ಭಾನುವಾರ, ಮೇ 22, 2022
23 °C

‘ಬೆಂಗಳೂರು ದರ್ಶನ’ ಸಂಪುಟ: ರಿಯಾಯಿತಿ ದರದಲ್ಲಿ ಮಾರಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಉದಯಭಾನು ಕಲಾಸಂಘವು ತನ್ನ 58ನೇ ಸಂಸ್ಥಾಪನಾ ದಿನಾಚರಣೆ ಪ್ರಯುಕ್ತ ‘ಬೆಂಗಳೂರು ದರ್ಶನ’ ತ್ರಿವಳಿ ಸಂಪುಟವನ್ನು ರಿಯಾಯಿತಿ ದರದಲ್ಲಿ ಮಾರಾಟ ಮಾಡಲು ನಿರ್ಧರಿಸಿದೆ.

‘ತಲಾ 1 ಸಾವಿರ ಪುಟಗಳು ಹಾಗೂ 7 ಸಾವಿರಕ್ಕೂ ಹೆಚ್ಚು ಚಿತ್ರಗಳನ್ನು ಒಳಗೊಂಡಿರುವ ಈ ಸಂಪುಟಗಳು ನಗರದ ಸಮಗ್ರ ಪರಿಚಯ ನೀಡುವ ಪ್ರಕಟಣೆಗಳಾಗಿವೆ. ಈ ಗ್ರಂಥಗಳ ಮುಖಬೆಲೆ ₹3,750. ಓದುಗರ ಅನುಕೂಲಕ್ಕಾಗಿ ಇವುಗಳನ್ನು ₹2 ಸಾವಿರಕ್ಕೆ ಒದಗಿಸಲಾಗುತ್ತಿದೆ. ಗ್ರಂಥ ಖರೀದಿಸುವವರಿಗೆ 3 ಸಂಪುಟಗಳ ಡಿವಿಡಿಗಳನ್ನು ₹300ಕ್ಕೆ ನೀಡಲಾಗುತ್ತದೆ’ ಎಂದು ಪ್ರಕಟಣೆ ತಿಳಿಸಿದೆ.

‘ಈ ಮೂರೂ ಸಂಪುಟಗಳಲ್ಲಿ ಇತಿಹಾಸ, ಉದ್ಯಮ, ವಾಣಿಜ್ಯ, ಕಾನೂನು ಸುವ್ಯವಸ್ಥೆ, ಮಾಧ್ಯಮಗಳು, ಸಾರಿಗೆ, ನಗರಪಾಲಿಕೆ, ಆಡಳಿತ, ಸಾಹಿತ್ಯ, ಸಂಸ್ಕೃತಿ, ಕಲೆ, ಪತ್ರಿಕೋದ್ಯಮ, ಶಿಕ್ಷಣ, ಆರೋಗ್ಯ, ಕ್ರೀಡೆ, ಕೃಷಿ ಹೀಗೆ ಹಲವು ಕ್ಷೇತ್ರಗಳಿಗೆ ಸಂಬಂಧಿಸಿದ 22 ಅಧ್ಯಾಯಗಳಿವೆ. 300ಕ್ಕೂ ಹೆಚ್ಚು ತಜ್ಞರು ಹಾಗೂ ವಿದ್ವಾಂಸರ ಲೇಖನಗಳನ್ನು ಇದು ಒಳಗೊಂಡಿದೆ. ಬೆಂಗಳೂರಿನ ಸಮಗ್ರ ನೋಟವನ್ನು ಈ ಪುಸ್ತಕ ತೆರೆದಿಡಲಿದೆ’ ಎಂದು ಹೇಳಿದೆ.

ಆಸಕ್ತರು, ಉದಯಭಾನು ಕಲಾಸಂಘ, ಗವಿಪುರ ಸಾಲು ಛತ್ರಗಳ ಎದುರು, ರಾಮಕೃಷ್ಣ ಮಠ ಬಡಾವಣೆ, ಕೆಂಪೇಗೌಡ ನಗರ, ಬೆಂಗಳೂರು–560019 ಈ ವಿಳಾಸಕ್ಕೆ ಭೇಟಿ ನೀಡಿ ಪ್ರತಿಗಳನ್ನು ಕೊಂಡುಕೊಳ್ಳಬಹುದು.

ಹೆಚ್ಚಿನ ಮಾಹಿತಿಗೆ: 080–26609343 ಅಥವಾ 26601831.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.