ಬುಧವಾರ, ಮೇ 12, 2021
27 °C
ಸೋಂಕು ಹರಡುವಿಕೆ ತಡೆಗೆ ಕಡ್ಡಾಯವಾಗಿ ಮಾಸ್ಕ್ ಧರಿಸಿ: ಸರಸ್ವತಿ ದೇವಿ

ವಕೀಲರು, ಕೈದಿಗಳಿಗೆ ಕೋವಿಡ್‌ ಲಸಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಮನಾಬಾದ್: ‘ಸರ್ಕಾರದಿಂದ ಉಚಿತವಾಗಿ ಕೋವಿಡ್‌ ಲಸಿಕೆ ನೀಡುತ್ತಿದ್ದರೂ ಲಸಿಕೆ ಪಡೆಯದೆ ಇರುವುದು ತಪ್ಪು. ಪ್ರತಿಯೊಬ್ಬರೂ ಲಸಿಕೆ ಪಡೆಯಬೇಕು’ ಎಂದು ಹಿರಿಯ ಶ್ರೇಣಿ ನ್ಯಾಯಾಧೀಶರಾದ ಸರಸ್ವತಿ ದೇವಿ ತಿಳಿಸಿದರು.

ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ಕೋವಿಡ್ ಲಸಿಕೆ ನೀಡಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಜಗತ್ತಿನಾದ್ಯಂತ ಸಾವಿರಾರು ರೂಪಾಯಿ ಖರ್ಚು ಮಾಡಿದರೂ ಲಸಿಕೆ ದೊರೆಯುತ್ತಿಲ್ಲ. ಇಲ್ಲಿ ಉಚಿತವಾಗಿ ನೀಡಿ ಮನೆ ಬಾಗಿಲಿಗೆ ಬಂದರೂ ನಿರಾಕರಿಸುವುದು ಸರಿಯಲ್ಲ. ಸೋಂಕು ಹರಡುವಿಕೆ ತಡೆಗೆ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಅಂತರ ಕಾಯ್ದುಕೊಳ್ಳಬೇಕು’ ಎಂದರು.

ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ನಾಗನಾಥ ಹುಲಸೂರೆ ಮಾತನಾಡಿ, ‘ಇಲ್ಲಿಯ ಬಾರ್ ಕೌನ್ಸಿಲ್ ವಕೀಲರಿಗೆ ಮತ್ತು ಕಾರಾಗೃಹದ ಕೈದಿಗಳಿಗೆ ಕೋವಿಡ್ ಲಸಿಕೆ ನೀಡಲಾಗಿದೆ’ ಎಂದು ತಿಳಿಸಿದರು.

‘45 ವರ್ಷ ಮೇಲ್ಪಟ್ಟವರು ಸ್ವ-ಇಚ್ಛೆಯಿಂದ ಲಸಿಕೆ ಪಡೆಯಬೇಕು. ಇದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗಿ ಕೊರೊನಾದಿಂದ ಸಂಭವಿಸಬಹುದಾದ ಸಾವು ನೋವು ತಡೆಯಬಹುದು. ಲಸಿಕೆ ಸುರಕ್ಷತೆ ಬಗ್ಗೆ ಅನುಮಾನ ಬೇಡ’ ಎಂದರು.

‘ಯುವಕರು ಪ್ರತಿ ಮನೆಯ ಹಿರಿಯರನ್ನು ಕರೆದುಕೊಂಡು ಬಂದು ಲಸಿಕೆ ಹಾಕಿಸಬೇಕು’ ಎಂದು ಸಲಹೆ ನೀಡಿದರು.

ಕಾರಾಗೃಹ ಮುಖ್ಯ ಅಧೀಕ್ಷಕ ಶಿವಪುತ್ರ, ಬಾರ್ ಕೌನ್ಸಿಲ್ ಕಾರ್ಯದರ್ಶಿ ಹರೀಶ ಅಗಡಿ, ಜೈಲು ಅಧಿಕಾರಿ ಬಸವರಾಜ, ಡಾ.ರೋಹಿತ ರಘೋಜಿ, ಡಾ. ಚಿಮಕೋಡೆ, ಶರಣು, ನಾಗರಾಳೆ ಉಪಸ್ಥಿತರಿದ್ದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು