ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಎಂಟಿಸಿಯಲ್ಲಿ ಹಿಂದಿ ಭಾಷೆ ಬಳಕೆ ವಿರೋಧಿಸಿ ಟ್ವಿಟರ್‌ ಅಭಿಯಾನ

Last Updated 31 ಜನವರಿ 2020, 6:21 IST
ಅಕ್ಷರ ಗಾತ್ರ

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ತನ್ನ ಪ್ರಯಾಣಿಕರಿಗೆ ಹಿಂದಿ ಭಾಷೆಯಲ್ಲಿಮಾಹಿತಿ ನೀಡಲು ಮುಂದಾಗಿರುವುದಕ್ಕೆ ವಿರೋಧ ವ್ಯಕ್ತವಾಗಿದೆ.

ಹಿಂದಿ ಹೇರಿಕೆ ವಿರೋಧಿಸಿ #nammaBMTCHindiBeda ಎಂಬ ಹ್ಯಾಶ್‌ಟ್ಯಾಗ್‌ ಅಡಿಯಲ್ಲಿ ಇಂದು ಸಂಜೆ ಆರು ಗಂಟೆಗೆ ಟ್ವಿಟರ್‌ ಅಭಿಯಾನ ನಡೆಸಲು ಕನ್ನಡ ಪರ ಸಂಘಟನೆಗಳು ನಿರ್ಧರಿಸಿವೆ.

ಬಿಎಂಟಿಸಿ ತನ್ನ ಪ್ರಯಾಣಿಕರಿಗೆ ಕನ್ನಡ ಹಾಗೂ ಇಂಗ್ಲಿಷ್‌ ಭಾಷೆಗಳಲ್ಲಿ ಮಾಹಿತಿ ನೀಡಬಹುದು. ಆದರೆ, ಹಿಂದಿ ಭಾಷೆ ಬೇಡವೇ ಬೇಡ ಎಂಬ ಮಾತು ಕೇಳಿಬಂದಿದೆ.

‘ನಮ್ಮ ಮೆಟ್ರೋನವರು ಅನಾವಶ್ಯಕವಾಗಿ ಹಿಂದಿ ಬಳಸಿದ್ದಾಯಿತು, ಈಗ ಬಿಎಂಟಿಸಿ ಅವರು ಹಿಂದಿ ಬಳಸುತ್ತಾರೆಂತೆ. ಕನ್ನಡಿಗರು ಇನ್ನೊಂದು ಸುತ್ತಿನ ಹೋರಾಟಕ್ಕೆ ತಯಾರಾಗಬೇಕಿದೆ’ ಎಂದು ಬನವಾಸಿ ಬಳಗದ ಅರುಣ್‌ ಜಾವಗಲ್‌ ತಿಳಿಸಿದ್ದಾರೆ.

‘ಬೇಡದ ಹಿಂದಿ ಬಳಕೆಯ ವಿರುದ್ಧ ಟ್ವಿಟ್ಟರ್ ಅಭಿಯಾನ... ಇಂದು ಸಂಜೆ 6 ರಿಂದ’ ಎಂದು ಕನ್ನಡ ಗ್ರಾಹಕರ ಕೂಟ ತನ್ನ ಟ್ವೀಟ್‌ ಮಾಡಿದೆ.

‘ಒಂದು ದೇಶ ಒಂದು ಭಾಷೆ ಕಡೆಗಿನ ಒಂದು ಹೆಜ್ಜೆ... ಬಿಎಂಟಿಸಿಯಲ್ಲಿ ಹಿಂದಿ... ಇದನ್ನು ಒಂದಾಗಿ ವಿರೋಧಿಸೋಣ...’ ಎಂದು ಆನಂದ್ ಎಂಬುವವರು ತಮ್ಮ ಫೇಸ್‌ಬುಕ್‌ ಪೋಸ್ಟ್‌ನಲ್ಲಿ ಹೇಳಿದ್ದಾರೆ.

ಬಜೆಟ್ ಮಾಹಿತಿಗೆ: www.prajavani.net/budget-2020

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT