ಬೀದರ್: ಕರ್ನಾಟಕದ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ ಜಯಂತಿಯನ್ನು ನಗರ ಸೇರಿದಂತೆ ಜಿಲ್ಲೆಯಾದ್ಯಂತ ಬುಧವಾರ ಸಡಗರ, ಸಂಭ್ರಮ ಹಾಗೂ ಶ್ರದ್ಧಾ, ಭಕ್ತಿಯಿಂದ ಆಚರಿಸಲಾಯಿತು.

ನಗರದ ಹಾರೂರಗೇರಿ, ಓಲ್ಡ್ ಸಿಟಿಯ ಬಸವ ಮಂಟಪ, ಆದರ್ಶ ಕಾಲೊನಿಯ ಶರಣ ಉದ್ಯಾನ, ಪಾಪನಾಶದ ಬಸವಗಿರಿ, ಬಸವ ಕೇಂದ್ರ, ರಾಷ್ಟ್ರೀಯ ಬಸವ ದಳದಿಂದ ಬಸವೇಶ್ವರರ ತೊಟ್ಟಿಲು ಕಾರ್ಯಕ್ರಮ ನೆರವೇರಿಸಲಾಯಿತು. ಬಸವಣ್ಣನವರ ಭಾವಚಿತ್ರಕ್ಕೆ ಪೂಜೆ ನೆರವೇರಿಸಿ, ಜಯಘೋಷ ಹಾಕಿದರು. ಅಲಂಕರಿಸಿದ ವಾಹನದಲ್ಲಿ ಬಸವೇಶ್ವರರ ಭಾವಚಿತ್ರ ಇರಿಸಿ, ಮೆರವಣಿಗೆ ಮಾಡಿದರು. ಗಾಂಧಿ ಗಂಜ್ನಲ್ಲಿ ಪಲ್ಲಕ್ಕಿ ಮೆರವಣಿಗೆ ನೆರವೇರಿಸಿದರು. ಮಹಿಳೆಯರು ಕೋಲಾಟ ಆಡಿ ಗಮನ ಸೆಳೆದರೆ, ಪುರುಷರು ವಚನ ಸಂಗೀತಕ್ಕೆ ಹೆಜ್ಜೆ ಹಾಕಿದರು. ಗಾಂಧಿ ಗಂಜ್ ಸೇರಿದಂತೆ ಹಲವು ಕಡೆಗಳಲ್ಲಿ ಅನ್ನದಾಸೋಹದ ವ್ಯವಸ್ಥೆ ಮಾಡಲಾಗಿತ್ತು. ದಿನವಿಡೀ ವಿವಿಧ ಕಡೆಗಳಿಂದ ಜನ ಬಸವೇಶ್ವರ ವೃತ್ತಕ್ಕೆ ತೆರಳಿ, ಪುತ್ಥಳಿಗೆ ಮಾಲಾರ್ಪಣೆ ಮಾಡಿ, ಸೆಲ್ಫಿ, ಛಾಯಾಚಿತ್ರ ತೆಗೆದುಕೊಂಡರು.

ಜಿಲ್ಲಾಡಳಿತ ಹಾಗೂ ಬಸವ ಜಯಂತಿ ಉತ್ಸವ ಸಮಿತಿ ಸಹಯೋಗದಲ್ಲಿ ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ, ಪೌರಾಡಳಿತ ಸಚಿವ ರಹೀಂ ಖಾನ್ ಅವರು ಬಸವೇಶ್ವರರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಮಾಲಾರ್ಪಣೆ ಮಾಡಿದರು. ಬಳಿಕ ಕಾರ್ಯಕ್ರಮ ಉದ್ಘಾಟಿಸಿದರು.

ಆನಂತರ ನಗರದ ಬಸವೇಶ್ವರ ವೃತ್ತದಲ್ಲಿ ಪುತ್ಥಳಿಗೆ ಸಚಿವದ್ವಯರು ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು. ಸಚಿವ ಈಶ್ವರ ಬಿ. ಖಂಡ್ರೆಯವರು ಷಟಸ್ಥಲ ಧ್ವಜಾರೋಹಣ ನೆರವೇರಿಸಿದರು. ಬಳಿಕ ವಚನ ಸಂಗೀತಕ್ಕೆ ಇಬ್ಬರು ಸಚಿವರು ಭಕ್ತಿಭಾವದಿಂದ ಹೆಜ್ಜೆ ಹಾಕಿದರು.

ಬಳಿಕ ಮಾತನಾಡಿದ ಸಚಿವ ಈಶ್ವರ ಬಿ. ಖಂಡ್ರೆ, ‘ಜಗತ್ತಿನಲ್ಲಿ ಹೆಣ್ಣು, ಹೊನ್ನು ಹಾಗೂ ಮಣ್ಣಿಗಾಗಿ ಸಾಕಷ್ಟು ಕ್ರಾಂತಿಗಳು ನಡೆದಿವೆ. ಆದರೆ, ಸರ್ವರಿಗೂ ಸಮಾನತೆ ಕಲ್ಪಿಸಲು ನಡೆದದ್ದು ಕಲ್ಯಾಣ ಕ್ರಾಂತಿ. ಬಸವಾದಿ ಶಿವಶರಣರು ಸಕಲ ಜೀವಾತ್ಮರಿಗೆ ಲೇಸು ಬಯಸಿದವರು. ಅವರು ಕೊಟ್ಟ ವಚನ ಸಾಹಿತ್ಯದಲ್ಲಿ ಎಲ್ಲವೂ ಇದೆ. ಸಾಮಾಜಿಕ ನ್ಯಾಯಕ್ಕೆ ಹೆಚ್ಚಿನ ಮಹತ್ವ ಕೊಟ್ಟರು. ಅವರ ತತ್ವಾದರ್ಶಗಳ ಹಾದಿಯಲ್ಲಿ ನಾವೆಲ್ಲರೂ ಮುನ್ನಡೆಯಬೇಕಿದೆ’ ಎಂದು ತಿಳಿಸಿದರು.

‘ನಾವೆಲ್ಲರೂ ವಚನಗಳನ್ನು ಹೇಳುತ್ತೇವೆ. ಆದರೆ, ಅವುಗಳಂತೆ ನಡೆಯುವುದು ಕಷ್ಟಸಾಧ್ಯ. ಆದರೆ, ಆ ನಿಟ್ಟಿನಲ್ಲಿ ನಡೆಯಲು ಪ್ರಯತ್ನಿಸಬೇಕು. ಆಗ ಬಸವ ಜಯಂತಿ ಆಚರಿಸಿದರೆ ಸಾರ್ಥಕವಾಗುತ್ತದೆ. ಜಾತಿರಹಿತ, ಶೋಷಣೆ ರಹಿತ ಸಮಾಜ ನಿರ್ಮಿಸಲು ಶ್ರಮಿಸೋಣ’ ಎಂದರು.

ನಗರಸಭೆ ಅಧ್ಯಕ್ಷ ಮುಹಮ್ಮದ್ ಗೌಸ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಗಿರೀಶ ಬದೋಲೆ, ಹೆಚ್ಚುವರಿ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಅಮೃತರಾವ್ ಚಿಮಕೋಡೆ, ಬಸವ ಜಯಂತಿ ಉತ್ಸವ ಸಮಿತಿ ಅಧ್ಯಕ್ಷ ಜೈರಾಜ್ ಖಂಡ್ರೆ, ಪ್ರಧಾನ ಕಾರ್ಯದರ್ಶಿ ಸಂಜುಕುಮಾರ ಪಾಟೀಲ, ನಗರಸಭೆ ಸದಸ್ಯೆ ಉಲ್ಲಾಸಿನಿ, ಡಿಸಿಸಿ ಬ್ಯಾಂಕ್ ನಿರ್ದೇಶಕಿ ಶಕುಂತಲಾ ಬೆಲ್ದಾಳೆ, ಮುಖಂಡರಾದ ವಿಜಯಕುಮಾರ ಪಾಟೀಲ ಖಾಜಾಪೂರ, ಸುರೇಶ ಸ್ವಾಮಿ, ಶರಣಪ್ಪ ಮಿಠಾರೆ, ಆನಂದ ದೇವಪ್ಪ, ಬಸವರಾಜ ಭತಮುರ್ಗೆ, ಗುರುನಾಥ ಕೊಳ್ಳೂರ, ಬಂಡೆಪ್ಪ ಕಾಶೆಂಪುರ್, ರಮೇಶ ಪಾಟೀಲ ಸೋಲಪೂರ, ಸುರೇಶ ಚನಶೆಟ್ಟಿ, ಸಂಜಯ್ ಜಾಹಗೀರದಾರ್, ವಿಠ್ಠಲದಾಸ ಪ್ಯಾಗೆ, ಮಾರುತಿ ಬೌದ್ಧೆ, ಗಣೇಶ ಬಿರಾದಾರ, ವಿವೇಕ ಪಟ್ನೆ, ಬಾಬುವಾಲಿ, ಪಂಡಿತರಾವ್ ಚಿದ್ರಿ, ಈಶ್ವರ ಸಿಂಗ್ ಠಾಕೂರ್, ವಿಜಯಕುಮಾರ ಸೋನಾರೆ ಮತ್ತಿತರರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.