ಬಸವಕಲ್ಯಾಣ: ‘ನಗರದ ಕ್ರೀಡಾಂಗಣದ ಹಿಂದಿರುವ ಸರ್ವೆ ನಂ.141ರಲ್ಲಿನ 10 ಎಕರೆ ಜಮೀನಿನಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಜೀವನ ಮತ್ತು ಸಾಧನೆ ಬಿಂಬಿಸುವ ಶಿವಸೃಷ್ಟಿ ನಿರ್ಮಾಣಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆಯವರು ₹2 ಕೋಟಿ ಅನುದಾನ ನೀಡಿದ್ದಾರೆ’ ಎಂದು ಶಿವಸೃಷ್ಟಿ ಸಮಿತಿ ಕಾರ್ಯದರ್ಶಿ ತಾತೇರಾವ್ ಪಾಟೀಲ ಮಂಗಳೂರ ತಿಳಿಸಿದ್ದಾರೆ.

ನಗರದ ಶಿವಸೃಷ್ಟಿ ಜಾಗದ ಆವರಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ರಾಜಮಾತಾ ಜೀಜಾಮಾತಾ ಜಯಂತಿಯಲ್ಲಿ ಅವರು ಮಾತನಾಡಿದರು.

‘ಶಾಸಕ ಶರಣು ಸಲಗರ ಸಹ ₹1 ಕೋಟಿ ಅನುದಾನ ಒದಗಿಸಿದ್ದಾರೆ. ಮಾಜಿ ಕೇಂದ್ರ ಸಚಿವ ಭಗವಂತ ಖೂಬಾ ಅವರ ಪ್ರಯತ್ನದಿಂದ 10 ಎಕರೆ ಜಮೀನು ದೊರೆತಿದೆ. ವಿಧಾನ ಪರಿಷತ್ ಸದಸ್ಯ ಎಂ.ಜಿ.ಮುಳೆ ಅವರು ಇದರ ರೂಪುರೇಷೆ ಸಿದ್ಧಪಡಿಸಿದ್ದರು. ರಾಜ್ಯದ ಹಿಂದಿನ ಸರ್ಕಾರ ₹10 ಕೋಟಿ ಮಂಜೂರು ಮಾಡಿತ್ತು. ಒಂದು ವೇಳೆ ಈ ಅನುದಾನ ಬಿಡುಗಡೆಯಾದರೆ ಕೆಲಸ ಶೀಘ್ರದಲ್ಲಿ ಆರಂಭ ಆಗಲಿದೆ’ ಎಂದರು.

ಕರ್ನಾಟಕ ಕ್ಷತ್ರೀಯ ಮರಾಠಾ ಪರಿಷತ್ತಿನ ತಾಲ್ಲೂಕು ಘಟಕದ ಅಧ್ಯಕ್ಷ ವಿ.ಟಿ.ಶಿಂಧೆ, ಮುಖಂಡ ದತ್ತಾತ್ರಿ ಧೂಳೆಪಾಟೀಲ, ಸದಾನಂದ ಬಿರಾದಾರ, ಪೃಥ್ವಿಗಿರಿ ಗೋಸ್ವಾಮಿ, ರಾಜಕುಮಾರ ಭೋಸ್ಲೆ, ಭಾನುದಾಸ ಪಾಟೀಲ ಮಡಕೀಕರ್, ಭೀಮ ಶಿಂಧೆ, ದೀಪಕ ಕೋಲೆ, ಪಂಡಿತ ಪಾಟೀಲ, ದೀಪಕರಾವ್, ಭೀಮ ಶಿಂಧೆ, ಗೋವಿಂದ ಮೋರೆ, ಅಣ್ಣಾರಾವ್ ಪಾಟೀಲ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.