ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್: ಯುದ್ಧ ವಿಮಾನ ಹಾರಿಸಿದ ಅಪ್ಪ, ಮಗಳು

Last Updated 6 ಜುಲೈ 2022, 15:41 IST
ಅಕ್ಷರ ಗಾತ್ರ

ಬೀದರ್: ಇಲ್ಲಿಯ ವಾಯುಪಡೆ ತರಬೇತಿ ಕೇಂದ್ರದಲ್ಲಿ ಜುಲೈ 5ರಂದು ಅಪ್ಪ- ಮಗಳು ‌‘ಹ್ವಾಕ್ ಸಾರ್ಟಿ’ ಯುದ್ಧ ವಿಮಾನ ಹಾರಿಸುವ ಮೂಲಕ ದಾಖಲೆ ನಿರ್ಮಿಸಿದರು.

ಐಎಎಫ್ ಏರ್‌ ಕಮಾಡೋರ್‌ ಸಂಜಯ್ ಶರ್ಮಾ‌ ಮತ್ತು ಅವರ ಪುತ್ರಿ ಅನನ್ಯಾ ಶರ್ಮಾ ಸಹ ಪೈಲಟ್ ಆಗಿ ಒಂದೇ ಮಾದರಿಯ ‘ಹ್ವಾಕ್ ಸಾರ್ಟಿ’ ಯುದ್ಧ ವಿಮಾನ ಹಾರಿಸಿದರು.

‘ಏರ್ ಕಮಾಡೋರ್ ಸಂಜಯ್ ಶರ್ಮಾ 1989ರಲ್ಲಿ ಐಎಎಫ್‌ನ ಫೈಟರ್ ಸ್ಟ್ರೀಮ್‌ಗೆ ನಿಯೋಜನೆಗೊಂಡಿದ್ದರು. ಅವರು ಮಿಗ್-21 ಸ್ಕ್ವಾಡ್ರನ್ ಮತ್ತು ಮುಂಚೂಣಿ ಯುದ್ಧ ವಿಮಾನ ನಿಲ್ದಾಣಕ್ಕೆ ಕಮಾಡೋರ್ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಯುದ್ಧ ವಿಮಾನಗಳ‌ ಕಾರ್ಯಾಚರಣೆ ಅನುಭವ ಹೊಂದಿದ್ದಾರೆ’ ಎಂದು ಮೂಲಗಳು ತಿಳಿಸಿವೆ.

ಎಲೆಕ್ಟ್ರಾನಿಕ್ ಮತ್ತು ಕಮ್ಯುನಿಕೇಷನ್‌ನಲ್ಲಿ ಬಿಟೆಕ್ ಪದವಿ ಪಡೆದಿರುವ ಅನನ್ಯಾ ಐಎಎಫ್‌ನ ತರಬೇತಿಗೆ ಆಯ್ಕೆಯಾಗಿದ್ದಾರೆ. ಡಿಸೆಂಬರ್ 2021ರಲ್ಲಿ ಫೈಟರ್ ಪೈಲಟ್ ಆಗಿ ನೇಮಕಗೊಂಡಿದ್ದಾರೆ.

ವಿಮಾನ ಹಾರಾಟ‌‌ಕ್ಕೂ ಮುನ್ನ ಅವರಿಬ್ಬರೂ ಯುದ್ಧ ವಿಮಾನದ ಎದುರು ನಿಂತು ತೆಗೆದುಕೊಂಡಿರುವ ಚಿತ್ರಗಳು ಈಗ ಎಲ್ಲೆಡೆ ವೈರಲ್ ಆಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT