ಭಾನುವಾರ, ಜುಲೈ 25, 2021
25 °C
ದೇಶದ ಖ್ಯಾತ ಸಂಗೀತಗಾರರು, ಕಲಾವಿದರ, ಪರಿಸರವಾದಿಗಳಿಂದ ಆನ್‌ಲೈನ್‌ನಲ್ಲಿ ಕಾರ್ಯಕ್ರಮ

ಪರಿಸರ ದಿನಕ್ಕೆ ‘ಪರ್ಯಾಯ–20’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

vinay shinde

ಬೆಂಗಳೂರು: ‌ಪರಿಸರ ದಿನದ ಅಂಗವಾಗಿ ನಗರದ ವಿಮೊವೆ ಫೌಂಡೇಷನ್ ಶುಕ್ರವಾರ (ಜೂನ್‌ 5) ‘ಪರ್ಯಾಯ–20’ (ಆಲ್ಟರ್ನೇಟಿವ್‌–20) ಎಂಬ ಸಾಮಾಜಿಕ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿದೆ.

‘ದೇಶದ ಪ್ರಮುಖ ಸಂಗೀತಗಾರರು, ಪರಿಸರವಾದಿಗಳು, ಸೃಜನಶೀಲ ಕಲಾವಿದರು ಸೇರಿದಂತೆ ಜಾಗತಿಕವಾಗಿ ಬದಲಾವಣೆಗೆ ಕಾರಣವಾಗುವಂತಹ 20 ಗಣ್ಯವ್ಯಕ್ತಿಗಳು ಆನ್‌ಲೈನ್‌ನಲ್ಲಿ ಕಾರ್ಯಕ್ರಮ ನೀಡಲಿದ್ದಾರೆ. ‘ಪರಿಸರ ಮತ್ತು ಮನುಕುಲ’ ವಿಷಯದಡಿ ಈ ಕಾರ್ಯಕ್ರಮ ನಡೆಯಲಿದ್ದು, ಇವರೆಲ್ಲರೂ ನೇರಪ್ರಸಾರದಲ್ಲಿ ಮಾತನಾಡಲಿದ್ದಾರೆ. ಸಂಗೀತದೊಂದಿಗೆ ಸಂದೇಶವನ್ನೂ ನೀಡಲಿದ್ದಾರೆ’ ಎಂದು ಫೌಂಡೇಷನ್‌ನ ಸ್ಥಾಪಕ ವಿನಯ್‌ ಶಿಂಧೆ ತಿಳಿಸಿದ್ದಾರೆ.

ಕೊಳಲು ವಾದಕ ರಾಕೇಶ್‌ ಚೌರಾಸಿಯಾ, ಗಾಯಕಿ ವಸುಂಧರಾ ದಾಸ್, ಸಂಗೀತ ನಿರ್ದೇಶಕ ಮರ್ಲಿನ್‌ ಡಿಸೋಜ, ಚಿತ್ರಕಲಾವಿದ ವಿಲಾಸ್‌ ನಾಯಕ್, ಪರಿಸರವಾದಿ ವಿಮಲೆಂದು ಜೈನ್, ಬಯೊಕಾನ್‌ ಮುಖ್ಯಸ್ಥೆ ಕಿರಣ್‌ ಮಜುಂದಾರ್‌ಷಾ, ಮಣಿಪಾಲ್‌ ಗ್ಲೋಬಲ್‌ ಎಜುಕೇಷನ್ ಮುಖ್ಯಸ್ಥ ಟಿ.ವಿ. ಮೋಹನದಾಸ್ ಪೈ, ವಾಸ್ತುಶಿಲ್ಪಿ ತೃಪ್ತಿ, ಶಿಕ್ಷಣ ತಜ್ಞ ಸೋನಮ್‌ ವಾಂಗ್‌ಚುಕ್, ಸಾಮಾಜಿಕ ಕಾರ್ಯಕರ್ತೆ ಚೇತನಾ ಸಿನ್ಹಾ ಒಂದೇ ವೇದಿಕೆಯಡಿ ಕಾಣಿಸಿಕೊಳ್ಳಲಿದ್ದಾರೆ. 

‘ಶುಕ್ರವಾರ ಸಂಜೆ 7ರಿಂದ ರಾತ್ರಿ 9.30ರವರೆಗೆ ಕಾರ್ಯಕ್ರಮ ನಡೆಯಲಿದೆ. ಆಸಕ್ತರು  https://bit.ly/ALTERNATIVE20 ಲಿಂಕ್‌ ಸಂಪರ್ಕಿಸಿ ಹೆಸರು ನೋಂದಾಯಿಸಿಕೊಳ್ಳಬಹುದು’ ಎಂದು ಅವರು ಹೇಳಿದ್ದಾರೆ. 

‘ಪ್ರದರ್ಶನ ಕಲೆಗಳ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯವನ್ನೂ ಮಾಡಲಾಗುತ್ತದೆ. ಈ ಕಾರ್ಯಕ್ರಮದ ಮೂಲಕ ಸಾರ್ವಜನಿಕರಿಂದ ನಿಧಿ ಸಂಗ್ರಹಿಸುವ ಉದ್ದೇಶವಿದೆ. ಆದರೆ, ಇದು ಕಡ್ಡಾಯವಲ್ಲ. ಆಸಕ್ತರು ₹5, ₹10ರಿಂದ ಹಿಡಿದು ಎಷ್ಟು ಬೇಕಾದರೂ ದೇಣಿಗೆ ನೀಡಬಹುದು. ಸಂಗ್ರಹವಾಗುವ ಹಣದಿಂದ ಬಡ ಕುಟುಂಬಗಳಿಗೆ ಸ್ವಚ್ಛತಾ ಕಿಟ್‌ ವಿತರಿಸಲಾಗುವುದು. ಕೊರೊನಾ ಸೋಂಕಿನಿಂದ ರಕ್ಷಣೆ ಪಡೆಯಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಜಾಗೃತಿ ಮೂಡಿಸಲು ಈ ಹಣ ಬಳಸಲಾಗುವುದು’ ಎಂದು ಶಿಂಧೆ ತಿಳಿಸಿದ್ದಾರೆ. 

ಮಾಹಿತಿಗೆ, www.alternative.net.in ಈ ಲಿಂಕ್‌ ಸಂಪರ್ಕಿಸಬಹುದು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು