ಬೆಂಗಳೂರು: ಇಲ್ಲಿನ ಯುನೈಟೆಡ್ ಕಾಂಪೊಸಿಟ್ ಪಿಯು ಕಾಲೇಜಿನಲ್ಲಿ ಡಿ.6ರಂದು ಅಂತರ ಕಾಲೇಜು ಉತ್ಸವ ‘ವೈಬ್ರನ್ಸ್-4’ ಹಮ್ಮಿಕೊಳ್ಳಲಾಗಿದೆ.

ಪ್ರತಿಭೆ, ಕಲಾ ಸೃಜನಶೀಲತೆ ಮತ್ತು ಯುವಶಕ್ತಿಯ ಸಂಭ್ರಮವನ್ನು ಒಂದೇ ವೇದಿಕೆಗೆ ತರಲಾಗುತ್ತಿದ್ದು, ‘ಹೈ ಆನ್ ಲೈಫ್’ ಶೀರ್ಷಿಕೆ ಅಡಿ ನಡೆಯುತ್ತಿರುವ ಈ ಅಭಿಯಾನ ವಿದ್ಯಾರ್ಥಿ ಚೈತನ್ಯ, ಧನಾತ್ಮಕತೆ ಹಾಗೂ ಜೀವನೋತ್ಸಾಹದ ರೂಪಕವಾಗಿದೆ. ಉತ್ಸವದ ಆರಂಭದಲ್ಲಿ 25 ಮೀಟರ್ ಬಟ್ಟೆಯಲ್ಲಿ ವಿದ್ಯಾರ್ಥಿಗಳ ಹಸ್ತಮುದ್ರೆಗಳನ್ನು ಒತ್ತಿದರು. ಇದು ವಿದ್ಯಾರ್ಥಿಗಳ ಏಕತೆಯ ಪ್ರತೀಕವಾಗಿತ್ತು ಎಂದು ಕಾಲೇಜು ಆಡಳಿತ ಮಂಡಳಿ ಹೇಳಿದೆ.

ಡಿ.6ರಂದು ವೇದಿಕೆಯ ಮೇಲೆ ಗುಂಪು ನೃತ್ಯ, ಫ್ಯಾಷನ್ ಶೋ, ಏಕಾಂಕ ನೃತ್ಯ, ಮತ್ತು ಬ್ಯಾಂಡ್ಸ್ ಬ್ಯಾಟಲ್, ವೇದಿಕೆಯ ಹೊರಗೆ ಫನ್ ಫ್ಲ್ಯಾಷಸ್, ಡಿಜಿಟಲ್ ಡಿಲೈಟ್ ಸೇರಿದಂತೆ ಹಲವು ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಸಂಜೆ ಸಂಗೀತ ಕಾರ್ಯಕ್ರಮಗಳು ನಡೆಯಲಿವೆ ಎಂದು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.