ಬೀದರ್: ನಗರ ಸೇರಿದಂತೆ ಗ್ರಾಮೀಣ ಭಾಗಗಳಲ್ಲಿ ಧಾರಾಕಾರ ಮಳೆ ಮುಂದುವರೆದಿದ್ದು, ಗಣೇಶ ಉತ್ಸವದ ಹಬ್ಬದ ಖರೀದಿಯನ್ನು ಜನ ಮಳೆಯಲ್ಲಿಯೇ ಮಾಡುತ್ತಿದ್ದಾರೆ.

ನಗರದ ಮೋಹನ್ ಮಾರ್ಕೆಟ್, ಶಿವನಗರ, ಮೈಲೂರ್ ಕ್ರಾಸ್, ವಿದ್ಯಾನಗರ, ನೌಬಾದ್ ಸೇರಿದಂತೆ ಹಲವೆಡೆಗಳಲ್ಲಿ ಜನ ಗಣಪನ ಮೂರ್ತಿ, ಬಾಳೆದಿಂಡು, ಕಬ್ಬು, ಹೂ ಸೇರಿದಂತೆ ಇತರೆ ಅಲಂಕಾರಿಕ ವಸ್ತುಗಳನ್ನು ಖರೀದಿಸುತ್ತಿದ್ದಾರೆ. ಕೊಡೆಗಳೊಂದಿಗೆ ಮಾರುಕಟ್ಡೆಗೆ ಬಂದಿದ್ದಾರೆ.

ಮಧ್ಯಾಹ್ನವಾದರೂ ಮಳೆ ಬಿಡುವು ಕೊಡಬಹುದು ಎಂದು ಜನ ನಿರೀಕ್ಷಿಸಿದ್ದರು. ಆದರೆ,ಎಡೆಬಿಡದೆ ಮಳೆ ಸುರಿಯುತ್ತಿರುವ ಕಾರಣ ಮನೆ ಬಿಟ್ಟು ಹೊರಬಂದಿದ್ದಾರೆ.

ಆದರೆ, ಹೆಚ್ಚಿನ ಜನ ಮನೆ ಬಿಟ್ಟು ಹೊರಬರದ ಕಾರಣ ವ್ಯಾಪಾರ ಹೇಳಿಕೊಳ್ಳುವಷ್ಟರ ಮಟ್ಟಿಗೆ ಆಗುತ್ತಿಲ್ಲ ಎಂದು ವ್ಯಾಪಾರಿಗಳು ಗೋಳು ತೋಡಿಕೊಂಡಿದ್ದಾರೆ.

ಗಣಪನ ಪ್ರತಿಷ್ಠಾಪನೆಗೆ ವಿವಿಧ ಬಡಾವಣೆಗಳಲ್ಲಿ ಆಯಾ ಗಣೇಶ ಮಂಡಳಿಯವರು ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದ್ದು, ಸಂಜೆ ಪೂಜೆಗೆ ತಯಾರಿ ನಡೆಸಿದ್ದಾರೆ.

ಮಂಗಳವಾರ ದಿನವಿಡೀ ಸುರಿದ ಜಿಟಿಜಿಟಿ ಮಳೆ ರಾತ್ರಿ ಧಾರಾಕಾರ ಸ್ವರೂಪ ಪಡೆಯಿತು. ರಾತ್ರಿಯಿಡೀ ಸುರಿದ ಮಳೆ ಬುಧವಾರವೂ ಒಂದೇ ಸಮನೆ ಸುರಿಯುತ್ತಿರುವ ಕಾರಣ ಜನಜೀವನ ಅಸ್ತವ್ಯಸ್ತಗೊಂಡಿದೆ. ಗಣೇಶ ಚತುರ್ಥಿಯ ರಜಾ ದಿನ ಹಾಗೂ ಮಳೆಯಿಂದಾಗಿ ಹೆಚ್ಚಿನವರು ಹೊರಗೆ ಬರದೆ ಮನೆಗಳಲ್ಲಿಯೇ ಬೆಚ್ಚಗೆ ಕುಳಿತಿದ್ದಾರೆ. ಸತತ ಮಳೆಗೆ ನಗರದ ಪ್ರಮುಖ ರಸ್ತೆಗಳಲ್ಲಿ ನೀರು ಸಂಗ್ರಹೊಂಡಿದ್ದು, ಜನರ ಓಡಾಟಕ್ಕೂ ಸಮಸ್ಯೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.