ಬುಧವಾರ, ಜುಲೈ 28, 2021
21 °C
ಬಿಜೆಪಿ ಕಬ್ಬು ಬೆಳೆಗಾರರ ಪ್ರಕೋಷ್ಟದ ರಾಜ್ಯ ಸಂಚಾಲಕ

ಸರ್ವರ ಏಳಿಗೆ ಸರ್ಕಾರದ ಧ್ಯೇಯ: ಡಿ.ಕೆ.ಸಿದ್ರಾಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಭಾಲ್ಕಿ: ದೇಶದ ಎಲ್ಲ ವರ್ಗದ ಜನರಿಗೆ ಅಗತ್ಯ ಸೌಕರ್ಯಗಳನ್ನು ಕಲ್ಪಿಸುವುದರ ಮೂಲಕ ಸರ್ವರ ಏಳಿಗೆಗೆ ಶ್ರಮಿಸುವುದೇ ಮೋದಿ ಸರ್ಕಾರದ ಮೂಲ ಗುರಿಯಾಗಿದೆ ಎಂದು ಬಿಜೆಪಿ ಕಬ್ಬು ಬೆಳೆಗಾರರ ಪ್ರಕೋಷ್ಟದ ರಾಜ್ಯ ಸಂಚಾಲಕ ಡಿ.ಕೆ.ಸಿದ್ರಾಮ ಹೇಳಿದರು.

ತಾಲ್ಲೂಕಿನ ಗೋರಚಿಂಚೋಳಿ, ಭಾತಂಬ್ರಾ ಗ್ರಾಮಗಳಲ್ಲಿ ಶುಕ್ರವಾರ ಕೇಂದ್ರ ಸರ್ಕಾರದ ಸಾಧನೆಗಳ ಕರಪತ್ರಗಳನ್ನು ಜನರಿಗೆ ಹಂಚಿ ಮಾತನಾಡಿದರು.

ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಒಂದು ವರ್ಷದ ಅವಧಿಯಲ್ಲಿ ರಾಷ್ಟ್ರದ ಜನರ ಅಭ್ಯುದಯಕ್ಕೆ ಕೈಗೊಂಡ ಯೋಜನೆ, ಕೋವಿಡ್-19 ನಿಯಂತ್ರಿಸಲು ಸರ್ಕಾರ ತೆಗೆದುಕೊಂಡ ಕ್ರಮಗಳ ಬಗ್ಗೆ ಸ್ವತಃ ನರೇಂದ್ರ ಮೋದಿ ಅವರೇ ನಾಗರಿಕರಿಗೆ ಬರೆದ ಪತ್ರದ ಕರಪತ್ರಗಳನ್ನು ತಾಲ್ಲೂಕಿನ ಎಲ್ಲ ಗ್ರಾಮಗಳ ನಾಗರಿಕರ ಮನೆ-ಮನೆಗೆ ತಲುಪಿಸುವ ಕಾರ್ಯ ಮಾಡುತ್ತಿದ್ದೇವೆ ಎಂದು ತಿಳಿಸಿದರು.

ಬಡ, ನಿರ್ಗತಿಕ, ದೀನ, ದಲಿತರ ಕಲ್ಯಾಣಕ್ಕಾಗಿ ಸರ್ಕಾರ ಜಾರಿಗೆ ತಂದ ಕಾರ್ಯಕ್ರಮಗಳ ಸಂಪೂರ್ಣ ಲಾಭವನ್ನು ಜನರು ಪಡೆದುಕೊಳ್ಳಬೇಕು ಎಂದು ನುಡಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರಿಹಂತ ಸಾವಳೆ, ದತ್ತು ತುಗಾಂವಕರ್, ಪಂಡಿತ ಶಿರೋಳೆ, ಸಂತೋಷ ಪಾಟೀಲ, ಸೂರಜ್ಸಿಂಗ್ ರಜಪೂತ್, ಶಾಂತವೀರ ಕೇಸ್ಕರ, ಚಂದ್ರಕಾಂತ ಗಾಮಾ, ಪ್ರತಾಪ ಪಾಟೀಲ, ಸತೀಶ ಬಿರಾದರ, ಸಂಗಮೇಶ ಭೂರೆ, ಸತೀಶ ಧರ್ಮಣ್ಣಾ, ವೀರಣ್ಣಾ ಕಾರಬಾರಿ, ಸುರೇಶ ವಾಡೆ ಹಾಗೂ ಸಂಗಮೇಶ ಟೆಂಕಾಳೆ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು