ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೇಸ್ ಕ್ಲಬ್: ಬೆಟ್ಟಿಂಗ್ ಮೊತ್ತದ ಮೇಲಿನ ಜಿಎಸ್‌ಟಿ ರದ್ದು

Last Updated 3 ಜೂನ್ 2021, 23:05 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ಟರ್ಫ್‌ ಕ್ಲಬ್ ಮತ್ತು ಮೈಸೂರು ರೇಸ್‌ ಕ್ಲಬ್‌ ಲಿಮಿಟೆಡ್‌ನಲ್ಲಿ ಸಂಪೂರ್ಣ ಬೆಟ್ಟಿಂಗ್ ಮೊತ್ತದ ಮೇಲೆ ತೆರಿಗೆ ವಿಧಿಸುವ ಕೇಂದ್ರ ಸರ್ಕಾರದ ಕ್ರಮವನ್ನು ರದ್ದುಪಡಿಸಿ ಹೈಕೋರ್ಟ್ ಆದೇಶಿಸಿದೆ.

‘ಬೆಟ್ಟಿಂಗ್ ಮೊತ್ತದ ಮೇಲೆ ಜಿಎಸ್‌ಟಿ ಪಾವತಿಸಬೇಕು’ ಎಂಬ ನಿಯಮ ಪ್ರಶ್ನಿಸಿ ಎರಡು ರೇಸ್ ಕ್ಲಬ್‌ಗಳು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಪೀಠ, ಈ ಆದೇಶ ನೀಡಿದೆ.

ಕೇಂದ್ರ ಸರಕು ಮತ್ತು ಸೇವೆಗಳ 2017ರ ನಿಯಮ 31ಎ(3) ಹಾಗೂ ಕರ್ನಾಟಕ ಸರಕು ಮತ್ತು ಸೇವೆ ತೆರಿಗೆ ನಿಯಮ 31ಎ ಅನ್ನು ಈ ಎರಡು ರೇಸ್ ಕ್ಲಬ್‌ಗಳಿಗೆ ಅನ್ವಯ ಆಗುವಂತೆ ಪೀಠ ರದ್ದುಪಡಿಸಿದೆ.

ಸ್ಟಾಕ್ ಬ್ರೋಕರ್‌ ಅಥವಾ ಟ್ರಾವೆಲ್‌ ಏಜೆಂಟ್‌ಗಳ ರೀತಿಯಲ್ಲಿ ಈ ಎರಡು ರೇಸ್ ಕ್ಲಬ್‌ಗಳು ಕೇವಲ ಕಮಿಷನ್ ಪಡೆದು ಕಾರ್ಯ ನಿರ್ವಹಿಸುತ್ತಿವೆ. ಈ ಕಾರಣದಿಂದ ಈ ಕ್ಲಬ್‌ಗಳು ಸಂಪೂರ್ಣ ಬೆಟ್ಟಿಂಗ್ ಮೊತ್ತದ ಮೇಲೆ ಜಿಎಸ್‌ಟಿ ಪಾವತಿಸಲು ಆಗುವುದಿಲ್ಲ ಎಂದು ಪೀಠ ಅಭಿಪ್ರಾಯಪಟ್ಟಿದೆ.

‘ರೇಸ್ ಚಟುವಟಿಕೆಗಳ ಸಂಬಂಧ ಗಳಿಸುವ ಕಮಿಷನ್ ಮೇಲೆ ಮಾತ್ರ ತೆರಿಗೆ ಪಾವತಿಸಲು ಅವಕಾಶವಿದೆ. ಸಂಪೂರ್ಣ ಬೆಟ್ಟಿಂಗ್ ಮೊತ್ತದ ಮೇಲೆ ತೆರಿಗೆ ಪಾವತಿಸಲು ಅವಕಾಶವಿಲ್ಲ’ ಎಂದು ಅರ್ಜಿದಾರ ಕ್ಲಬ್‌ಗಳು ವಾದ ಮಂಡಿಸಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT