ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಎಲೆಕ್ಟ್ರೊ ಹೊಮಿಯೋಪತಿ’ ಮಾನ್ಯತೆಗೆ ಆಗ್ರಹ

Published 21 ಸೆಪ್ಟೆಂಬರ್ 2023, 16:12 IST
Last Updated 21 ಸೆಪ್ಟೆಂಬರ್ 2023, 16:12 IST
ಅಕ್ಷರ ಗಾತ್ರ

ಬೆಂಗಳೂರು: ‘ಎಲೆಕ್ಟ್ರೊ ಹೊಮಿಯೋಪತಿ ವೈದ್ಯಕೀಯ ಚಿಕಿತ್ಸಾ ಪದ್ಧತಿಗೆ ರಾಜ್ಯದಲ್ಲಿ ಮಾನ್ಯತೆ ನೀಡಬೇಕು’ ಎಂದು ಆಗ್ರಹಿಸಿ ಎಲೆಕ್ಟ್ರೊ ಹೊಮಿಯೋಪತಿ ವೈದ್ಯರು, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ಗುರುವಾರ ಮನವಿ ಸಲ್ಲಿಸಿದ್ದಾರೆ.

ವಿಧಾನಸೌಧದಲ್ಲಿ ಸಚಿವರನ್ನು ಭೇಟಿಯಾದ ವೈದ್ಯರು, ‘ಎಲೆಕ್ಟ್ರೊ ಹೊಮಿಯೋಪತಿ ಚಿಕಿತ್ಸಾ ಪದ್ಧತಿಗೆ ರಾಜಸ್ಥಾನದಲ್ಲಿ ಈಗಾಗಲೇ ಮಾನ್ಯತೆ ನೀಡಲಾಗಿದೆ. ಪಂಜಾಬ್, ಉತ್ತರ ಪ್ರದೇಶ, ದೆಹಲಿ, ಗುಜರಾತ್, ಬಿಹಾರ್, ಪಶ್ಚಿಮ ಬಂಗಾಳ, ತಮಿಳುನಾಡು ಹಾಗೂ ಮಹಾರಾಷ್ಟ್ರದಲ್ಲೂ ಸರ್ಕಾರಗಳು ಚಿಕಿತ್ಸಾ ಪದ್ಧತಿಗೆ ಸಹಕಾರ ನೀಡುತ್ತಿವೆ’ ಎಂದು ತಿಳಿಸಿದ್ದಾರೆ.

‘1865ರಲ್ಲಿ ಇಟಲಿಯ ಡಾ. ಕೌಂಟ ಸೀಸರ್ ಮ್ಯಾಟೆ ಅವರು ಆವಿಷ್ಕರಿಸಿದ ಎಲೆಕ್ಟ್ರೊ ಹೊಮಿಯೋಪತಿಯಲ್ಲಿ ಕ್ಯಾನ್ಸರ್ ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ ಇದೆ. ರಾಜ್ಯದಲ್ಲಿ ಸುಮಾರು 5 ಸಾವಿರ ವೈದ್ಯರು, ಇದೇ ಪದ್ಧತಿಯಲ್ಲಿ ಪದವಿ ಪಡೆದಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ರಾಸಾಯನಿಕ ಮುಕ್ತ ಔಷಧವನ್ನು ಕಡಿಮೆ ದರಕ್ಕೆ ನೀಡುತ್ತಿದ್ದಾರೆ’ ಎಂದು ವೈದ್ಯರು ಹೇಳಿದ್ದಾರೆ.

‘ಈ ಚಿಕಿತ್ಸಾ ಪದ್ಧತಿ ಜಾರಿ ಬಗ್ಗೆ ಸುಪ್ರೀಂಕೋರ್ಟ್ ಸಹ ಆದೇಶ ಹೊರಡಿಸಿದೆ. ಹೀಗಾಗಿ, ಸ್ವತಂತ್ರ ಮಂಡಳಿಯೊಂದನ್ನು ಸ್ಥಾಪಿಸಿ ಹೊಸ ನಿಯಮಗಳನ್ನು ರೂಪಿಸಬೇಕು. ಈ ಮೂಲಕ ಎಲೆಕ್ಟ್ರೊ ಹೊಮಿಯೋಪತಿ ವೈದ್ಯರಿಗೆ ಮಾನ್ಯತೆ ನೀಡಬೇಕು.

ಮನವಿ ಸ್ವೀಕರಿಸಿದ ದಿನೇಶ್ ಗುಂಡೂರಾವ್, ಎಲೆಕ್ಟ್ರೊ ಹೊಮಿಯೋಪತಿ ಚಿಕಿತ್ಸೆ ಪದ್ಧತಿ ಮಾನ್ಯತೆ ಬಗ್ಗೆ ಪರಿಶೀಲಿಸುವುದಾಗಿ ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT