ಹಿಂಗಾರಿನಲ್ಲೂ ಕಾಡುತ್ತಿರುವ ಮಳೆ
ಮುಂಗಾರಿನಲ್ಲಿ ಹೆಚ್ಚುವರಿ ಮಳೆಯಾದ ಕಾರಣ ಜಿಲ್ಲೆಯ ಬಹುತೇಕ ಬೆಳೆಗಳು ನೆಲಕಚ್ಚಿವೆ. ಹಿಂಗಾರಿನಲ್ಲಾದರೂ ಪರಿಸ್ಥಿತಿ ಸುಧಾರಿಸಬಹುದು ಎಂಬ ನಿರೀಕ್ಷೆಯಲ್ಲಿ ರೈತರಿದ್ದರು. ಆದರೆ, ಅಕ್ಟೋಬರ್ ತಿಂಗಳು ಮುಗಿಯುತ್ತ ಬಂದರೂ ಜಿಲ್ಲೆಯಾದ್ಯಂತ ಮಳೆ ನಿಲ್ಲುವ ಲಕ್ಷಣಗಳು ಗೋಚರಿಸುತ್ತಿಲ್ಲ. ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಸತತವಾಗಿ ಮಳೆ ಸುರಿಯುತ್ತಿರುವ ಕಾರಣ ಹಿಂಗಾರು ಕೃಷಿ ಚಟುವಟಿಕೆಗಳಿಗೆ ಬಹಳ ಹಿನ್ನಡೆ ಉಂಟಾಗಿದೆ. ನೆಲದಲ್ಲಿ ಹೆಚ್ಚಿನ ತೇವಾಂಶ ನೀರು ಸಂಗ್ರಹಗೊಂಡಿರುವುದರಿಂದ ಬಿತ್ತನೆಗೆ ಸಮಸ್ಯೆ ಉಂಟಾಗಿದೆ.