ಜೆಜೆಎಂ ಕಾಮಗಾರಿಯಲ್ಲಿ ಭಾರಿ ಅಕ್ರಮ
ಔರಾದ್ ಕ್ಷೇತ್ರದಲ್ಲಿ ಜಲ ಜೀವನ ಮಿಷನ್ (ಜೆಜೆಎಂ) ಕಾಮಗಾರಿಯಲ್ಲಿ ಭಾರಿ ಅಕ್ರಮ ಆಗಿದೆ ಎಂದು ಶಾಸಕ ಪ್ರಭು ಚವಾಣ್ ಹೇಳಿದರು. ಅನೇಕ ಗ್ರಾಮಗಳಲ್ಲಿ ಜೆಜೆಎಂ ಕೆಲಸ ಆಗಿದೆ ಎಂದು ಹಣ ಎತ್ತಿಕೊಂಡಿದ್ದಾರೆ. ಆದರೆ ವಾಸ್ತವದಲ್ಲಿ ನೋಡಿದರೆ ಕೆಲ ಕಡೆ ಕಾಮಗಾರಿ ಪೂರ್ಣ ಆಗಿಲ್ಲ. ಪೂರ್ಣ ಆದ ಕಡೆ ನೀರು ಬರುತ್ತಿಲ್ಲ. ಪಿಡಿಒಗಳಿಗೆ ಹಾಗೂ ಸ್ಥಳೀಯ ಪಂಚಾಯಿತಿ ಸದಸ್ಯರಿಗೆ ಹಣ ನೀಡಿ ಕಾಮಗಾರಿ ಪೂರ್ಣ ಆಗಿದೆ ಎಂದು ಸರ್ಕಾರಕ್ಕೆ ಸುಳ್ಳು ಮಾಹಿತಿ ನೀಡಿದ್ದಾರೆ. ಇದರಲ್ಲಿ ಎಇಇ ಹಾಗೂ ಜೆಇಗಳು ಶಾಮಿಲಾಗಿದ್ದಾರೆ. ಆಗಿರುವ ಈ ಲೋಪ ಸರಿಪಡಿಸದೇ ಹೋದರೆ ಬೆಳಗಾವಿ ಅಧಿವೇಶನದಲ್ಲಿ ಪ್ರಶ್ನೆ ಮಾಡುತೇನೆ. ಎಲ್ಲೆಲ್ಲಿ ಜೆಜೆಎಂ ಕೆಲಸ ಲೋಪ ಆಗಿದೆ ಎಂಬುದನ್ನು ಪತ್ತೆ ಮಾಡಿ ಸಂಬಂಧಿತ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಿ ಇದರಲ್ಲಿ ಶಾಮಿಲಾದ ಅಧಿಕಾರಿಗಳನ್ನು ಅಮಾನತು ಮಾಡುವಂತೆ ಜಿಲ್ಲಾ ಪಂಚಾಯತ್ ಸಿಇಒ ಡಾ. ಗಿರೀಶ್ ಬದೋಲೆ ಅವರಿಗೆ ಮೊಬೈಲ್ ಮೂಲಕ ಮಾತನಾಡಿ ತಿಳಿಸಿದರು.