾರಕ ಅಂಶಗಳ ಕುರಿತು ಮಾಹಿತಿ ನೀಡಲಿದೆ.

ಶುದ್ಧೀಕರಣಗೊಂಡ ಬಹುತೇಕ ನೀರು ಎರಡು ಉದ್ಯಾನಗಳಲ್ಲಿರುವ ಸಸ್ಯಗಳಿಗೆ ನೀರುಣಿಸಲು ಬಳಕೆಯಾಗುತ್ತಿದೆ. ಆದರೂ ಸಹ ಜಲಮಂಡಳಿಗೆ ಉದ್ಯಾನಗಳ ಬೇಡಿಕೆಗೆ ತಕ್ಕಂತೆ ನೀರು ಪೂರೈಸಲು ಸಾಧ್ಯವಾಗುತ್ತಿಲ್ಲ. ಈ ಎರಡು ಉದ್ಯಾನಗಳು ಸುಧಾರಿತ ತಂತ್ರಜ್ಞಾನದ ಟಿಟಿಪಿಗಳನ್ನು ಹೊಂದಿವೆ.

ಲಾಲ್‌ಬಾಗ್‌ನಲ್ಲಿರುವ ಟಿಟಿಪಿ 40 ಲಕ್ಷ ಲೀಟರ್ ಸಾಮರ್ಥ್ಯವನ್ನು ಹೊಂದಿದ್ದರೆ, ಕಬ್ಬನ್ ಉದ್ಯಾನದಲ್ಲಿಯ ಟಿಟಿಪಿ 15 ಲಕ್ಷ ಲೀಟರ್ ಸಾಮರ್ಥ್ಯಹೊಂದಿದೆ. ಶುದ್ಧೀಕರಣಗೊಂಡ ನೀರು ಉದ್ಯಾನಗಳಿಗೆ ಹೋಗುವ ಸ್ಥಳದಲ್ಲಿ ಸೆನ್ಸರ್‌ಗಳನ್ನು ಅಳವಡಿಸಲಾಗಿದೆ. ಆ ಸೆನ್ಸರ್‌ಗಳು ನೀರು ಪರೀಕ್ಷೆಗೊಳಪಡಿಸುತ್ತವೆ. ಅದರ ಮಾಲಿನ್ಯಕಾರಗಳನ್ನು ಪತ್ತೆ ಹಚ್ಚಿ15 ನಿಮಿಷಕ್ಕೊಮ್ಮೆ ಮಾಹಿತಿಯನ್ನು ಜಲಮಂಡಳಿಯ ತಾಂತ್ರಿಕ ತಂಡಕ್ಕೆ ರವಾನೆ ಮಾಡುತ್ತವೆ.

ನೀರನ್ನು ಪರೀಕ್ಷೆಗೆ ಒಳಪಡಿಸುವಾಗ ಪಿಎಚ್ ಮೌಲ್ಯ, ತಾಪಮಾನ,ಜೀವರಾಸಾಯನಿಕ ಆಮ್ಲಜನಕ ಬೇಡಿಕೆ (ಬಿಒಡಿ), ರಾಸಾಯನಿಕ ಆಮ್ಲಜನಕ ಬೇಡಿಕೆ(ಸಿಒಡಿ), ಕರಗಿದ ಆಮ್ಲಜನಕ, ಅಮೋನಿಯಾ(NH-3) ಹಾಗೂ ಇತರ ಅಂಶಗಳನ್ನು ಸೆನ್ಸರ್‌ಗಳು ಪರಿಗಣಿಸುತ್ತವೆ. ನೀರಿನ ಮಾದರಿ ಸಂಗ್ರಹಿಸಿ ಅದನ್ನು ಪ್ರಯೋಗಾಲಯಕ್ಕೆ ತೆಗೆದುಕೊಂಡು ಹೋಗಿ ಪರೀಕ್ಷೆಗೊಳಪಡಿಸಿ ಅದರ ವರದಿ ಕೊಡಲು ಐದು ದಿನ ಬೇಕಾಗುತ್ತಿತ್ತು. ಅದನ್ನು ತಪ್ಪಿಸಲು ಈ ವ್ಯವಸ್ಥೆಯನ್ನು ಜಾರಿಗೆ ತರಲಾಗುತ್ತಿದೆ. ಈ ಸಂಬಂಧ ಜಲಮಂಡಳಿ ಟೆಂಡರ್ ಕರೆದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.